ರಸ್ತೆ ಅಪಘಾತ : ಪರಿಹಾರದ ಮೊತ್ತ 10 ಪಟ್ಟು ಏರಿಕೆ

Published : May 12, 2018, 02:28 PM IST
ರಸ್ತೆ ಅಪಘಾತ : ಪರಿಹಾರದ ಮೊತ್ತ 10 ಪಟ್ಟು ಏರಿಕೆ

ಸಾರಾಂಶ

ರಸ್ತೆ ಅಪಘಾತಕ್ಕೆ ಒಳಗಾದವರಿಗೆ ನೀಡುವ ಪರಿಹಾರದ ಮೊತ್ತವನ್ನು ಸರ್ಕಾರವು 10 ಪಟ್ಟು ಏರಿಕೆ ಮಾಡಿದೆ. ಅಪಘಾತದ ವೇಳೆ ಮೃತಪಟ್ಟಾಗ, ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಾಗ, ಸಣ್ಣ ಪುಟ್ಟ ಗಾಯಗಳಾದಾಗ ಅವರ ವಯಸ್ಸು, ಆದಾಯ ವಿಚಾರಗಳನ್ನೂ ಕೂಡ ಪರಿಗಣನೆಗೆ ತೆಗೆದುಕೊಳ್ಳದೇ ಪರಿಹಾರವನ್ನು ನೀಡಲಾಗುತ್ತದೆ.  

ನವದೆಹಲಿ :  ರಸ್ತೆ ಅಪಘಾತಕ್ಕೆ ಒಳಗಾದವರಿಗೆ ನೀಡುವ ಪರಿಹಾರದ ಮೊತ್ತವನ್ನು ಸರ್ಕಾರವು 10 ಪಟ್ಟು ಏರಿಕೆ ಮಾಡಿದೆ. 

ಅಪಘಾತದ ವೇಳೆ ಮೃತಪಟ್ಟಾಗ, ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಾಗ, ಸಣ್ಣ ಪುಟ್ಟ ಗಾಯಗಳಾದಾಗ ಅವರ ವಯಸ್ಸು, ಆದಾಯ ವಿಚಾರಗಳನ್ನೂ ಕೂಡ ಪರಿಗಣನೆಗೆ ತೆಗೆದುಕೊಳ್ಳದೇ ಪರಿಹಾರವನ್ನು ನೀಡಲಾಗುತ್ತದೆ.  
ಅಲ್ಲದೇ ಇದರಲ್ಲಿ ಯಾರದ್ದು ತಪ್ಪು ಎನ್ನುವ ವಿಚಾರವನ್ನೂ ಕೂಡ ಪರಿಹಾರ ನೀಡುವ ವೇಳೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. 

ಸಾರಿಗೆ ಸಚಿವಾಲಯದಿಂದ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ ಟ್ರಿಬ್ಯೂನಲ್ ಅಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಹೊಸ ನಿಯಮಾವಳಿಗಳ ಪ್ರಕಾರವಾಗಿ  ರಸ್ತೆ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಲ್ಲಿ 5 ಲಕ್ಷದವರೆಗೂ ನೀಡಲಾಗುತ್ತದೆ.  

ಸದ್ಯ  ಅಪಘಾತದಲ್ಲಿ ಮೃತರಾದಲ್ಲಿ  50 ಸಾವಿರ ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದಲ್ಲಿ, 25 ಸಾವಿರ ಪರಿಹಾರವನ್ನು ನೀಡಲಾಗುತ್ತಿತ್ತು. ಆದರೆ ಸದ್ಯ ಈ ಪ್ರಮಾಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. 

ದೇಶದಲ್ಲಿ ಪ್ರತೀ ವರ್ಷವೂ ಕೂಡ ರಸ್ತೆ ಅಪಘಾತದಲ್ಲಿ 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ 5 ಲಕ್ಷ ಮಂದಿ ಗಾಯಗೊಳ್ಳುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ