ದಾರಿ ತಪ್ಪಿಸುವ ಜಾಹೀರಾತುಗಳಿಗೆ ಬಿಸಿ ಮುಟ್ಟಿಸಲು ಮೋದಿ ಸ್ಕೆಚ್ಚು..!

By Suvarna Web DeskFirst Published Oct 27, 2017, 12:10 PM IST
Highlights

ವ್ಯವಹಾರ ಶೈಲಿ ಹಾಗೂ ದೇಶದ ಅಗತ್ಯಕ್ಕೆ ಅನುಗುಣವಾಗಿ ಗ್ರಾಹಕ ರಕ್ಷಣಾ ಕಾಯ್ದೆ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ.

ನವದೆಹಲಿ(ಅ.27): ದಾರಿ ತಪ್ಪಿಸುವ ಜಾಹೀರಾತುಗಳನ್ನು ಮಟ್ಟಹಾಕಲು ಹಾಗೂ ಕಾಲಮಿತಿಯೊಳಗೆ, ಅಗ್ಗದ ವೆಚ್ಚದಲ್ಲಿ ಗ್ರಾಹಕ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲು ಹೊಸ ಗ್ರಾಹಕ ರಕ್ಷಣಾ ಕಾಯ್ದೆ ರೂಪಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವ್ಯವಹಾರ ಶೈಲಿ ಹಾಗೂ ದೇಶದ ಅಗತ್ಯಕ್ಕೆ ಅನುಗುಣವಾಗಿ ಗ್ರಾಹಕ ರಕ್ಷಣಾ ಕಾಯ್ದೆ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಹಕರ ಸಬಲೀಕರಣಕ್ಕೆ ಉದ್ದೇಶಿತ ಕಾಯ್ದೆ ಹೆಚ್ಚಿನ ಒತ್ತು ನೀಡಲಿದೆ. ದಾರಿ ತಪ್ಪಿಸುವ ಜಾಹೀರಾತುಗಳ ಕಠಿಣ ಅಂಶಗಳು ಇದರಲ್ಲಿರಲಿವೆ. ಕ್ರಮ ಜರುಗಿಸುವ ಅಧಿಕಾರವುಳ್ಳ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವನ್ನು ತೆರೆದು, ಬೇಗನೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯಿಂದ ದೀರ್ಘಾವಧಿಯಲ್ಲಿ ಗ್ರಾಹಕರಿಗೆ ಅನುಕೂಲವಾಗಲಿದೆ. ಉತ್ಪಾದಕರ ನಡುವೆಯೇ ಸ್ಪರ್ಧೆ ಏರ್ಪಟ್ಟು ಬೆಲೆಗಳು ಇಳಿಕೆ ಕಾಣಲಿವೆ ಎಂದು ತಿಳಿಸಿದರು.

click me!