
ಶಿವಮೊಗ್ಗ(ಜ.17): ಬಿಎಸ್ವೈ - ಈಶ್ವರಪ್ಪ ಬಣಗಳ ನಡುವೆ ಕುದಿಯುತ್ತಿದ್ದ ಆಂತರಿಕ ಬೇಗುದಿ ಕಟ್ಟೆ ಒಡೆದಿದೆ. ಶಿವಮೊಗ್ಗದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ರುದ್ರೇಗೌಡರ ಸಮ್ಮಖದಲ್ಲೇ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ.
ನಿನ್ನೆ ಪತ್ರಿಕಾಗೋಷ್ಠಿ ವೇಳೆ ಈಶ್ವರಪ್ಪ ಬೆಂಬಲಿಗರು ಗೂಂಡಾಗಿರಿ ಮಾಡಿದ್ದಾರೆ ಎಂದು ಬಿಎಸ್ವೈ ಬೆಂಬಲಿಗರು ಆರೋಪಿಸಿದ್ದು, ಈಶ್ವರಪ್ಪ ಬೆಂಬಲಿಗರಾದ ದತ್ತಾತ್ರಿ, ಚನ್ನಬಸಪ್ಪ, ಜ್ಞಾನೇಶ್ವರ್, ಗಿರೀಶ್ ಪಟೇಲ್ ಉಚ್ಚಾಟನೆಗೆ ಆಗ್ರಹಿಸಿದರು. ಬಿಎಸ್`ವೈ ಬೆಂಬಲಿಗ ಪುರುಷೋತ್ತಮ್ ಸಲ್ಲಿಸಿದ ಈ ಮನವಿಗೆ ಈಶ್ವರಪ್ಪ ಬೆಂಬಲಿಗರಿಂದ ಆಕ್ಷೇಪ ವ್ಯಕ್ತವಾಗಿ ಮಾತಿನ ಚಕಮಕಿ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.