ವೋಲ್ವೋ ಬಸ್’ಗಳ ಪ್ರಯಾಣ ದರ ಕಡಿತ..?

By Suvarna Web DeskFirst Published Dec 14, 2017, 10:17 AM IST
Highlights

ದೇಶದಲ್ಲೇ ಉತ್ತಮ ಸಮೂಹ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿಯ ಎಲ್ಲಾ ಬಗೆಯ ಸೇವೆಗಳು ಜನಪ್ರಿಯವಾಗಿವೆಯಾದರೂ ವೋಲ್ವೋ ಬಸ್’ಗಳ ಸೇವೆಗೆ ಪ್ರಯಾಣಿಕರು ಅಷ್ಟಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಬಿಎಂಟಿಸಿ ವೋಲ್ವೊ ಬಸ್’ಗಳ ಪ್ರಯಾಣ ದರ ಕಡಿತಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು (ಡಿ.14): ದೇಶದಲ್ಲೇ ಉತ್ತಮ ಸಮೂಹ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿಯ ಎಲ್ಲಾ ಬಗೆಯ ಸೇವೆಗಳು ಜನಪ್ರಿಯವಾಗಿವೆಯಾದರೂ ವೋಲ್ವೋ ಬಸ್’ಗಳ ಸೇವೆಗೆ ಪ್ರಯಾಣಿಕರು ಅಷ್ಟಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಬಿಎಂಟಿಸಿ ವೋಲ್ವೊ ಬಸ್’ಗಳ ಪ್ರಯಾಣ ದರ ಕಡಿತಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಸುದ್ದಿಗಾರರ ಜತೆ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ, ಬಿಎಂಟಿಸಿ ವ್ಯಾಪ್ತಿಯಲ್ಲಿ ಸಂಚರಿಸುವ ವೋಲ್ವೊ ಬಸ್’ಗಳ ಪ್ರಯಾಣ ದರ ಇಳಿಸುವ ಸಂಬಂಧ ಚರ್ಚೆ ನಡೆದಿದೆ. ಸಾಮಾನ್ಯ ಬಸ್’ಗಳಲ್ಲಿ ಸಂಚರಿಸುವಷ್ಟು ಆಸಕ್ತಿಯನ್ನು ವೋಲ್ವೊ ಬಸ್’ಗಳಿಗೆ ಪ್ರಯಾಣಿಕರು ತೋರುತ್ತಿಲ್ಲ. ಈ ಬಗ್ಗೆ ಇಲಾಖೆ ಹಂತದಲ್ಲಿ ಸಭೆ ನಡೆಸಿ ಶೀಘ್ರ ನಿರ್ಧಾರಕ್ಕೆ ಬರಲಾಗುವುದು ಎಂದರು.

ಮಾರ್ಕೋಪೋಲೊ ಬಸ್’ಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ವರದಿ ಪರಿಶೀಲನೆ ನಡೆಸಿ, ಒಂದು ತಿಂಗಳಲ್ಲಿ ಕ್ರಮಕೈಗೊಳ್ಳಲಾಗುವುದು. ಅಕ್ರಮದಲ್ಲಿ ಭಾಗಿಯಾಗಿರುವ ಯಾರೇ ಆಗಲಿ, ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.

click me!