
ಬೆಂಗಳೂರು(ಅ.27): ದಯಾನಂದಸ್ವಾಮಿ ರಾಸಲೀಲೆ ಪ್ರಕರಣ ಬಹಿರಂಗವಾಗಿದ್ದು ಇದೇ ಮೊದಲಲ್ಲ ಅಂದಿನ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿಗೂ ಈ ಸಿಡಿ ವಿಚಾರ ತಿಳಿದಿತ್ತು. ರಾಸಲೀಲೆ ಸಿಡಿ ವಿಚಾರದಲ್ಲಿ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಮಾಡಿದವರ ನಡುವೆ ಈ ಮೊದಲೇ ಸಂಧಾನ ನಡೆದಿದ್ದು, ಕಮಿಷನರ್ ಆಗಿದ್ದ ಜ್ಯೋತಿ ಪ್ರಕಾಶ್ ಮಿರ್ಜಿ ಮುಂದಾಳ್ವತದಲ್ಲಿ ಈ ಸಂಧಾನ ನಡೆದಿತ್ತು ಎಂಬ ವಿಚಾರ ತಿಳಿದು ಬಂದಿದೆ.
ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಮಾಡಿದವರ ನಡುವೆ ಕಮಿಷನರ್ ಆಗಿದ್ದ ಜ್ಯೋತಿಪ್ರಕಾಶ್ ಮಿರ್ಜಿ ಅವರ ಕಚೇರಿಯಲ್ಲಿ ಸಿಡಿ ವಿಚಾರದ ಸಂಧಾನ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಮಾಧ್ಯಮಗಳಿಗೆ ಸಿಡಿ ವಿಚಾರ ಬಹಿರಂಗವಾಗದಂತೆ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ತಡೆದಿದ್ದರಾ ಎಂಬ ಅನುಮಾನ ಮೂಡಿದೆ. ಹೀಗೆ ಮಾಡಿದ್ದರೂ ಹೀಗೆ ಮಾಡಲು ಕಾರಣವೇನು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಇನ್ನು ಸ್ವಾಮೀಜಿಯ ರಾಸಲೀಲೇ ಹಿಂದೆ ಸಂಬಂಧಿಕರ ಕೈವಾಡ ಇದೆ ಎನ್ನಲಾಗುತ್ತಿದ್ದು, ಮಠದ ಆಸ್ತಿ ಹೊಡೆಯಲು ಸ್ವಾಮೀಜಿ ಸಂಬಂಧಿಕಕದ ಮಲ್ಲಿಕಾರ್ಜುನ, ಹಿಮಾಚಲ, ಚಂದ್ರು ಬಂಬವರು ಹನಿಟ್ರ್ಯಾಪ್ ಮಾಡಿದ್ದರೆಂಬ ಆರೋಪ ಕೇಳಿ ಬಂದಿದೆ. ಇವರೆಲ್ಲಾ ಮಠದಲ್ಲೇ ಕೆಲಸ ಮಾಡುತ್ತಿದ್ದರು ಅವರೇ ಹನಿಟ್ರ್ಯಾಪ್ ಮಾಡಿದ್ದಾರೆ ಎಂಸು ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರಾಮಣ್ಣ ಗಂಭೀರ ಆರೋಪ ಮಾಡಿದ್ದಾರೆ
ಅಲ್ಲದೇ ರಾಸಲೀಲೆ ವಿಡಿಯೋ ಮೂಲಕ ಲಕ್ಷ,ಲಕ್ಷ ಹಣ ಲೂಟಿ ಹೊಡೆದಿದ್ದಾರೆ, ಈಗ ಪ್ರತಿಭಟನೆ ಮಾಡುತ್ತಿರುವವರೇ ಹೀಗೆಲ್ಲಾ ಮಾಡಿದ್ದು ಎಂದು ರಾಮಣ್ಣ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.