ಸಾವಿನ ಗುಡುಗು ಸಿಡಿಲು : 4 ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ

First Published May 4, 2018, 9:32 PM IST
Highlights

ಕಳೆದ 2 ದಿನಗಳಿಂದ ಗುಡುಗು ಸಿಡಿಲು, ಚಂಡಮಾರುತ, ಬಿರುಗಾಳಿಯಿಂದ 124 ಮಂದಿ ಮೃತಪಟ್ಟಿದ್ದಾರೆ. ಅತೀ ಹೆಚ್ಚು ಸಾವು ಸಂಭವಿಸಿರುವುದು ಉತ್ತರ ಪ್ರದೇಶದಲ್ಲಿ. ಇಲ್ಲಿ 73 ಮಂದಿ ಮೃತಪಟ್ಟಿದ್ದು 91 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆಗ್ರದಲ್ಲಿ ಗುಡುಗು ಸಿಡಿಲಿನ ಅಬ್ಬರ ಅತಿ ಹೆಚ್ಚಿದೆ ಎಂದು ಗೃಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 

ನವದೆಹಲಿ(ಮೇ.04): ಪಶ್ಚಿಮ ಬಂಗಾಳ, ಒಡಿಶಾ,ಬಿಹಾರ ಹಾಗೂ ಉತ್ತರ ಪ್ರದೇಶ  ರಾಜ್ಯಗಳಲ್ಲಿ ಅಪಾಯಕಾರಿಯಾದ ಗುಡುಗು ಸಿಡಿಲು, ಚಂಡ ಮಾರುತ, ಬಿರುಗಾಳಿ ಸಂಭವಿಸಲಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಕೇಂದ್ರ  ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ. 
ಕಳೆದ 2 ದಿನಗಳಿಂದ ಚಂಡ ಮಾರುತ, ಬಿರುಗಾಳಿ,  ಗುಡುಗು ಸಿಡಿಲಿನಿಂದ 124 ಮಂದಿ ಮೃತಪಟ್ಟಿದ್ದಾರೆ. ಅತೀ ಹೆಚ್ಚು ಸಾವು ಸಂಭವಿಸಿರುವುದು ಉತ್ತರ ಪ್ರದೇಶದಲ್ಲಿ. ಇಲ್ಲಿ 73 ಮಂದಿ ಮೃತಪಟ್ಟಿದ್ದು 91 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆಗ್ರದಲ್ಲಿ ಗುಡುಗು ಸಿಡಿಲಿನ ಅಬ್ಬರ ಅತಿ ಹೆಚ್ಚಿದೆ ಎಂದು ಗೃಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 
4 ರಾಜ್ಯಗಳಲ್ಲಿ 12 ಸಾವಿರ ವಿದ್ಯುತ್ ತಂತಿಗಳು, 25 ಟ್ರಾನ್ಸ್ಫಾರ್ಮರ್ಸ್ಗಳಿಗೆ ಹಾನಿಯುಂಟಾಗಿದೆ. ರಾಜಸ್ಥಾನದಲ್ಲಿ 35, ತೆಲಂಗಾಣ 8, ಉತ್ತರಖಂಡದಲ್ಲಿ 6, ಪಂಜಾಬಿನಲ್ಲಿ 2 ಮಂದಿ ಸಾವನಪ್ಪಿದ್ದಾರೆ. ಅಸ್ಸಾಂ, ಮೇಘಾಲಯಾ, ನಾಗಲ್ಯಾಂಡ್, ಮಣಿಪುರ್, ಮಿಜೋರಾಂ ಹಾಗೂ ತ್ರಿಪುರ ರಾಜ್ಯಗಳಲ್ಲೂ ಗುಡುಗು ಸಂಭವಿಸುವ  ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

click me!