
ಕೋಪನ್'ಹೇಗನ್(ಮೇ.04): ಆಯ್ಕೆದಾರರ ಲೈಂಗಿಕ ದುರ್ನಡತೆ ವಿವಾದದ ಹಿನ್ನಲೆಯಲ್ಲಿ 2018ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಪ್ರಶಸ್ತಿಗೆ ಆಯ್ಕೆ ಸಮಿತಿ ಸದಸ್ಯರೊಬ್ಬರ ಪತಿಯ ಲೈಂಗಿಕ ದಿರ್ನಡತೆ ಹಾಗೂ ಆರ್ಥಿಕ ಅಪರಾಧಗಳ ವಿವಾದದ ಹಿನ್ನಲೆಯಲ್ಲಿ ಈ ಬಾರಿ ಪ್ರಶಸ್ತಿ ವಿತರಣೆಯನ್ನು ರದ್ದುಗೊಳಿಸಿ ಮುಂದಿನ ಬಾರಿಗೆ ಮುಂದೂಡಲಾಗಿದೆ ಎಂದು ಸ್ಟಾಕ್'ಹೋಮ್'ನಲ್ಲಿ ನಡೆದ ಸಭೆಯಲ್ಲಿ ಅಕಾಡಮಿಯ ಶಾಶ್ವತ ಕಾರ್ಯದರ್ಶಿ ಆಂಡರ್ಸ್ ಒಲ್ಸ್ಸನ್ ತಿಳಿಸಿದರು.
ವಿಶ್ವದಲ್ಲೇ ಈ ಪ್ರಶಸ್ತಿಗೆ ಉನ್ನತ ಗೌರವವಿದ್ದು ಯಾವಾಗಲು ಸಾಹಿತ್ಯ ಪ್ರಶಸ್ತಿ ವಿತರಣೆಗೆ ಯಾವುದೇ ರೀತಿಯಲ್ಲಿ ಅಗೌರವ ಉಂಟಾಗಬಾರದೆಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ. 2018ರ ಪ್ರಶಸ್ತಿಯನ್ನು 2019ರಲ್ಲಿಯೇ ನೀಡಲಾಗುತ್ತದೆ. 1943ರ ಯುದ್ಧದ ಸಂದರ್ಭವನ್ನು ಹೊರತುಪಡಿಸಿದರೆ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಂದೂಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಆಯ್ಕೆ ಸಮಿತಿಯ ಸದಸ್ಯರಾದ ಖ್ಯಾತ ಕವಯತ್ರಿಯಾದ ಕ್ಯಾತರೀನಾ ಫೋರ್ಟೆನ್ಸನ್ ಅವರ ಪತಿ ಜೀನ್ ಕ್ಲೂಡಿ ಅರ್ನಾಲ್ಟ್ ಅವರ ವಿರುದ್ಧ ಲೈಂಗಿಕ ಹಗರಣಗಳು ಹಾಗೂ ಆರ್ಥಿಕ ಅಪರಾಧಗಳು ವಿವಾದ ಕೇಳಿ ಬಂದ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಆಕೆಯನ್ನು ಬಲವಂತದಿಂದ ರಾಜೀನಾಮೆ ಕೊಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.