
ದಾವಣಗೆರೆ(ಸೆ. 23): ಭ್ರಷ್ಟಾಚಾರ.. ಸ್ವಜನ ಪಕ್ಷಪಾತ.. ಜಾತೀಯತೆ.. ಗುಂಪುಗಾರಿಕೆ.. ಹೀಗೆ ವಿದ್ಯಾಸಂಸ್ಥೆಗಳಲ್ಲಿ ಏನೆಲ್ಲಾ ಇರಬಾರದೋ ಅವುಗಳನ್ನೇ ಮೂಲ ಮಂತ್ರ ಮಾಡಿಕೊಂಡಿವೆ ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳು. ಈ ಅವ್ಯವಸ್ಥೆಯನ್ನು ನೋಡಿಯೇ ವಿಶ್ವವಿದ್ಯಾಲಯಗಳ ಕುಲಪತಿಗಳೆಲ್ಲಾ ಡಕಾಯಿತರಂತೆ ಕಾಣುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದರು.. ಈಗ ಮತ್ತೆ ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿರುವ ಅವರು ಓರ್ವ ಕುಲಪತಿ, ಕುಲಸಚಿವ ಸೇರಿದಂತೆ ಐವರು ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ..
ದಾವಣಗೆರೆ ವಿಶ್ವವಿದ್ಯಾನಿಲಯ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಸಚಿವರು, ವಿವಿ ಕುಲಪತಿಗಳು ಟಾಯ್ಲೆಟ್ ಬಾತ್ ರೂಂಗಳಲ್ಲಿ ತಿನ್ನುವುದನ್ನು ರೂಢಿಮಾಡಿಕೊಂಡಿರುವುದು ಅಸಹ್ಯಕರ ಬೆಳವಣಿಗೆ.. ರಾಜ್ಯದ ಎಲ್ಲಾ ವಿವಿಗಳಲ್ಲಿ ಒಂದಲ್ಲ ಒಂದು ಹಗರಣ ಇದ್ದೇ ಇದೆ. ಅದಕ್ಕೆಲ್ಲಾ ಸೂಕ್ತ ತನಿಖಾಧಿಕಾರಿ ನೇಮಿಸಿ ಕುಲಪತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಅಂತಾ ಭರವಸೆ ನೀಡಿದರು.
ಇನ್ನು, ಬೆಳಗಾವಿ ವಿಟಿಯು ಹಾಗು ಮೈಸೂರು ವಿವಿ ಅಕ್ರಮದ ಬಗ್ಗೆ ಸುವರ್ಣನ್ಯೂಸ್ ನಿರಂತರ ವರದಿ ಪ್ರಸಾರ ಮಾಡಿತ್ತು. ಇದರ ಪ್ರತಿಫಲವೇ ವಿಟಿಯು ಕುಲಪತಿ ಹಾಗು ಕುಲಸಚಿವರನ್ನು ಉರಳಲ್ಲಿ ಸಿಲುಕಿಸಿದೆ. ಇನ್ನೊಂದೆಡೆ, ಏಕರೂಪ ವಿಶ್ವವಿದ್ಯಾನಿಲಯ ಕಾಯ್ದೆಗೆ ಸರ್ಕಾರ ಮುಂದಾಗಿದ್ದು ಕರಡಿನ ಅಂತಿಮ ರೂಪುರೇಷೆ ಸಿದ್ಧವಾಗಿದೆ.. ಏನೇ ಮಾಡಿದ್ರೂ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಾತ್ರ ಬಳಕೆಯಾಗಲಿ ಅನ್ನೋದೇ ನಮ್ಮ ಆಶಯ ಕೂಡಾ.
ವರದಿ: ವರದರಾಜ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.