ವೈಷ್ಣೋದೇವಿ ದರ್ಶನಕ್ಕೆ 12 ದಿನದ ಟೂರ್‌ ಪ್ಯಾಕೇಜ್‌

By Web DeskFirst Published Jun 6, 2019, 12:14 PM IST
Highlights

 ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌ ವೈಷ್ಣೋದೇವಿ ದರ್ಶನ ಯಾತ್ರೆ’ ಪ್ರವಾಸವನ್ನು ಪರಿಚಯಿಸಿದೆ. ಜೂನ್‌ 23ರಿಂದ ಪ್ರಾರಂಭವಾಗುವ ಯಾತ್ರೆ ದೆಹಲಿ, ಅಮೃತಸರ, ವೈಷ್ಣೋದೇವಿ, ಹರಿದ್ವಾರ, ಮಥುರಾ ಹಾಗು ಆಗ್ರಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಹನ್ನೆರಡು ದಿನಗಳಲ್ಲಿ ನೋಡಬಹುದಾಗಿದೆ.

ಬೆಂಗಳೂರು :  ಅತ್ಯಂತ ಕಡಿಮೆ ದರದಲ್ಲಿ ಉತ್ತರ ಭಾರತದ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸ ಹಮ್ಮಿಕೊಳ್ಳುವವರಿಗಾಗಿ ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌(ಐಆರ್‌ಸಿಟಿಸಿ) ಭಾರತ ದರ್ಶನ ಹೆಸರಿನಲ್ಲಿ ‘ವೈಷ್ಣೋದೇವಿ ದರ್ಶನ ಯಾತ್ರೆ’ ಪ್ರವಾಸವನ್ನು ಪರಿಚಯಿಸಿದೆ.

ಜೂನ್‌ 23ರಿಂದ ಪ್ರಾರಂಭವಾಗುವ ಯಾತ್ರೆ ದೆಹಲಿ, ಅಮೃತಸರ, ವೈಷ್ಣೋದೇವಿ, ಹರಿದ್ವಾರ, ಮಥುರಾ ಹಾಗು ಆಗ್ರಾ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಹನ್ನೆರಡು ದಿನಗಳಲ್ಲಿ ನೋಡಬಹುದಾಗಿದೆ. ಈ ಯಾತ್ರೆಗೆ ಈಗಾಗಲೆ ಟಿಕೆಟ್‌ ಬುಕ್ಕಿಂಗ್‌ ಪ್ರಾರಂಭವಾಗಿದೆ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕ ರಮೇಶ್‌ ತಿಳಿಸಿದರು. ಹನ್ನೆರೆಡು ದಿನಗಳ ಪ್ರವಾಸಕ್ಕೆ ಪ್ರತಿಯೊಬ್ಬರಿಗೂ .12,390 ನಿಗದಿ ಮಾಡಲಾಗಿದೆ ಎಂದರು.

ದಕ್ಷಿಣ ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಮಧುರೈ, ದಿಂಡಗಲ್‌, ಈರೋಡ್‌, ಸೇಲಂ, ವೈಟ್‌ ಫೀಲ್ಡ್‌ ಮತ್ತು ಪೆರಂಬೂರಿನಿಂದ ಜೂನ್‌ 23ರಿಂದ ಹೊರಡಲಿವೆ. ಅಲ್ಲಿಂದ ದೆಹಲಿ, ಅಮೃತಸರ, ವೈಷ್ಣೋದೇವಿ, ಹರಿದ್ವಾರ, ಮಥುರ ಪ್ರವಾಸ ಮುಗಿಸಿ ಜುಲೈ 4ರಂದು ಬೆಂಗಳೂರಿಗೆ ಹಿಂದಿರುಗಲಿದ್ದೇವೆ ಎಂದು ಅವರು ಹೇಳಿದರು.

ಭಾರತ ದರ್ಶನ್‌ ಪ್ರವಾಸ ಕೈಗೊಳ್ಳಲು ಆಸಕ್ತಿಯುಳ್ಳವರು ನಂ 82, ಐಡಿಬಿಐ ಬ್ಯಾಂಕ್‌, 1ನೇ ಮಹಡಿ, ಎಸ್‌ಎಂಆರ್‌ ಆರ್ಕೇಡ್‌, ಡಾ.ರಾಜ್‌ಕುಮಾರ್‌ ರಸ್ತೆ, ಬೆಂಗಳೂರು ಇಲ್ಲಿಗೆ ಸಂಪರ್ಕಿಸಬಹುದಾಗಿದೆ. ದೂ.ಸಂಖ್ಯೆ- 080 22960014, 9741426474, ಬೆಂಗಳೂರು ರೈಲು ನಿಲ್ದಾಣ ದೂ.ಸಂಖ್ಯೆ 22960013, 9741429437, ಮೈಸೂರು ರೈಲು ನಿಲ್ದಾಣ 0821 2426001, 9741421486, ಹುಬ್ಬಳ್ಳಿ ರೈಲು ನಿಲ್ದಾಣ- 9741421088ಗೆ ಸಂಪರ್ಕಿಸಬಹುದು.

click me!