
ನವದೆಹಲಿ: ನಗರ ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಖಾಸಗಿ ಕಾರುಗಳಲ್ಲಿ ರೈಡ್-ಶೆರಿಂಗ್’ನ (ಪ್ರಯಾಣ-ಪಾಲುದಾರಿಕೆ) ಸಾಧ್ಯಾಸಾಧ್ಯತೆಗಳನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಪ್ರಯಾಣಿಕರ ಸುರಕ್ಷತೆ, ನಿಯಮಗಳು ಹಾಗೂ ತೆರಿಗೆ ಲೆಕ್ಕಾಚಾರ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೋಂಡು ನೀತಿ ಆಯೋಗವು ತಜ್ಞರ ಅಭಿಪ್ರಾಯ ಕೋರಿದೆ. ರೈಡ್-ಶೇರಿಂಗ್ ವ್ಯವಸ್ಥೆ ಮೂಲಕ ಸಂಚಾರ ದಟ್ಟಣೆ ಮಾತ್ರವಲ್ಲ ಮಾಲಿನ್ಯವನ್ನು ಕೂಡಾ ನಿಯಂತ್ರಿಸಲು ಈ ಕ್ರಮ ಸಹಕಾರಿಯಾಗಬಲ್ಲುದು ಎಂದು ಸರ್ಕಾರ ಅಭಿಪ್ರಾಯಹೊಂದಿದೆ.
ಈ ಯೋಜನೆ ಕಾರ್ಯಗತಗೊಂಡಲ್ಲಿ ಕಮರ್ಶಿಯಲ್ ಲೈಸೆನ್ಸ್’ಗಳಿಗಾಗಿ ಭಾರೀ ಹಣವನ್ನು ತೆರುವ ಅಗತ್ಯವಿಲ್ಲದಿರುದರಿಂದ, ಓಲಾ, ಉಬರ್’ನಂಥ ಸಂಸ್ಥೆಗಳಿಗೆ ಭಾರೀ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಭಾರತೀಯ ಕಾನೂನಿನಲ್ಲಿ ಅವಕಾಶವಿಲ್ಲದಿರುವುದು, ಚಾಲಕನ ಹಾಗೂ ಪ್ರಯಾಣಿಕರ ಸುರಕ್ಷತೆ, ಹಾಗೂ ಆದಾಯ ವಿಂಗಡಣೆ ಮುಂತಾದ ಮಹತ್ವದ ವಿಷಯಗಳಿಗೆ ಅಧ್ಯಯನದಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾ, ಸಿಂಗಾಪುರದಂತಹ ದೇಶಗಳಲ್ಲಿ ಖಾಸಗಿ ವಾಹನಗಳಲ್ಲಿ ರೈಡ್-ಶೇರಿಂಗ್ ಮಾಡಲು ಅವಕಾಶವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.