ಮೋದಿಯಿಂದ ಮತ್ತೊಂದು ಮಹತ್ವದ ನಿರ್ಧಾರ: ಕ್ಯಾಬಿನೆಟ್ ಸಮಿತಿ ಪುನಾರಚನೆ

Published : Jun 06, 2019, 01:09 PM ISTUpdated : Jun 06, 2019, 01:15 PM IST
ಮೋದಿಯಿಂದ ಮತ್ತೊಂದು ಮಹತ್ವದ ನಿರ್ಧಾರ: ಕ್ಯಾಬಿನೆಟ್ ಸಮಿತಿ ಪುನಾರಚನೆ

ಸಾರಾಂಶ

ದುರ್ಬಲಗೊಳ್ಳುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ| ಸಮಸ್ಯೆ ನಿವಾರಣೆಗೆ ಮೋದಿ ಸರ್ಕಾರದಿಂದ ಬಹುದೊಡ್ಡ ತಯಾರಿ| 8 ಕ್ಯಾಬಿನೆಟ್ ;ಸಮಿತಿಗಳ ಪುನಾರಚನೆ| ಯಾವೆಲ್ಲಾ ಸಚಿವರಿಗೆ ಸಿಕ್ಕಿದೆ ಅಮಿತಿಗಳಲ್ಲಿ ಸ್ಥಾನ? ಇಲ್ಲಿದೆ ಕಂಪ್ಲೀಟ್ ಲಿಸ್ಟ್

ದೇಶದಲ್ಲಿ ದುರ್ಬಲಗೊಳ್ಳುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಪ್ರಧಾನಿ ಮೋದಿ ದೊಡ್ಡ ಮಟ್ಟದಲ್ಲಿ ತಯಾರಿ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ 8 ಕ್ಯಾಬಿನೆಟ್ ಸಮಿತಿಗಳನ್ನು ಪುನರ್ಚನೆ ಮಾಡುತ್ತಿದೆ. ಈ ಎಲ್ಲಾ 8 ಕ್ಯಾಬಿನೆಟ್ ಸಮಿತಿಗಳಲ್ಲಿ ಗೃಹ ಸಚಿವ ಅಮಿತ್ ಶಾ ಶಾಮೀಲಾಗಿದ್ದಾರೆ ಆದರೆ ರಾಜನಾಥ್ ಸಿಂಗ್ ರನ್ನು ರಾಜಕೀಯ ಹಾಗೂ ಸಂಸದೀಯ ವಿಚಾರಗಳನ್ನೊಳಗೊಂಡ ಸಮಿತಿಗಳಿಂದ ದೂರವಿರಿಸಲಾಗಿದೆ.

8 ಸಮಿತಿಗಳು ಯಾವುವು?

* ಅಪಾಂಯ್ಟ್‌ಮೆಂಟ್ ಕಮಿಟಿ ಆಫ್ ದ ಕ್ಯಾಬಿನೆಟ್

* ಕ್ಯಾಬಿನೆಟ್ ಕಮಿಟಿ ಆನ್ ಅಕಮಡೇಶನ್

* ಕ್ಯಾಬಿನೆಟ್ ಕಮಿಟಿ ಆನ್ ಎಕಾನಾಮಿಕ್ ಅಫೇರ್ಸ್

* ಕ್ಯಾಬಿನೆಟ್ ಕಮಿಟಿ ಆನ್ ಪಾರ್ಲಿಮೆಂಟ್ ಅಫೇರ್ಸ್

* ಕ್ಯಾಬಿನೆಟ್ ಕಮಿಟಿ ಆನ್ ಪಾಲಿಟಿಕಲ್ ಅಫೇರ್ಸ್

* ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿ

* ಕ್ಯಾಬಿನೆಟ್ ಕಮಿಟಿ ಆನ್ ಇನ್ವೆಸ್ಟ್ ಮೆಂಟ್ ಆ್ಯಂಡ್ ಗ್ರೋಥ್

* ಕ್ಯಾಬಿನೆಟ್ ಕಮಿಟಿ ಆನ್ ಎಂಪ್ಲಾಯ್ಮೆಂಟ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಶಾಮೀಲಾಗಿದೆ.

ಇವುಗಳಲ್ಲಿ ಅಪಾಂಯ್ಟ್‌ಮೆಂಟ್ ಕಮಿಟಿ ಆಫ್ ದ ಕ್ಯಾಬಿನೆಟ್ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಧಿಕಾರದಲ್ಲಿರುತ್ತವೆ.

ಕ್ಯಾಬಿನೆಟ್ ಕಮಿಟಿ ಆನ್ ಅಕಮಡೇಶನ್ ಗೃಹ ಸಚಿವ ಅಮಿತ್ ಶಾ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯಲ್ ಬಳಿ ಇರುತ್ತದೆ. ವಿಶೇಷ ಸಂದರ್ಭಗಳಲ್ಲಿ ಜಿತೇಂದ್ರ ಸಿಂಗ್ ಹಾಗೂ ಹರ್ದೀಪ್ ಸಿಂಗ್ ಕೂಡಾ ಈ ಸಮಿತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ಯಾಬಿನೆಟ್ ಕಮಿಟಿ ಆನ್ ಎಕನಾಮಿಕ್ ಅಫೇರ್ಸ್ ನಲ್ಲಿ ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಡಿವಿ ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ರವಿ ಶಂಕರ್ ಪ್ರಸಾದ್, ಹರ್ ಸಿಮ್ರತ್ ಕೌರ್ ಬಾದಲ್, ಡಾ. ಎಸ್ ಜಯಶಂಕರ್, ಪಿಯೂಷ್ ಗೋಯಲ್ ಹಾಗೂ ಧರ್ಮೇಂದ್ರ ಸಿಂಗ್ ಪಾಲ್ಗೊಳ್ಳಲಿದ್ದಾರೆ.

ಕ್ಯಾಬಿನೆಟ್ ಕಮಿಟಿ ಆನ್ ಪಾರ್ಲಿಮೆಂಟ್ ಅಫೇರ್ಸ್ ನಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರಾಮ್ ವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಥಾವರ್ ಚಂದ್ ಗೆಹ್ಲೋಟ್, ಪ್ರಕಾಶ್ ಜಾವ್ಡೇಕರ್ ಹಾಗೂ ಪ್ರಹ್ಲಾದ್ ಜೋಶಿಗೆ ಸ್ಥಾನ ನೀಡಲಾಗಿದೆ. ವಿಶಧೇಷ ಸಂದರ್ಭಗಳಲ್ಲಿ ಅರ್ಜುನ್ ರಾಮ್ ಮೇಘ್ವಾಲ್ ಹಾಗೂ ವಿ. ಮುರಳೀಧರನ್ ಪಾಲ್ಗೊಳ್ಳಲಿದ್ದಾರೆ.

ಕ್ಯಾಬಿನೆಟ್ ಕಮಿಟಿ ಆನ್ ಪೊಲಿಟಿಕಲ್ ಅಫೇರ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ರಾಮ್ ವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ತೋಮರ್, ರವಿಶಂಜಕರ್ ಪ್ರಸಾದ್, ಹರ್ ಸಿಮ್ರತ್ ಕೌರ್ ಬಾದಲ್, ಡಾ. ಹರ್ಷವರ್ಧನ್, ಪಿಯೂಷ್ ಗೋಯಲ್, ಅರವಿಂದ್ ಗಣ್ಪತ್ ಹಾಗೂ ಪ್ರಹ್ಲಾದ್ ಜೋಶಿ ಸ್ಥಾನ ಪಡೆದಿದ್ದಾರೆ.

ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟೀಸ್ ನಲ್ಲಿ ಪಿಎಂ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಎಸ್. ಜೈಶಂಕರ್  ಸ್ಥಾನ ಪಡೆದಿದ್ದರೆ, ಇತ್ತ ಕ್ಯಾಬಿನೆಟ್ ಕಮಿಟಿ ಆನ್ ಇನ್ವೆಸ್ಟ್ ಮೆಂಟ್ ಆ್ಯಂಡ್ ಗ್ರೋಥ್ ನಲ್ಲಿ ಮೋದಿ, ಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಹಾಗೂ ಪಿಯೂಷ್ ಗೋಯಲ್ ಶಾಮೀಲಾಗಿದ್ದಾರೆ.

ಕ್ಯಾಬಿನೆಟ್ ಕಮಿಟಿ ಆನ್ ಎಂಪ್ಲಾಯ್ಮೆಂಟ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಪ್ರಧಾನಿ ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್, ರಮೇಶ್ ಪೋಖ್ರಿಯಾಲ್, ಧರ್ಮೇಂದ್ರ ಪ್ರಧಾನ್, ಮಹೇಂದ್ರ ನಾಥ್ ಪಾಂಡೆ, ಸಂತೋಷ್ ಕುಮಾರ್ ಗಂಗ್ವಾರ್ ಹಾಗೂ ಹರ್ದೀಪ್ ಸಿಂಗ್ ಪುರಿ ಇರುತ್ತಾರೆ. ವಿಶೇಷ ಸಂದರ್ಭಗಳಲ್ಲಿ ನಿತಿನ್ ಗಡ್ಕರಿ, ಹರ್ ಸಿಮ್ರತ್ ಕೌರ್ ಬಾದಲ್, ಸ್ಮೃತಿ ಇರಾನಿ ಹಾಗೂ ಪ್ರಹ್ಲಾದ್ ಸಿಂಗ್ ಪಟೇಲ್ ರನ್ನು ಶಾಮೀಲುಗೊಳಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 9.67 ಲಕ್ಷ ಟನ್‌ ತೊಗರಿ ಖರೀದಿಗೆ ಕೇಂದ್ರ ಅಸ್ತು
ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌