
ನವದೆಹಲಿ (ಆ.29): ವಿಕಲಾಂಗ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡಿದ ಚೆಕ್ ಬೌನ್ಸ್ ಆಗಿದ್ದು, ಹತಾಶೆಗೊಂಡ ಕ್ರೀಡಾಪಟುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ಹೇಳಿಕೊಳ್ಳಲು ಹೋದರೆ ಮುಖ್ಯಮಂತ್ರಿಯವರು ಬಹಳ ಬ್ಯಸಿಯಾಗಿದ್ದರು. ಮುಖ್ಯಮಂತ್ರಿಯವರ ಭೇಟಿಗೆ ಸುಮಾರು ಒಂದು ತಾಸು ಕಾದರೂ ದರ್ಶನ ಭಾಗ್ಯ ಸಿಗಲಿಲ್ಲ.
ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸಿದ ವಿಕಲಾಂಗ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಕಳೆದ ತಿಂಗಳು ಚೆಕ್ ನೀಡಿತ್ತು. ಬ್ಯಾಂಕಿಗೆ ಹಣ ಪಡೆಯಲು ಹೋದಾಗ ಚೆಕ್ ಬೌನ್ಸ್ ಆಗಿರುವುದು ಗೊತ್ತಾಗಿದೆ. ಕೂಡಲೇ ಕ್ರೀಡಾಪಟುಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಟಿಕೊಳ್ಳಲು ಸಿಎಂ ಗೃಹ ಕಚೇರಿ ಕಾವೇರಿಗೆ ಬಂದಿದ್ದಾರೆ. ಮುಖ್ಯಮಂತ್ರಿಯವರ ದರ್ಶನಕ್ಕೆ ಒಂದು ತಾಸೂ ಕಾದರೂ ಪ್ರಯೋಜನವಾಗಲಿಲ್ಲ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ತರಾತುರಿಯಲ್ಲಿ ಹೊರಟೇ ಬಿಟ್ಟರು. ಸಿಎಂ ಭೇಟಿ ಮಾಡಲು ಈ ಕ್ರೀಡಾಪಟುಗಳು ವಿಧಾನ ಸೌಧಕ್ಕೂ ಬಂದರು. ಅಲ್ಲಿಯೂ ಮುಖ್ಯಮಂತ್ರಿಯವರು ಬ್ಯುಸಿ ಇದ್ದಿದ್ದರಿಂದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಕ್ರೀಡಾಪಟುಗಳಿಗೆ ನೀಡಿದ ಚೆಕ್ ಬೌನ್ಸ್ ಆಗಿರುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ ವರ್ಷ ಹಂಪಿ ಉತ್ಸವದಲ್ಲಿ ನೀಡಿದ ಚೆಕ್ ಕೂಡಾ ಬೌನ್ಸ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.