ಸರ್ಕಾರಿ ಸೊತ್ತು ಮಾರಾಟ ಮಾಡಿ ಸಾಲ ಮನ್ನಾ..?

First Published May 31, 2018, 11:00 AM IST
Highlights

ರೈತರ ಸಾಲ ಮನ್ನಾ ಮಾಡಲು 53 ಸಾವಿರ ಕೋಟಿ ರು.ಗಳಷ್ಟು ಅಗತ್ಯ ಇದೆ. ಆದರೆ, ಅಷ್ಟೊಂದು ಹಣ ಸರ್ಕಾರದ ಖಜಾನೆಯಲ್ಲಿ ಇಲ್ಲವಾಗಿರುವುದರಿಂದ ಸಾಲ ಮನ್ನಾ ಮಾಡಲು ಹಣ ಹೊಂದಿಸುವುದು ಮುಖ್ಯಮಂತ್ರಿಗೆ ತಲೆಬಿಸಿಯಾಗಿದೆ. ಈ ನಿಟ್ಟಿನಲ್ಲಿ ಯಾವ ಮೂಲಗಳಿಂದ ಹಣ ಸಂಗ್ರಹ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು[ಮೇ.31]: ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಆಶ್ವಾಸನೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಹಣ ಹೊಂದಿಸಲು ತೀವ್ರ ಕಸರತ್ತು ಆರಂಭಿಸಿದ್ದು, ಯಾವುದೇ ತಕಾರರು ಇಲ್ಲದ ಸರ್ಕಾರದ ವಶದಲ್ಲಿರುವ ಸ್ವತ್ತನ್ನು ಮಾರಾಟ ಮಾಡುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
ರೈತರ ಸಾಲ ಮನ್ನಾ ಮಾಡಲು 53 ಸಾವಿರ ಕೋಟಿ ರು.ಗಳಷ್ಟು ಅಗತ್ಯ ಇದೆ. ಆದರೆ, ಅಷ್ಟೊಂದು ಹಣ ಸರ್ಕಾರದ ಖಜಾನೆಯಲ್ಲಿ ಇಲ್ಲವಾಗಿರುವುದರಿಂದ ಸಾಲ ಮನ್ನಾ ಮಾಡಲು ಹಣ ಹೊಂದಿಸುವುದು ಮುಖ್ಯಮಂತ್ರಿಗೆ ತಲೆಬಿಸಿಯಾಗಿದೆ. ಈ ನಿಟ್ಟಿನಲ್ಲಿ ಯಾವ ಮೂಲಗಳಿಂದ ಹಣ ಸಂಗ್ರಹ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾವುದೇ ತಕರಾರು ಇಲ್ಲದ ಸ್ಥಳೀಯ ಸಂಸ್ಥೆ, ಬಿಡಿಎ ಸೇರಿದಂತೆ ಇತರೆ ಸಂಸ್ಥೆಗಳ ಸ್ವಾಧೀನದಲ್ಲಿರುವ ಸರ್ಕಾರಿ ಜಮೀನುಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸುವ ಯೋಚನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ. ಅನಗತ್ಯ ದುಂದುವೆಚ್ಚದ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಸಂಪನ್ಮೂಲ ಕ್ರೋಢೀಕರಿಸುವ ಉದ್ದೇಶವನ್ನು ಕುಮಾರಸ್ವಾಮಿ ಹೊಂದಿದ್ದು, ಸರ್ಕಾರದ ಸ್ವತ್ತವನ್ನು ಮಾರಾಟ ಮಾಡಿ ಹಣ ಒದಗಿಸುವ ಆಲೋಚನೆಯನ್ನೂ ಮಾಡಿದ್ದಾರೆ. ಇದರಿಂದಲೂ ಕೋಟ್ಯಂತರ ರು. ಸಂಗ್ರಹವಾಗಬಹುದು ಎಂಬ ನಿರೀಕ್ಷೆ ಮುಖ್ಯಮಂತ್ರಿ ಅವರದ್ದಾಗಿದೆ ಎಂದು ಹೇಳಲಾಗಿದೆ.

click me!