ಶೀಘ್ರದಲ್ಲೇ ಔಷಧಗಳ ಮೇಲಿನ ದರ ಕಡಿತ..!

First Published Jun 3, 2018, 3:51 PM IST
Highlights

ದೇಶದಲ್ಲಿ ಈಗ ಎಲ್ಲಿ ನೋಡಿದರೂ ತೈಲ ಬೆಲೆಯದ್ದೇ ಚರ್ಚೆ. ನಿರಂತರವಾಗಿ ಏರಿಕೆಯಾಗುತ್ತಿದ್ದ ತೈಲ ಬೆಲೆ ಕಳೆದ ೫ ದಿನಗಳಿಂದ ಇಳಿಕೆ ಕಾಣುತ್ತಿರುವುದು ಜನರಲ್ಲಿ ತುಸು ನೆಮ್ಮದಿ ತಂದಿದೆ. ಇದೇ ವೇಳೆ ಕೇಂದ್ರ ಸರ್ಕಾರ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗುತ್ತಿದೆ.

ನವದೆಹಲಿ(ಜೂ.3): ದೇಶದಲ್ಲಿ ಈಗ ಎಲ್ಲಿ ನೋಡಿದರೂ ತೈಲ ಬೆಲೆಯದ್ದೇ ಚರ್ಚೆ. ನಿರಂತರವಾಗಿ ಏರಿಕೆಯಾಗುತ್ತಿದ್ದ ತೈಲ ಬೆಲೆ ಕಳೆದ ೫ ದಿನಗಳಿಂದ ಇಳಿಕೆ ಕಾಣುತ್ತಿರುವುದು ಜನರಲ್ಲಿ ತುಸು ನೆಮ್ಮದಿ ತಂದಿದೆ. ಇದೇ ವೇಳೆ ಕೇಂದ್ರ ಸರ್ಕಾರ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗುತ್ತಿದೆ.

ಔಷಧೀಯ ಉತ್ಪನ್ನಗಳ ಮೇಲಿನ ಬೆಲೆ ನಿಯಂತ್ರಣಕ್ಕೆ ಕೇಂದ್ರ ನೂತನ ಯೋಜನೆ ಸಿದ್ದಪಡಿಸುತ್ತಿದೆ. ಈ ತಿಂಗಳ ಅಂತ್ಯದೊಳಗೆ ಔಷಧೀಯ ಉತ್ಪನ್ನಗಳ ಮೇಲಿನ ಬೆಲೆ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಸುಮಾರು 850ಕ್ಕೂ ಹೆಚ್ಚು ಔಷಧೀಯ ಉತ್ಪನ್ನಗಳ ಬೆಲೆ ನಿಗದಿ ಮಡಲಿದ್ದು, ಈ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.

ತಿಂಗಳ ಅಂತ್ಯದೊಳಗೆ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು, ಅದರ ಪ್ರಕಾರ ಖಾಸಗಿ ಕಂಪನಿಗಳು ತಮ್ಮ ಔಷಧೀಯ ಉತ್ಪನ್ನಗಳ ಮೇಲೆ ವಾರ್ಷಿಕವಾಗಿ ಕೇವಲ ಶೇ.10 ರಷ್ಟು ಮಾತ್ರ ಬೆಲೆ ಏರಿಕೆ ಮಾಡಲು ಅನುಮತಿ ನೀಡಲಾಗಿದೆ.

click me!