ಡೆಬಿಟ್ ಕಾರ್ಡ್'ನಲ್ಲಿ ಅನಗತ್ಯ ಶುಲ್ಕ : ನೀವು ಮೋಸ ಹೋಗುತ್ತಿರುವುದು ನಿಮಗೆ ತಿಳಿಯುತ್ತಿಲ್ಲ

Published : Mar 22, 2018, 05:48 PM ISTUpdated : Apr 11, 2018, 12:42 PM IST
ಡೆಬಿಟ್ ಕಾರ್ಡ್'ನಲ್ಲಿ ಅನಗತ್ಯ ಶುಲ್ಕ : ನೀವು ಮೋಸ ಹೋಗುತ್ತಿರುವುದು ನಿಮಗೆ ತಿಳಿಯುತ್ತಿಲ್ಲ

ಸಾರಾಂಶ

ಕೇಂದ್ರ ಸರ್ಕಾರ 2 ವರ್ಷಗಳ ಹಿಂದಷ್ಟೆ ಸಾವಿರ ಹಾಗೂ 500 ರೂ. ಅಪಮೌಲ್ಯಿಕರಿಸಿತ್ತು. ಆ ದಿನಗಳಲ್ಲಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು.

ಮುಂಬೈ(ಮಾ.22): ಬ್ಯಾಂಕುಗಳು ಡೆಬಿಟ್ ಕಾರ್ಡ್'ನಲ್ಲಿ ಅನಗತ್ಯ ಶುಲ್ಕವನ್ನು ವಿಧಿಸುತ್ತಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ತಮ್ಮ ಬ್ಯಾಂಕಿನಲ್ಲಿ ಕನಿಷ್ಠ ಬಾಕಿ ಇಲ್ಲದಿದ್ದರೆ ಪ್ರತಿಬಾರಿಯು 17ರೂ.ಗಳಿಂದ 25 ರೂ.ಗಳವರೆಗೂ ಶುಲ್ಕವನ್ನು ತೆರಬೇಕಾಗಿದೆ. ಇದರಲ್ಲಿ  ಜಿಎಸ್'ಟಿ ದರವು ಅನ್ವಯಗೊಳ್ಳುತ್ತದೆ. ಎಟಿಎಂ ಮಷಿನ್'ಗಳಲ್ಲಿ ಎಸ್'ಬಿಐ'ನಿಂದ ಪ್ರತಿ ಬಾರಿ 17 ರೂ. ಶುಲ್ಕ ಕಡಿತವಾದರೆ ಹೆಚ್'ಡಿಎಫ್'ಸಿ ಹಾಗೂ ಐಸಿಐಸಿಐ ಬ್ಯಾಂಕ್'ನಿಂದ 25 ರೂ. ಕಡಿತವಾಗುತ್ತಿದೆ. ಇನ್ನು ಹಲವು ಬ್ಯಾಂಕ್'ಗಳಲ್ಲಿ ಈ ರೀತಿಯ ಶುಲ್ಕಗಳನ್ನು ವಿಧಿಸಲಾಗುತ್ತಿದೆ.     

ಇಂಟರ್'ನೆಟ್ ವ್ಯವಹಾರ ತಿಳಿದವರಿಗೆ ಇದರ ಬಗ್ಗೆ ಗೊತ್ತಾಗುತ್ತಿದೆ. ಒಂದಂಕಿಯ ಹಣವಾದ್ದರಿಂದ ಬಹುತೇಕರು ಇದರ ಬಗ್ಗೆ ಗೊತ್ತಾಗುವುದೇ ಇಲ್ಲ. ಕೇಂದ್ರ ಸರ್ಕಾರ 2 ವರ್ಷಗಳ ಹಿಂದಷ್ಟೆ ಸಾವಿರ ಹಾಗೂ 500 ರೂ. ಅಪಮೌಲ್ಯಿಕರಿಸಿತ್ತು. ಆ ದಿನಗಳಲ್ಲಿ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಕೆಲ ತಿಂಗಳು ಯಾವುದೇ ವ್ಯವಹಾರಕ್ಕೆ ಕಾರ್ಡ್ ಸ್ವೈಪ್ ಮಾಡಿದರೆ ಶುಲ್ಕ ಪಾವತಿಸಲಾಗುತ್ತಿರಲಿಲ್ಲ.

ಭ್ರಷ್ಟಚಾರ ಕಡಿಮೆಯಾಗಬೇಕಾದರೆ ಹೆಚ್ಚಾಗಿ ಡಿಜಿಟಲ್ ವ್ಯವಹಾರ ಬಳಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿರುವ ಕೇಂದ್ರ ಸರ್ಕಾರವೆ ಹಿಂಬಾಗಿಲಿನ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದೆ. ಇದರಿಂದ ಮಧ್ಯಮ ವರ್ಗದವರೆ ತೊಂದರೆ ಅನುಭವಿಸುವಂತಾಗಿದೆ' ಎಂದು ಆರ್ಥಿಕ ತಜ್ಞರು ಆಕ್ರೋಶವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

44 ಸೆಕೆಂಡ್‌ನಲ್ಲಿ 72 ರಾಕೆಟ್‌ ಲಾಂಚ್‌ ಮಾಡುವ ಘಾತಕ ರಾಕೆಟ್‌ ಸಿಸ್ಟಮ್‌ಅನ್ನು ಪ್ರಮುಖ ದೇಶಕ್ಕೆ ಮಾರಿದ ಭಾರತ!
ಬಿಗ್‌ ಬಾಸ್ ವಿಜೇತ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ: ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಕಾವೇರಿ!