
ಮಂಡ್ಯ(ನ.26): ಆತ ಒಬ್ಬ ಸರ್ಕಾರಿ ಅಧಿಕಾರಿ. ಅದರಲ್ಲೂ ಅಬಕಾರಿ ನಿರೀಕ್ಷಕರು. ಆದರೆ ಕುಡಿತದಿಂದಾಗುವ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡಿರುವ ಅವರು ಹೋರಾಟಕ್ಕೆ ಧುಮುಕಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರಿ ಕೆಲಸಕ್ಕೆ ರಜೆ ಹಾಕಿ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿದ್ದಾರೆ. ಬನ್ನಿ ಈ ದಿಟ್ಟ ಅಧಿಕಾರಿ ಯಾರು? ಇಲ್ಲಿದೆ ವಿವರ.
ಮದ್ಯದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ರಾಜ್ಯ ವ್ಯಾಪಿ ಪಾದಯಾತ್ರೆ ನಡೆಸುತ್ತಿರುವವರು ಲಿಂಗೇಗೌಡ . ಅಬಕಾರಿ ನಿರೀಕ್ಷಕರಾಗಿರುವ ಇವರು ಮದ್ಯದ ವಿರುದ್ಧ ರಾಜ್ಯಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯವರಾದ ಲಿಂಗೇಗೌಡ ಮೊದಲಿನಿಂದಲೂ ಡೈನಾಮಿಕ್ ಅಧಿಕಾರಿ. ಡಿ.ಕೆ. ರವಿ ಅವರ ಬ್ಯಾಚ್'ಮೇಟ್ ಕೂಡ ಹೌದು. ನಿತ್ಯ ವೃತ್ತಿಯಲ್ಲಿ ಮದ್ಯದ ದುಷ್ಪರಿಣಾಮಗಳನ್ನು ಕಣ್ಣಾರೆ ಕಂಡಿರುವ ಇವರು, ವೃತ್ತಿಗಿಂತಲೂ ಮದ್ಯದ ಬಗ್ಗೆ ಜನಜಾಗೃತಿ ಮೂಡಿಸುವುದೇ ಉತ್ತಮ ಕೆಲಸ ಎಂದು ಬೀದಿಗೆ ಇಳಿದಿದ್ದಾರೆ. ಕೆಲಸಕ್ಕೆ ಮೂರು ತಿಂಗಳು ರಜೆ ಹಾಕಿ ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಿದ್ದಾರೆ.
ಇನ್ನೂ ಪಾದಯಾತ್ರೆ ಮಾರ್ಗ ಮದ್ಯದಲ್ಲೆಲ್ಲಾ ಧರಣಿ, ಸಭೆಗಳನ್ನು ನಡೆಸಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಇವರ ಪಾದಯಾತ್ರೆ ಕಲಬುರಗಿ ತಲುಪಿದ್ದು, ಇವರ ಈ ಜಾಗೃತಿ ಪಾದಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಒಟ್ಟಾರೆ ಒಬ್ಬ ಸರಕಾರಿ ಅಧಿಕಾರಿಯಾಗಿ ಅದರಲ್ಲೂ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಆಗಿ ಮದ್ಯ ನಿಷೇಧಕ್ಕೆ ಅಂದೋಲನ ಕೈಗೊಂಡಿರುವ ಲಿಂಗೇಗೌಡ ದಿಟ್ಟತನ ಮೆಚ್ಚಲೇಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.