ರಾಜ್ಯಾದ್ಯಂತ ಎಲ್ಲಾ ದೇಗುಲಗಳಲ್ಲಿ ಮಳೆಗಾಗಿ ವಿಶೇಷ ಪೂಜೆಗೆ ಸರಕಾರದಿಂದಲೇ ಆದೇಶ?

By Suvarna Web DeskFirst Published Aug 15, 2017, 7:11 PM IST
Highlights

* ಬರ ಹಿನ್ನೆಲೆಯಲ್ಲಿ ದೇವರ ಮೊರೆ ಹೋದ ಸರ್ಕಾರ

* ಹಾವೇರಿಯಲ್ಲಿ ಸಚಿವ ರುದ್ರಪ್ಪ ಲಮಾಣಿ ಪ್ರತಿಕ್ರಿಯೆ

* ‘ರಾಜ್ಯದ ಎಲ್ಲ ದೇವಾಲಯಗಳಲ್ಲಿ ನಿತ್ಯ ಜಲಾಭಿಷೇಕ’

* ‘ಸರ್ಕಾರದಿಂದ ಎಲ್ಲ ದೇವಸ್ಥಾನಗಳಿಗೂ ಅಧಿಕೃತ ಆದೇಶ’

ಹಾವೇರಿ(ಆ. 15): ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ರೆ ಇನ್ನೊಂದೆಡೆ ರಾಜ್ಯ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿದೆ. ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ರಾಜ್ಯದ ಎಲ್ಲ ದೇವಾಲಯಗಳಲ್ಲೂ ವಿಶೇಷ ಜಲಾಭಿಷೇಕ ನಡೆಸಲು ಆದೇಶ ಹೊರಡಿಸಲಾಗ್ತಿದೆ. ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಜವಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ, ನಸುಕಿನ ಜಾವ ಎಲ್ಲ ದೇವಾಲಯಗಳಲ್ಲೂ ಜಲಾಭಿಷೇಕ ನಡೆಸಲು ಮುಜರಾಯಿ ದೇವಾಲಯಗಳಿಗೆ ಅಧಿಕೃತ ಆದೇಶ ಹೊರಡಿಸಲಾಗುವುದು. ವಿವಿಧ ಮಠಾಧೀಶರ ಅಭಿಪ್ರಾಯದಂತೆ ಜಲಾಭಿಷೇಕ ನಡೆಸಲಾಗ್ತಿದ್ದು ನಾಳೆಯಿಂದಲೇ ಆದೇಶ ಹೊರಡಿಸಲಾಗುವುದು ಅಂತ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ರುದ್ರಪ್ಪ ಲಮಾಣಿ, ಮನುಷ್ಯರಿಂದ ಆಗುವ ಪ್ರಯತ್ನವೆಲ್ಲಾ ಮಾಡಿದ್ದಾಯ್ತು, ಮೋಡ ಬಿತ್ತನೆ ಮಾಡಲು ಮೋಡವೇ ಇಲ್ಲ.ಇನ್ನೀಗ ದೇವರ ಮೊರೆ ಹೊಗುವುದೇ ಗತಿ ಎಂದು ತಿಳಿಸಿದ್ದಾರೆ. ಹಾನಗಲ್, ಯಲೂಜಿ ಮೊದಲಾದ ಕಡೆ ನೀರೇ ಇಲ್ಲ. ಇನ್ನೊಂದು ವಾರ ಈ ಸ್ಥಿತಿ ಹೀಗೇ ಮುಂದುವರಿದರೆ ಬರ ಪರಿಸ್ಥಿತಿ ನಿಶ್ಚಿತ ಎಂದವರು ಅಭಿಪ್ರಾಯಪಟ್ಟಿದ್ದಾರೆ. ನಾಳೆಯ ಆದೇಶದನ್ವಯ, ಮುಜರಾಯಿ ಆಡಳಿತವಿರುವ ಎಲ್ಲಾ ದೇವಸ್ಥಾನಗಳಲ್ಲಿ ಎರಡು ವಾರ ಕಾಲ ಬೆಳಗ್ಗೆ 5ಗಂಟೆಗೆಯೇ ಮಳೆಗಾಗಿ ವಿಶೇಷ ಪೂಜೆ ಮಾಡಲಾಗುತ್ತದೆ.

click me!