ಝಾಕಿರ್ ನಾಯಕ್ ಸಂಸ್ಥೆ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

Published : Nov 15, 2016, 10:23 AM ISTUpdated : Apr 11, 2018, 12:53 PM IST
ಝಾಕಿರ್ ನಾಯಕ್ ಸಂಸ್ಥೆ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ಸಾರಾಂಶ

ಜನರನ್ನು  ವಿಭಜಿಸುವ, ಜನರ ಮಧ್ಯೆ ವೈಷಮ್ಯ ಬಿತ್ತುವ, ಹಾಗೂ ಸಮಾಜ ಶಾಂತಿಯನ್ನು ಕೆಡಿಸುವ ಯಾರೇ ಆಗಿದ್ದರೂ ಸರ್ಕಾರ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ, ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ನವದೆಹಲಿ (ನ.15): ವಿವಾದಾತ್ಮಕ ಧಾರ್ಮಿಕ ಪ್ರವಚನಕಾರ ಝಾಕಿರ್ ನಾಯಕ್ ‘ನ  ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್’ಎಫ್) ಸಂಸ್ಥೆಯನ್ನು ಕೇಂದ್ರ ಸರ್ಕಾರ 5 ವರ್ಷಗಳ ಕಾಲಗಳ ಅವಧಿಗೆ ನಿಷೇಧಿಸಿದೆ.

ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸದಂತೆ ಐಆರ್’ಎಫ್’ ಹಾಗೂ ಅದರ ಸಂಸ್ಥೆಗಳ ಮೇಲೆ ಸರ್ಕಾರ ಕಣ್ಣಿಡಲಿದೆ.

ಐಆರ್’ಎಫ್’ ಸಂಸ್ಥೆಯು ಭಾರತದ ಹೆಸರು ಕೆಡಿಸುವ ಕೆಲಸ ಮಾಡುತ್ತಿರುವುದರಿಂದ ಅದನ್ನು ನಿಷೇಧಿಸುವುದು ಸರಿಯೆಂದು ಸರ್ಕಾರ ಹೇಳಿದೆ.

ಜನರನ್ನು  ವಿಭಜಿಸುವ, ಜನರ ಮಧ್ಯೆ ವೈಷಮ್ಯ ಬಿತ್ತುವ, ಹಾಗೂ ಸಮಾಜ ಶಾಂತಿಯನ್ನು ಕೆಡಿಸುವ ಯಾರೇ ಆಗಿದ್ದರೂ ಸರ್ಕಾರ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ, ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಐಆರ್’ಎಫ್’ನ ವಿದೇಶಿ ದೇಣಿಗೆ ಪಡೆಯುವ ಪರವಾನಿಗೆಯನ್ನು ರದ್ದು ಪಡಿಸಿತ್ತು.

ಕಳೆದ ಜುಲೈ 1ರಂದು ಬಾಂಗ್ಲಾದೇಶದ ಢಾಕದಲ್ಲಿ ನಡೆದ ಬಾಂಬ್ ಸ್ಫೋಟ ಆರೋಪಿಯೊರ್ವ ತಾನು ಝಾಕಿರ್ ನಾಯಕ್’ನಿಂದ  ಪ್ರಭಾವಿತನಾಗಿರುವುದಾಗಿ ಹೇಳಿದ್ದಾನೆಂದು ಅಲ್ಲಿನ ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿತ್ತು.

ಝಾಕಿರ್ ನಾಯಕ್ ಮೇಲೆ ಈಗಾಗಲೇ ಕೆನಡಾ ಹಾಗೂ ಇಂಗ್ಲಂಡ್ ನಿಷೇಧ ಹೇರಿವೆ. ಮಲೇಶಿಯಾದಲ್ಲೂ ಝಾಕಿರ್ ನಾಯಕ್’ಗೆ ನಿರ್ಬಂಧವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಳ್ಳಿ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗೆ ‘ಮಕ್ಕಳ ಮನೆ’: ಕಲ್ಯಾಣ ಕರ್ನಾಟಕದಲ್ಲಿ ಹೊಸ ಪ್ರಯೋಗ
2026 ರ ಕೆಟ್ಟ ಸಮಯ, ಈ 4 ರಾಶಿಗೆ ರಾಹು, ಮಂಗಳ ಮತ್ತು ಶನಿ ಅತ್ಯಂತ ಕಠಿಣ ಪರೀಕ್ಷೆ