
ನವದೆಹಲಿ: ಭಾರತದಲ್ಲಿ ವಾಸವಾಗಿರುವ ಪಾಕಿಸ್ತಾನ ಮೂಲದ ಮಹಿಳೆಯೊಬ್ಬಳು ಕಳೆದ 22-23 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಾ ಬಂದಿದ್ದಾರೆ ಎಂದು ಏಎನ್ಐ ವರದಿ ಮಾಡಿದೆ.
ಸುಮಾರು 22-23 ವರ್ಷದಿಂದ ನಾನು ಮೋದಿಯವರಿಗೆ ರಾಖಿ ಕಟ್ಟುತ್ತಾ ಬಂದಿದ್ದೇನೆ. ಈ ಬಾರಿಯೂ ಕಟ್ಟುತ್ತಿರುವುದು ಸಂತೋಷ ತಂದಿದೆ, ಎಂದು ಖಮರ್ ಮೊಹ್ಸಿನ್ ಶೇಖ್ ಹೇಳಿದ್ದಾರೆ.
ಮದುವೆಯ ಬಳಿಕ ಭಾರತದಲ್ಲೇ ನೆಲೆಸಿರುವ ಖಮರ್, ಮೋದಿಯವರನ್ನು ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಕಾಲದಿಂದಲೇ ಬಲ್ಲೆ ಎಂದು ಹೇಳಿದ್ದಾರೆ.
ಆಗ ಅವರು ಸಂಘದ ಕಾರ್ಯಕರ್ತರಾಗಿದ್ದರು, ಈಗ ಕಠಿಣ ಪರಿಶ್ರಮದಿಂದ ಈಗ ಪ್ರಧಾನಿಯಾಗಿದ್ದಾರೆ, ಎಂದು ಖಮರ್ ಹೇಳಿದ್ದಾರೆ.
ಪ್ರಧಾನಿಯವರು ಕೆಲಸದ ಒತ್ತಡವಿರುವುದರಿಂದ ಈ ಬಾರಿ ಅವರು ಕರೆ ಮಾಡಲ್ಲವೆಂದು ತಿಳಿದುಕೊಂಡಿದ್ದೆ, ಆದರೆ 2 ದಿನಗಳ ಹಿಂದೆ ಅವರೇ ಖುದ್ದು ಕರೆ ಮಾಡಿದ್ದರು ಎಂದು ಆಕೆ ತಿಳಿಸಿದ್ದಾರೆ.
(ಚಿತ್ರ: ಏಎನ್ಐ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.