ಗಾಯಾಳು ಸೈನಿಕರ ಪಿಂಚಣಿಗೆ ಕತ್ತರಿ

Published : Oct 10, 2016, 11:16 AM ISTUpdated : Apr 11, 2018, 12:47 PM IST
ಗಾಯಾಳು ಸೈನಿಕರ ಪಿಂಚಣಿಗೆ ಕತ್ತರಿ

ಸಾರಾಂಶ

ಸೆ.28 ರಂದು ಭಾರತೀಯ ಯೋಧರು ಸರ್ಜಿಕಲ್ ದಾಳಿ ನಡೆಸಿ ತಮ್ಮ ಪರಾಕ್ರಮ ಮೆರೆದಿದ್ದರೆ, ಸೆ.30ರಂದು ರಕ್ಷಣಾ ಸಚಿವಾಲಯವು, ಗಾಯಗೊಂಡು ಸೇನೆಯಿಂದ ನಿವೃತ್ತರಾಗಿರುವ ಯೋಧರ ಪಿಂಚಣಿಯಲ್ಲಿ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿ ಯೋಧರಿಗೆ ಶಾಕ್ ನೀಡಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವಿಸ್ತೃತ ವರದಿ ಮಾಡಿದೆ.

ಒಂದೆಡೆ ಸರ್ಜಿಕಲ್ ದಾಳಿಯನ್ನು ಯಶಸ್ವಿಯಾಗಿ ನಡೆಸಿದ್ದೇವೆಯೆಂದು ಕೇಂದ್ರ ಸರ್ಕಾರ ಹೆಮ್ಮೆಯಿಂದ ಬೀಗುತ್ತಿದ್ದರೆ, ಇನ್ನೊಂದೆಡೆ ಅಂಗವೈಕಲ್ಯವುಂಟಾಗಿ ಸೇನೆಯಿಂದ ನಿವೃತ್ತರಾಗಿರುವ ಯೋಧರ ಪಿಂಚಣಿಯನ್ನು ಕಡಿತಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿ ಯೋಧರಿಗೆ ಅಘಾತ ನೀಡಿದೆ.

ಸೆ.28 ರಂದು ಭಾರತೀಯ ಯೋಧರು ಸರ್ಜಿಕಲ್ ದಾಳಿ ನಡೆಸಿ ತಮ್ಮ ಪರಾಕ್ರಮ ಮೆರೆದಿದ್ದರೆ, ಸೆ.30ರಂದು ರಕ್ಷಣಾ ಸಚಿವಾಲಯವು, ಗಾಯಗೊಂಡು ಸೇನೆಯಿಂದ ನಿವೃತ್ತರಾಗಿರುವ ಯೋಧರ ಪಿಂಚಣಿಯಲ್ಲಿ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿ ಯೋಧರಿಗೆ ಶಾಕ್ ನೀಡಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವಿಸ್ತೃತ ವರದಿ ಮಾಡಿದೆ.

ಶೇ.100ರಷ್ಟು ಅಂಗವೈಕಲ್ಯವುಂಟಾದ ಕಿರಿಯ ಯೋಧರ ಪಿಂಚಣಿಯಲ್ಲಿ ರೂ.18 ಸಾವಿರ ಕಡಿತಗೊಳಿಸಲಾಗಿದೆ. ಅವರಿಗೆ ಸಿಗುತ್ತಿದ್ದ ರೂ.45,200 ಪಿಂಚಣಿಯನ್ನು ಕಡಿತಗೊಳಿಸಿ ರೂ.27,200ಕ್ಕೆ ಇಳಿಸಲಾಗಿದೆ. ಅದೇ ವಿಭಾಗದ ಹಿರಿಯ ಅಧಿಕಾರಿಗಳಿಗೆ ಇನ್ನೂ ದೊಡ್ಡ ಶಾಕ್ ನೀಡಲಾಗಿದೆ. ಅವರ ಪಿಂಚಣಿಯಲ್ಲಿ ರೂ.70,000 ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.

ಸೇನೆಯ ಬೆನ್ನೆಲುಬು ಎಂದೇ ಹೇಳಲಾಗುವ ‘ಜೂನಿಯರ್ ಕಮಿಷನ್ಡ್ ಆಫಿಸರ್’ಗಳ ಪಿಂಚಣಿಯನ್ನು ರೂ.40,000ದಷ್ಟು ಕಡಿತಗೊಳಿಸಲಾಗಿದೆ.

ಇನ್ನು ಮೇಜರ್ ಹುದ್ದೆಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳು ಮಾಸಿಕ 98,300 ರೂ ಪಿಂಚಣಿ ಪಡೆಯುತ್ತಿದ್ದು. ಸೇವೆಯಲ್ಲಿದ್ದಾಗಲೇ ಶೇ.100% ಅಂಗವೈಕಲ್ಯಕ್ಕೆ ತುತ್ತಾದರೆ ಅವರು ಕೇವಲ 27,000 ರೂಪಾಯಿಗಳನ್ನು ಮಾತ್ರ ಪಡೆಯಲಿದ್ದಾರೆ. ಒಟ್ಟಾರೆ ಸರ್ಕಾರ ಈ ಹೊಸ ನೀತಿಯನ್ನು ಪ್ರಕಟಿಸುವ ಮೂಲಕ ಸೈನಿಕರ ಬಗ್ಗೆ ಧ್ವಂದ್ವ ನಿಲುವು ತಳೆದಂತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸರ್ಕಾರದ ಕ್ರಮದಿಂದ ಅಘಾತವಾಗಿದೆಯೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರ್ಕಾರವು ನಮ್ಮ ಬೆನ್ನಿಗೆ ಇರಿದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಭಾರತದ ಆರು ಸಿಬ್ಬಂದಿಗೆ ಪಾಕಿಸ್ತಾನದಿಂದ ನೆರವು
4 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಶಾಸಕರದ್ದೇ ಭಾರೀ ಬಲ ಅಚ್ಚರಿ; ಅಭ್ಯರ್ಥಿಗಳ ಗೆಲುವಿನ ದರ ಶೇ.80