ಕೇಂದ್ರ ಸರ್ಕಾರಿಂದ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್

By Web DeskFirst Published Nov 16, 2018, 12:35 PM IST
Highlights

ಹೆರಿಗೆ ರಜೆಯನ್ನು ಹೆಚ್ಚುವರಿಯಾಗಿ ನೀಡಬೇಕೆನ್ನುವ ಸಲುವಾಗಿ ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ನಿಟ್ಟಿನಲ್ಲಿ ಇದೀಗ 7 ವಾರಗಳ ವೇತನವನ್ನು ಸರ್ಕಾರವೇ ನೀಡಲು ನಿರ್ಧರಿಸಿದೆ. 

ನವದೆಹಲಿ: ಖಾಸಗಿ ಸಂಸ್ಥೆಗಳಲ್ಲಿ ಮಾಸಿಕ 15 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುತ್ತಿರುವ ಮಹಿಳಾ ಉದ್ಯೋಗಿಗಳ 26 ವಾರಗಳ ಮಾತೃತ್ವ ರಜೆಯ ಪೈಕಿ 7 ವಾರಗಳ  ವೇತನವನ್ನು ಆಯಾ ಕಂಪನಿಗಳಿಗೆ ಸರ್ಕಾರವೇ ಪಾವತಿಸಲಿದೆ ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವಾಲಯ ಘೋಷಣೆ ಮಾಡಿದೆ. 

ಕಳೆದ ವರ್ಷವಷ್ಟೇ ಕೇಂದ್ರ ಸರ್ಕಾರ ವೇತನ ಸಹಿತದ ಮಾತೃತ್ವ ರಜೆಯನ್ನು 12 ವಾರದಿಂದ 26 ವಾರಗಳಿಗೆ ವಿಸ್ತರಿಸಿದ ಪರಿಣಾಮ ಖಾಸಗಿ ಕಂಪನಿಗಳು ಗರ್ಭ ಧರಿಸಿದ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿಲ್ಲ. 

ಜೊತೆಗೆ, ಕೆಲವು ಸಂದರ್ಭಗಳಲ್ಲಿ ಗರ್ಭಿಣಿ ನೌಕರರನ್ನು ಖಾಸಗಿ ಕಂಪನಿಗಳು ಕೆಲಸದಿಂದ ತೆಗೆಯುತ್ತಿವೆ ಎಂಬ ದೂರುಗಳು ಬಂದಿದ್ದವು. ಇದಕ್ಕೆ ನೂತನ ಮಾರ್ಗೋ ಪಾಯವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

click me!