ಹುತಾತ್ಮ ಯೋಧರ ಮಕ್ಕಳ ಸಂಪೂರ್ಣ ಶಿಕ್ಷಣಕ್ಕೆ ಕೇಂದ್ರದಿಂದ ಸಿಕ್ತು ಸೂಪರ್ ಬಂಪರ್

By Suvarna Web DeskFirst Published Mar 22, 2018, 8:47 PM IST
Highlights

ಮೂರು ದಳಗಳ ಸೇನಾ ಅಧಿಕಾರಿಗಳು, ಅಧಿಕಾರಿಗಳು ಕೆಳಗಿನ ಶ್ರೇಣಿ ಹಾಗೂ ಕಾರ್ಯಾಚರಣೆಯಲ್ಲಿ ಹತರಾದ ಹಾಗೂ ಗಾಯಗೊಂಡ ಮಕ್ಕಳು ಈ ಯೋಜನೆಗೆ ಅನ್ವಯರಾಗುತ್ತಾರೆ.

ನವದೆಹಲಿ(ಮಾ.22): ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕೆ ಕೇಂದ್ರ ಸರ್ಕಾರವು ಸೂಪರ್ ಬಂಪರ್ ನೀಡಿದೆ.

ಈ ಮೊದಲು ತಿಂಗಳಿಗೆ ರಿಯಾಯಿತಿ ಶಿಕ್ಷಣ ಹೆಸರಿನಲ್ಲಿ 10 ಸಾವಿರ ರೂ.ವರೆಗೆ ಮಾತ್ರ ನೆರವು ನೀಡಲಾಗುತ್ತಿತ್ತು. ಈಗ ಅದನ್ನು ಬದಲಾಯಿಸಿ ಸಂಪೂರ್ಣ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಮೂರು ದಳಗಳ ಸೇನಾ ಅಧಿಕಾರಿಗಳು, ಅಧಿಕಾರಿಗಳು ಕೆಳಗಿನ ಶ್ರೇಣಿ ಹಾಗೂ ಕಾರ್ಯಾಚರಣೆಯಲ್ಲಿ ಹತರಾದ ಹಾಗೂ ಗಾಯಗೊಂಡ ಮಕ್ಕಳು ಈ ಯೋಜನೆಗೆ ಅನ್ವಯರಾಗುತ್ತಾರೆ. ಈ ಯೋಜನೆಯಡಿ 3400 ಮಕ್ಕಳು ಒಳಗೊಳ್ಳುತ್ತಾರೆ.  ವಾರ್ಷಿಕ 5 ಕೋಟಿ ರೂ.ನೆರವು ನೀಡಲು ಸರ್ಕಾರ ಮುಂದಾಗಿದೆ.

ಸರ್ಕಾರಿ, ಸರ್ಕಾರಿ ಅನುದಾನಿತ, ಶೈಕ್ಷಣಿಕ ಸಂಸ್ಥೆ, ಮಿಲಿಟರಿ, ಸೈನಿಕ ಶಾಲೆಗಳು ಹಾಗೂ ಇತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಾಯತ್ತ ಸಂಸ್ಥೆಗಳು ಒಳಗೊಳ್ಳುತ್ತವೆ' ಎಂದು ರಕ್ಷಣಾ ಇಲಾಖೆ ಟ್ವಿಟರ್'ನಲ್ಲಿ ತನ್ನ ಪ್ರಕಟಣೆ ತಿಳಿಸಿದೆ.

click me!