
ಹರಪನಹಳ್ಳಿ(ಅ.13): ಅ. 4ರಿಂದ 6ರವರೆಗೆ ನೇಪಾಳದ ಪೋಖರಾದಲ್ಲಿ ನಡೆದ 3ನೇ ಅಂತಾರಾಷ್ಟ್ರೀಯ ಇಂಡೋ ನೇಪಾಳ ಗ್ರಾಮೀಣ ಕ್ರೀಡಾ ಕೂಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ 4-1 ಅಂತರದಲ್ಲಿ ಜಯಗಳಿಸಿದೆ. ಈ ವಿಜಯದಲ್ಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದ ಪೂಜಾರ ಹರೀಶ ಸಹ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ರೂರಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ (ಆರ್‌ಜಿಎಪ್‌ಐ) ಸಂಸ್ಥೆ ವತಿಯಿಂದ ಕಳಿಸಲ್ಪಟ್ಟ ಭಾರತ ತಂಡಕ್ಕೆ ಹರಿಯಾಣದ ರಾಕೇಶ್ ನಾಯಕ. ಇಂತಹ ತಂಡದಲ್ಲಿ ಸ್ಥಾನ ಪಡೆದ ಇಲ್ಲಿಯ ಗ್ರಾಮೀಣ ಕ್ರೀಡಾಪಟು ಹರೀಶ ಪಟ್ಟಣದಲ್ಲಿ ಪೆರಿಯಾರ್ ಹಾಗೂ ಎಂ.ಪಿ. ಪ್ರಕಾಶ್ ಸೇವಾ ಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನೇಪಾಳದ ವಿರುದ್ಧ ಒಟ್ಟು 5 ಪಂದ್ಯಗಳನ್ನು ಆಡಲಾಯಿತು. ಅದರಲ್ಲಿ 19 ವರ್ಷ ಮೇಲ್ಪಟ್ಟ ತಂಡದ ನಾವು 4-1 ಅಂತರದಲ್ಲಿ ಜಯ ಸಾಧಿಸಿದೆವು. ಟ್ರೋಫಿ, ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ಪತ್ರ ನೀಡಲಾಗಿದೆ ಎಂದು ಹೇಳಿದರು.
ಹರಿಯಾಣದ ನರೇಶ ತರಬೇತುದಾರರಾಗಿದ್ದು, ನಮ್ಮಲ್ಲಿ ಹೂವಿನ ಹಡಗಲಿ ತಾಲೂಕಿನ ಹ್ಯಾರಡ ಗ್ರಾಮದ ಚಂದ್ರಶೇಖರ ಅಜಾದ್ ಕ್ಲಬ್‌ನವರು ತರಬೇತಿ ನೀಡಿದ್ದರು ಎಂದು ಸ್ಮರಿಸಿದರು.
ಪೆರಿಯಾರ್ ಹಾಗೂ ಎಂ.ಪಿ.ಪ್ರಕಾಶ್ ಸೇವಾ ಸಂಸ್ಥೆಯ ರಾಜ್ಯ ಗೌರವಾಧ್ಯಕ್ಷ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತ ಕಳಪೆ ಸಾಧನೆ ಮಾಡುತ್ತಿದೆ. ಇಂತಹ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪದಕಗಳನ್ನು ಪಡೆಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.