
ಬೀದರ್(ಅ.13): ತುಂಬು ಗರ್ಭಿಣಿಯೊಬ್ಬಳು ನಡು ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಔರಾದ್ ಪಟ್ಟಣದ ಬಸವೇಶ್ವರ ವೃತದ ಕೆನರಾ ಬ್ಯಾಂಕ್ ಎದುರಿನ ಮುಖ್ಯರಸ್ತೆಯಲ್ಲೆ ಯಡೂರ ಗ್ರಾಮದ ಸುರೇಖಾ ಎಂಬ ಗಭಿ೯ಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ನಿನ್ನೆ ಸಕಾ೯ರಿ ಆಸ್ಪತ್ರೆಗೆ ದಾಖಲಾಗಿದ್ದ ಸುರೇಖಾಗೆ ರಕ್ತ ದೊತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಯಾವುದೇ ಪರಿಕ್ಷೆ ಮಾಡದೆ ಡಾ. ಶಿಲ್ಪಾ ಶಿಂಧೆ ಅವರು ಆಸ್ಪತ್ರೆಯಿಂದ ಹೊರ ಹಾಕಿದ್ದಾರೆ.. ಇವತ್ತು ನಸುಕಿನ ಜಾವ ಹೊಟ್ಟೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಸುರೇಖಾ ತಾಯಿ ಅವಳನ್ನು ಬೀದರ್`ಗೆ ಸಾಗಿಸಬೇಕು ಅಂತ ರಸ್ತೆಯಲ್ಲಿ ಕಾಯುತ್ತಿದ್ದಾಗಲೇ ಹೆರಿಗೆಯಾಗಿದೆ. ಇನ್ನೂ ತನಗಾದ ಅನ್ಯಾಯದ ಬಗ್ಗೆ ಹಿರಿಯ ವೈದ್ಯಾಧಿಕಾರಿಗಳಿಗೆ ಸುರೇಖಾ ದೂರು ನೀಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.