ಕೇಂದ್ರದಿಂದ 11 ಲಕ್ಷ ಪಾನ್'ಕಾರ್ಡ್'ಗಳ ರದ್ದು: ಇದರಲ್ಲಿ ನಿಮ್ಮದು ಇರಬಹುದೆ ?

Published : Aug 07, 2017, 06:15 PM ISTUpdated : Apr 11, 2018, 01:08 PM IST
ಕೇಂದ್ರದಿಂದ 11 ಲಕ್ಷ ಪಾನ್'ಕಾರ್ಡ್'ಗಳ ರದ್ದು: ಇದರಲ್ಲಿ ನಿಮ್ಮದು ಇರಬಹುದೆ ?

ಸಾರಾಂಶ

ರದ್ದಾಗಿರುವ ಪಾನ್'ಕಾರ್ಡ್'ಗಳಲ್ಲಿ ನಿಮ್ಮದಿದ್ದರೆ ಆದಾಯತೆರಿಗೆಯ ವೆಬ್'ಸೈಟ್ https://incometaxindiaefiling.gov.in. ಗೆ ಭೇಟಿ ನೀಡಿ Know Your PAN"  ಯನ್ನು ಕ್ಲಿಕಿಸಿದರೆ ಹೋಮ್'ಪೇಜ್'ನ ಎಡಭಾಗದಲ್ಲಿ 'ಸರ್ವೀಸಸ್' ಎಂಬ ಆಯ್ಕೆ ಬರುತ್ತದೆ.

ನವದೆಹಲಿ(ಆ. 07): ತೆರಿಗೆ ವಂಚನೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ವರ್ಷದ ಜುಲೈ 27ರ ಅಂತ್ಯಕ್ಕೆ  11.44 ಲಕ್ಷ ಪಾನ್'ಕಾರ್ಡ್'ಗಳನ್ನು ರದ್ದುಗೊಳಿಸಿದೆ.

ಆದಾಯ ತೆರಿಗೆ ಪಾವತಿಸುವಾಗ ಪಾನ್'ಕಾರ್ಡ್ ಜೊತೆಗೆ ಆಧಾರ್'ಅನ್ನು ಸಂಪರ್ಕ'ಗೊಳಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಪಾನ್'ಕಾರ್ಡ್ ಪಡೆಯಬಹುದಾಗಿದೆ. ತೆರಿಗೆ ಪಾವತಿಸುವ ಸಂದರ್ಭದಲ್ಲಿ ಬಹುತೇಕರು ನಕಲಿ ಪಾನ್'ಕಾರ್ಡ್'ಗಳನ್ನು ಸಲ್ಲಿಸಿರುವುನ್ನು ಕೇಂದ್ರ ಸರ್ಕಾರ ಪತ್ತೆಹಚ್ಚಿದೆ.

ರದ್ದಾಗಿರುವ ಪಾನ್'ಕಾರ್ಡ್'ಗಳಲ್ಲಿ ನಿಮ್ಮದಿದ್ದರೆ ಆದಾಯತೆರಿಗೆಯ ವೆಬ್'ಸೈಟ್ https://incometaxindiaefiling.gov.in. ಗೆ ಭೇಟಿ ನೀಡಿ Know Your PAN"  ಯನ್ನು ಕ್ಲಿಕಿಸಿದರೆ ಹೋಮ್'ಪೇಜ್'ನ ಎಡಭಾಗದಲ್ಲಿ 'ಸರ್ವೀಸಸ್' ಎಂಬ ಆಯ್ಕೆ ಬರುತ್ತದೆ. ಈ ಆಯ್ಕೆಯಲ್ಲಿ ನಿಮ್ಮ ಎಲ್ಲ ಮಾಹಿತಿಗಳನ್ನು ತುಂಬಿ 'ಸಬ್'ಮಿಟ್' ಮಾಡಿದರೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್'ಗೆ ಒಟಿಪಿ ಸಂಖ್ಯೆ ಬರುತ್ತದೆ.

ಒಂದು ವೇಳೆ ಅಧಿಕೃತ ಪಾನ್ ಕಾರ್ಡ್ ಆಗಿದ್ದರೆ ಆಕ್ಟೀವ್ ಅಗುವುದರೊಂದಿಗೆ ಯಾವುದೇ ಸಮಸ್ಯೆಯಿರುವುದಿಲ್ಲ. ನಕಲಿ ಪಾನ್'ಕಾರ್ಡ್ ಪಡೆದುಕೊಂಡಿದ್ದರೆ ಇನ್ನು ಹೆಚ್ಚಿನ ಮಾಹಿತಿ ಬೇಕೆಂದು ವೆಬ್'ಸೈಟ್ ಪುಟದಲ್ಲಿ ತೋರಿಸುತ್ತದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ರಾತ್ರಿಯಾದ್ರೆ ಬೆಡ್‌ರೂಂ ಬಳಿ ಬರ್ತಾನೆ ಸೈಕೋ! ಅಪರಿಚಿತನ ಕಾಟಕ್ಕೆ ಬೇಸತ್ತ ವೈದ್ಯೆ!
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರದ ಸಚಿವ ನಿತಿನ್ ನಬಿ ಆಯ್ಕೆ, ಶುಭಕೋರಿದ ಜೆಪಿ ನಡ್ಡಾ