ಅಮ್ಮನ ಹೆಸರು ಸೇರಿಸಿಕೊಂಡು ಪಡಬಾರದ ಕಷ್ಟ ಅನುಭವಿಸಿದ ಯುವತಿ

First Published Jun 3, 2018, 2:05 PM IST
Highlights

ಭಾರತ ಶತಶತಮಾನಗಳಿಂದ ಪಿತೃ ಪ್ರಧಾನ ದೇಶ. ಮಗುವಿಗೆ ಜನ್ಮ ತಾಯಿ ನೀಡಿದರೂ ಅದಕ್ಕೆ ಹೆಸರು ಮಾತ್ರ ತಂದೆಯದ್ದೇ ಬರಬೇಕು. ಹೆಣ್ಣು ಇಂತಹ ಅದೆಷ್ಟು ಅಸಮಾನತೆಯನ್ನು ಸಹಿಸಿಕೊಂಡಿದ್ದಾಳೋ?. ಆದರೆ ಇಂದಿನ ಆಧುನಿಕ ಭಾರತದಲ್ಲೂ ಈ ಆಲೋಚನೆ ಕಿಂಚಿತ್ತೂ ಬದಲಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಮುಂಬೈ(ಜೂ.3): ಭಾರತ ಶತಶತಮಾನಗಳಿಂದ ಪಿತೃ ಪ್ರಧಾನ ದೇಶ. ಮಗುವಿಗೆ ಜನ್ಮ ತಾಯಿ ನೀಡಿದರೂ ಅದಕ್ಕೆ ಹೆಸರು ಮಾತ್ರ ತಂದೆಯದ್ದೇ ಬರಬೇಕು. ಹೆಣ್ಣು ಇಂತಹ ಅದೆಷ್ಟು ಅಸಮಾನತೆಯನ್ನು ಸಹಿಸಿಕೊಂಡಿದ್ದಾಳೋ?. ಆದರೆ ಇಂದಿನ ಆಧುನಿಕ ಭಾರತದಲ್ಲೂ ಈ ಆಲೋಚನೆ ಕಿಂಚಿತ್ತೂ ಬದಲಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ.

ತನ್ನ ಹೆಸರಿನ ಮುಂದೆ ತಂದೆ ಮತ್ತು ತಾಯಿ ಇಬ್ಬರ ಹೆಸರನ್ನೂ ನಮೂದಿಸುವ ಕಾರಣಕ್ಕೆ, ಯುವತಿಯೋರ್ವಳು ತಾನು ಅನುಭವಿಸಿದ ತೊಂದರೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹ್ಯೂಮನ್ಸ್ ಆಫ್ ಬಾಂಬೆ ಎಂಬ ಹೆಸರಿನಲ್ಲಿ ಶೇರ್ ಮಾಡಿದ್ದಾಳೆ.

ತನ್ನ 11 ನೇ ವಯಸ್ಸಿನಲ್ಲಿ ವಿದೇಶದಿಂದ ಭಾರತಕ್ಕೆ ಬಂದ ಈ ಯುವತಿ ತನ್ನ ಹೆಸರಿನ ಮುಂದೆ ಕೇವಲ ತಂದೆಯ ಹೆಸರಷ್ಟೇ ಅಲ್ಲದೇ ತಾಯಿಯ ಹೆಸರನ್ನೂ ನಮೂದಿಸುತ್ತಾಳೆ. ಆದರೆ ಈ ಯುವತಿ ಭಾರತಕ್ಕೆ ಬಂದ ಮೊದಲ ದಿನದಿಂದಲೇ ತೊಂದರೆ ಅನುಭವಿಸಬೇಕಾಗಿ ಬಂದಿರುವುದು ಮಾತ್ರ ವಿಪರ್ಯಾಸ. ಶಾಲೆಗೆ ಸೇರಲು ಹೋದಾಗ ಈಕೆಯ ಅರ್ಜಿಯನ್ನೇ ಶಾಲೆ ನಿರಾಕರಿಸಿದ ಘಟನೆ ನಡೆದಿದೆಯಂತೆ.

ಬಳಿಕ ಖುದ್ದು ತಂದೆಯೇ ಶಾಲೆಗೆ ಬಂದು ಈ ಕುರಿತು ಸ್ಪಷ್ಟೀಕರಣ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇಷ್ಟೇ ಅಲ್ಲದೇ ಶಾಲೆ ಸೇರಿದ ಬಳಿಕವೂ ಶಿಕ್ಷಕರು ಮತ್ತು ಸಹಪಾಠಿಗಳು ಈಕೆಯನ್ನು ಬೇರೆಯದೇ ದೃಷ್ಟಿಯಲ್ಲಿ ನೋಡುವದನ್ನು ಕಂಡು ತುಂಬ ಪರಿತಪಿಸಿದ್ದಾಳೆ ಈ ಯುವತಿ.

ಪಿತೃ ಪ್ರಧಾನ ಸಮಾಜದ ಈ ಅಸಮಾನತೆಯನ್ನು ಕಂಡು ಬೇಸತ್ತ ಈ ಯುವತಿ ಕೊನೆಗೆ ಫೇಸ್‌ಬುಕ್ ನಲ್ಲಿ ಈ ಕುರಿತು ಪೋಸ್ಟ್‌ವೊಂದನ್ನು ಹಾಕುವ ಮೂಲಕ ತನ್ನ ಅಭಿಪ್ರಾಯವನ್ನು ಶೇರ್ ಮಾಡಿದ್ದಾಳೆ. ತಾನು ಅನುಭವಿಸಿದ ನೋವು, ಸಂಕಟವನ್ನು ಮತ್ತು ಪಿತೃ ಪ್ರಧಾನ ಸಮಾಜದ ದೋಷಗಳನ್ನು ಈ ಯುವತಿ ತನ್ನ ಪೋಸ್ಟ್‌ನಲ್ಲಿ ಎತ್ತಿ ತೋರಿಸಿದ್ದಾಳೆ.

ಇನ್ನು ಈ ಯುವತಿ ಮಾಡಿರುವ ಪೋಸ್ಟ್‌ಗೆ ನೆಟಿಜನ್‌ಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ತನ್ನ ಹೆಸರಿನ ಜೊತೆ ತಾಯಿಯ ಹೆಸರನ್ನೂ ಸೇರಿಸಿಕೊಂಡಿರುವ ಯುವತಿಗೆ ಎಲ್ಲರೂ ಶಹಬ್ಬಾಸ್ ಹೇಳಿದ್ದಾರೆ.

click me!