ಚೆನ್ನೈಗೆ ರಾಜ್ಯಪಾಲರ ಆಗಮನ: ಶಶಿಕಲಾಗಿಂತ ಮುಂಚೆ ಪನ್ನೀರ್ ಭೇಟಿ

Published : Feb 09, 2017, 06:29 AM ISTUpdated : Apr 11, 2018, 12:47 PM IST
ಚೆನ್ನೈಗೆ ರಾಜ್ಯಪಾಲರ ಆಗಮನ: ಶಶಿಕಲಾಗಿಂತ ಮುಂಚೆ ಪನ್ನೀರ್ ಭೇಟಿ

ಸಾರಾಂಶ

ಶಶಿಕಲಾ ಸಹ ಇಂದು ರಾತ್ರಿ 7.30 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ತಮಗೆ ಹೆಚ್ಚು ಶಾಸಕರ ಬೆಂಬಲವಿರುವ ಕಾರಣ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳಲಿದ್ದಾರೆ. ಈ ಬೆಳವಣಿಗೆಗಳ ನಂತರ ಸರ್ಕಾರ ರಚನೆಯ ಕಸರತ್ತು ಆರಂಭವಾಗುವ ಸಂಭವವಿದೆ.

ಚೆನ್ನೈ(ಫೆ.09): ತಮಿಳುನಾಡಿನಲ್ಲಿ ಹಲವು ಮಹತ್ವದ ರಾಜಕೀಯ ಬೆಳವಣಿಗೆಗಳು ಉಂಟಾಗುತ್ತಿರುವ ಕಾರಣದಿಂದ ರಾಜ್ಯಪಾಲರಾದ ಸಿ. ವಿದ್ಯಾಸಾಗರ್ ರಾವ್  ಚನ್ನೈ'ಗೆ ಆಗಮಿಸಿದ್ದಾರೆ.ಎಐಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿರುವ  ವಿ.ಕೆ. ಶಶಿಕಲಾಗಿಂತ ಮನ್ನವೇ  ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ತಮ್ಮ ಬೆಂಬಲದ 8 ಮಂದಿ ಶಾಸಕರೊಂದಿಗೆ ಸಂಜೆ 5 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದು,ರಾಜ್ಯದ ರಾಜಕೀಯ ಕಾರಣಗಳು ಹಾಗೂ ರಾಜೀನಾಮೆಗೆ ಕಾರಣವಾದ ವಿಷಯಗಳನ್ನು ಮಾಹಿತಿ ನೀಡಿರುವುದರ  ಜೊತೆಗೆ ಸರ್ಕಾರ ರಚಿಸಲು ಸಾಂವಿಧಾನಿಕವಾಗಿ ತಮಗೆ ಅವಕಾಶ ನೀಡಬೇಕು ಕೋರಿಕೊಂಡಿದ್ದಾರೆ ಎನ್ನಲಾಗಿದೆ.

ಶಶಿಕಲಾ ಸಹ ಇಂದು ರಾತ್ರಿ 7.30 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ತಮಗೆ ಹೆಚ್ಚು ಶಾಸಕರ ಬೆಂಬಲವಿರುವ ಕಾರಣ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳಲಿದ್ದಾರೆ. ಈ ಬೆಳವಣಿಗೆಗಳ ನಂತರ ಸರ್ಕಾರ ರಚನೆಯ ಕಸರತ್ತು ಆರಂಭವಾಗುವ ಸಂಭವವಿದೆ.

ಸಿಎಂ ಸ್ಥಾನಕ್ಕೆ ಓ. ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ ನಂತರ ಶಶಿಕಲಾ ಎಐಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಪನ್ನೀರ್ ಅವರ ಬಹಿರಂಗ ಬಂಡಾಯ ಹಾಗೂ ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಮುಂದೂಡಿದ ಕಾರಣ  ಪ್ರಮಾಣವಚನ ಸ್ವೀಕಾರ ಸಮಾರಂಭ ಮುಂದೂಡಿಕೆಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆತಂಕಕಾರಿ ಹಂತಕ್ಕೆ ದೆಹಲಿ ಹವೆ: 430ರ ಗಡಿ ದಾಟಿದ ವಾಯು ಗುಣಮಟ್ಟ ಸೂಚ್ಯಂಕ: ವಾರದಲ್ಲಿ ಕೆಲವೇ ದಿನ ಮಕ್ಕಳಿಗೆ ಶಾಲೆ
ಈ 6 ದೇಶಗಳಲ್ಲಿ ‘ಧುರಂಧರ್’ ಬ್ಯಾನ್; ಆದ್ರೂ ಕಲೆಕ್ಷನ್‌ಗೆ ಸ್ವಲ್ಪವೂ ಹೊಡೆತವಿಲ್ಲ, ಅದು ಹೇಗೆ..!