ವೃದ್ಧ ತಂದೆತಾಯಿಯರನ್ನು ಹೊರಗಟ್ಟಿದರೆ ಕಾದಿದೆ ಭಾರಿ ಶಿಕ್ಷೆ

Published : May 12, 2018, 02:39 PM IST
ವೃದ್ಧ ತಂದೆತಾಯಿಯರನ್ನು ಹೊರಗಟ್ಟಿದರೆ  ಕಾದಿದೆ ಭಾರಿ ಶಿಕ್ಷೆ

ಸಾರಾಂಶ

2007ರ ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯಿದೆಯ ಪರಿಶೀಲಿಸಲಾಗುತ್ತಿದ್ದು, ಈ ಕಾಯಿದೆಯಡಿ ದತ್ತುಪಡೆದ ಮಕ್ಕಳು, ಮಲ ಮಕ್ಕಳು, ಸೊಸೆ, ಅಳಿಯ ಮೊಮ್ಮಕ್ಕಳು, ಕಿರಿಯರು ಹಾಗೂ ಕಾನೂನನ್ವಯ ಅವಲಂಬಿತರು ಒಳಗೊಳ್ಳುತ್ತಾರೆ  ಎಂದು ಸಚಿವಾಲದ ಪ್ರಕಟಣೆ ತಿಳಿಸಿದೆ.

ನವದೆಹಲಿ(ಮೇ.12): ವೃದ್ಧ ತಂದೆತಾಯಿಯರನ್ನು ಹೊರಗಟ್ಟಿದರೆ ಅಥವಾ ಹಲ್ಲೆ, ನಿಂದನೆ ಮಾಡಿದರೆ  ೬ ತಿಂಗಳವರೆಗೆ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. 
ಪ್ರಸ್ತುತ ಈ ಕಾಯಿದೆ ೩ ತಿಂಗಳವರೆಗೂ ಶಿಕ್ಷೆ ವಿಧಿಸಬಹುದಾಗಿತ್ತು.  ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ. 2007ರ ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯಿದೆಯ ಪರಿಶೀಲಿಸಲಾಗುತ್ತಿದ್ದು, ಈ ಕಾಯಿದೆಯಡಿ ದತ್ತುಪಡೆದ ಮಕ್ಕಳು, ಮಲ ಮಕ್ಕಳು, ಸೊಸೆ, ಅಳಿಯ ಮೊಮ್ಮಕ್ಕಳು, ಕಿರಿಯರು ಹಾಗೂ ಕಾನೂನನ್ವಯ ಅವಲಂಬಿತರು ಒಳಗೊಳ್ಳುತ್ತಾರೆ  ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಮೊದಲ ಹಾಲಿ ಕಾಯಿದೆಯಲ್ಲಿ ಜೈವಿಕ ಮಕ್ಕಳು, ಮೊಮ್ಮಕ್ಕಳು ಮಾತ್ರ ಒಳಗೊಳ್ಳುತ್ತಿದ್ದರು. ಕಾನೂನನ್ವಯ ಹಾಗೂ ಅವಲಂಬಿತರಾದವರನ್ನು ಹೊಸದಾಗಿ ಮಾರ್ಪಡಿಸಲಾಗಿದೆ. ಹೊಸ ಕಾಯಿದೆ ವೃದ್ಧ ಪೋಷಕರ ಜೀವನ ನಿರ್ವಹಣೆಗೆಆಹಾರ, ವಸತಿ, ಬಟ್ಟೆ, ಆರೋಗ್ಯ ನಿರ್ವಹಣೆ ಒಳಗೊಂಡು 10 ಸಾವಿರ ಹಣ ನಿಗದಿಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!