ಪ್ರಣಬ್ ಮುಖರ್ಜಿ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ?

First Published May 31, 2018, 10:41 AM IST
Highlights

ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದವರು, ರಾಜಕೀಯಕ್ಕೆ ಗುಡ್‌ಬೈ ಹೇಳಿದಂತೆ ಎಂಬುದು ಜನಜನಿತ. ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರೆಸ್ಸೆಸ್ ಸಮಾರಂಭಕ್ಕೆ ಹೋಗಲು ನಿರ್ಧರಿಸುವ ಮೂಲಕ, ತಾವಿನ್ನೂ ಸಕ್ರಿಯ ರಾಜಕೀಯಕ್ಕೆ ವಿದಾಯ ಹೇಳಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. 

ನವದೆಹಲಿ (ಮೇ. 31):  ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದವರು, ರಾಜಕೀಯಕ್ಕೆ ಗುಡ್‌ಬೈ ಹೇಳಿದಂತೆ ಎಂಬುದು ಜನಜನಿತ. ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರೆಸ್ಸೆಸ್ ಸಮಾರಂಭಕ್ಕೆ ಹೋಗಲು ನಿರ್ಧರಿಸುವ ಮೂಲಕ, ತಾವಿನ್ನೂ ಸಕ್ರಿಯ ರಾಜಕೀಯಕ್ಕೆ ವಿದಾಯ ಹೇಳಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. 

ಅದರಲ್ಲೂ ತಾವು ರಾಜಕೀಯದ ಜೀವನದ ಪೂರ್ಣ ಭಾಗ ಕಳೆದ ಕಾಂಗ್ರೆಸ್ ಪಕ್ಷ ಬಹುವಾಗಿ ವಿರೋಧಿಸುವ ಆರ್ ಎಸ್‌ಎಸ್‌ನ ಕಾರ್ಯಕ್ರಮಕ್ಕೇ ಪ್ರಣಬ್ ಹೋಗುತ್ತಿರುವುದು ಅವರು ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವುದುರ ಸುಳಿವು ಎಂಬ ವಿಶ್ಲೇಷಣೆಯೊಂದು ಕೇಳಿಬಂದಿದೆ.

ಇದರ ಜೊತೆಗೆ  2019 ರಲ್ಲಿ ಎನ್‌ಡಿಎ ಹಾಗೂ ಯುಪಿಎಯೇತರ ಪಕ್ಷಗಳನ್ನು ಒಗ್ಗೂಡಿಸಿ ಪ್ರಧಾನಿ ಹುದ್ದೆಯ ಮೇಲೆ ಪ್ರಣಬ್ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಮೋದಿಗೆ ಸರಿಸಾಟಿಯಾಗಬಲ್ಲ ನಾಯಕ ಹಾಗೂ ಎಲ್ಲರಿಗೂ ಸಹ್ಯವಾಗಬಲ್ಲ ನಾಯಕ ಎಂಬ ಹಿರಿಮೆ ಹೊಂದಿರುವ ಪ್ರಣಬ್’ರನ್ನು ತೃತೀಯರಂಗದಲ್ಲಿ ಕಾಣಿಸಿಕೊಳ್ಳಬಹುದಾದ ಪಕ್ಷಗಳ ನಾಯಕರೂ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ ಎಂದು ಎನ್ ಡಿಟೀವಿ ವರದಿ ಮಾಡಿದೆ.

ಯುಪಿಎ ಹಾಗೂ ಎನ್‌ಡಿಎಯೇತರ ತೃತೀಯ ರಂಗದ ಪಕ್ಷಗಳನ್ನು ಒಗ್ಗೂಡಿಸುವುದು ಪ್ರಣಬ್ ಅವರ ಇರಾದೆ. ಅದಕ್ಕೆಂದೇ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ತಂದೆ  ಬಿಜು ಪಟ್ನಾಯಕ್ ಅವರ ಆತ್ಮಕಥನ ಬಿಡುಗಡೆ ಸಮಾರಂಭಕ್ಕೆ ಭುವನೇಶ್ವರಕ್ಕೆ ತೆರಳಿದ್ದಾಗ ಅಲ್ಲಿ ಚರ್ಚೆ ನಡೆಸಿದ್ದುಂಟು. ಈ ಚರ್ಚೆಯಲ್ಲಿ ಬಿಜೆಪಿ ವರಿಷ್ಠ ನಾಯಕ ಎಲ್.ಕೆ. ಅಡ್ವಾಣಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಕೂಡ ಇದ್ದರು. ಇನ್ನು ಪ್ರಣಬ್ ರಾಷ್ಟ್ರಪತಿ ಆಗಿದ್ದ ಅವಧಿಯಲ್ಲೇ ನವೀನ್ ಪಟ್ನಾಯಕ್ ಒಮ್ಮೆ ಮಧ್ಯಾಹ್ನದ ಭೋಜನ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ಬಂದಿದ್ದರು. ಆಗ ಮಮತಾ ಬ್ಯಾನರ್ಜಿ ಅವರಿಗೆ ಫೋನು ಮಾಡಿ ಈ ಇಬ್ಬರೂ ನಾಯಕರು
ತೃತೀಯ ರಂಗ ರಚನೆ ಬಗ್ಗೆ ಮಾತನಾಡಿದ್ದರು ಎಂದು ಮೂಲಗಳು ಹೇಳಿವೆ.

ಈ ವಿದ್ಯಮಾನದ ಬಗ್ಗೆ ಯಾವೊಬ್ಬ ನಾಯಕರೂ ಅಧಿಕೃತವಾಗಿ ಮಾತನಾಡಲು ಧೈರ್ಯ ತೋರುತ್ತಿಲ್ಲ. ಈ ವಿಷಯದಲ್ಲಿ ಮಾಜಿ ರಾಷ್ಟ್ರಪತಿ ಇರುವುದೇ ಇದಕ್ಕೆ ಕಾರಣ. ಆದರೆ ಖಾಸಗಿಯಾಗಿ ಮಾನಾಡಿದ ಕಾಂಗ್ರೆ ಸ್, ಬಿಜೆಪಿ, ತೃಣಮೂಲ ಹಾಗೂ ಬಿಜೆಪಿ ನಾಯಕರು, ಇಂಥ ಒಂದು ಯತ್ನ ನಡೆಯುತ್ತಿದೆ ಎಂದು ಒಪ್ಪಿಕೊಂಡರು. 2004  ರಲ್ಲಿ ಪ್ರಣಬ್‌ಗೆ ಪ್ರಧಾನಿ ಆಗುವ ಅವಕಾಶವಿದ್ದರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರು ಮನಮೋಹನ್ ಸಿಂಗ್
ರನ್ನು ಆಯ್ಕೆ ಮಾಡಿದ್ದರು. ಈ ಬಗ್ಗೆ ತಮ್ಮ ಆತ್ಮಕಥನದಲ್ಲಿ ಮುಖರ್ಜಿ ಅವರು ಹೇಳಿಕೊಂಡಿದ್ದರು.  

click me!