
ಬೆಂಗಳೂರು (ಅ. 12): ಎರಡನೇ ಶನಿವಾರದ ರಜೆ ಕುರಿತು ಇದ್ದ ಗೊಂದಲಗಳಿಗೆ ರಾಜ್ಯ ಸರ್ಕಾರವು ತೆರೆ ಎಳೆದಿದ್ದು, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಅ.13ರ ಎರಡನೇ ಶನಿವಾರ ರಜೆ ಇರುವುದನ್ನು ರದ್ದುಪಡಿಸಿ ಅ.20ರಂದು ರಜೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿಸಲಾಗಿತ್ತು. ದಸರಾ ಪ್ರಯುಕ್ತ ಗುರುವಾರ, ಶುಕ್ರವಾರ ಸರ್ಕಾರಿ ರಜೆ ಇದ್ದು, ಅ.20ರ ಮೂರನೇ ಶನಿವಾರದಂದು ಸರ್ಕಾರಿ ಸಿಬ್ಬಂದಿ ರಜೆ ಹಾಕಲಿದ್ದಾರೆ.
ಹೀಗಾಗಿ ಎರಡನೇ ಶನಿವಾರ ಬದಲಿಗೆ ಮೂರನೇ ಶನಿವಾರ ರಜೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅ.20 ರ ಮೂರನೇ ಶನಿವಾರ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.