ಗೌರ್ನರ್’ಗೆ ವರ್ಷಕ್ಕೆ ಸಿಗುವ ಭತ್ಯೆ ಎಷ್ಟು ಗೊತ್ತಾ?

First Published Jun 4, 2018, 8:18 AM IST
Highlights

 ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯಪಾಲರ ಮಾಸಿಕ ವೇತನವನ್ನು 3.5 ಲಕ್ಷ ರು.ಗೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ನಾಲ್ಕು ವರ್ಷಗಳ ಬಳಿಕ ರಾಜ್ಯಪಾಲರ ಭತ್ಯೆಗಳ ಮೊತ್ತದಲ್ಲೂ ಪರಿಷ್ಕರಣೆ ಮಾಡಿದೆ. 

ನವದೆಹಲಿ (ಜೂ. 04): ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯಪಾಲರ ಮಾಸಿಕ ವೇತನವನ್ನು 3.5 ಲಕ್ಷ ರು.ಗೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ನಾಲ್ಕು ವರ್ಷಗಳ ಬಳಿಕ ರಾಜ್ಯಪಾಲರ ಭತ್ಯೆಗಳ ಮೊತ್ತದಲ್ಲೂ ಪರಿಷ್ಕರಣೆ ಮಾಡಿದೆ.

ಪ್ರತಿ ರಾಜ್ಯದ ರಾಜ್ಯಪಾಲರಿಗೂ ಭತ್ಯೆ ಮೊತ್ತದಲ್ಲಿ ವ್ಯತ್ಯಾಸವಿದ್ದು, ದೇಶದಲ್ಲೇ ಅತಿ ಹೆಚ್ಚು ಭತ್ಯೆ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಲಭಿಸಲಿದೆ. ಪ್ರವಾಸ, ಆತಿಥ್ಯ, ಮನರಂಜನೆ ಹಾಗೂ ಇತರೆ ವೆಚ್ಚಗಳಿಗಾಗಿ ಅವರಿಗೆ 1.81 ಕೋಟಿ ರು. ನಿಗದಿಪಡಿಸಲಾಗಿದೆ.

ಇದೇ ವೇಳೆ ಕರ್ನಾಟಕ ರಾಜ್ಯಪಾಲರಿಗೆ 1.05 ಕೋಟಿ ರು.ಗಳನ್ನು ಇದೇ ಖರ್ಚಿಗಾಗಿ ನಿಗದಿಗೊಳಿಸಲಾಗಿದೆ. ಒಟ್ಟಾರೆ ಭತ್ಯೆಗಳ ರೂಪದಲ್ಲೇ ಕರುನಾಡಿನ ರಾಜ್ಯಪಾಲರಿಗೆ 1.5 ಕೋಟಿ ರು. ಸಿಗಲಿದೆ. ರಾಜ್ಯಪಾಲರ ವೇತನ ಹಾಗೂ ಭತ್ಯೆಗಳನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆಯಾದರೂ, ಅದನ್ನು ಆಯಾ ರಾಜ್ಯ ಸರ್ಕಾರಗಳೇ ಪಾವತಿ ಮಾಡ ಬೇಕಾಗುತ್ತದೆ. ಈ ಭತ್ಯೆಯ ಜತೆಗೆ ಪೀಠೋಪಕರಣ ಬದಲಿಸಲು, ರಾಜಭವನಗಳನ್ನು ನಿರ್ವಹಿಸಲು ಪ್ರತ್ಯೇಕ ಹಣ ಕೂಡ ಸಿಗುತ್ತದೆ. ಪಶ್ಚಿಮಬಂಗಾಳ ರಾಜ್ಯಪಾಲರಿಗೆ ಭತ್ಯೆ ಜತೆಗೆ ಪೀಠೋಪಕರಣ ವೆಚ್ಚಕ್ಕಾಗಿ 80 ಲಕ್ಷ ಹಾಗೂ ಕೋಲ್ಕತಾ, ಡಾರ್ಜಿಲಿಂಗ್
ನಲ್ಲಿರುವ ರಾಜಭವನಗಳ ನಿರ್ವಹಣೆಗಾಗಿ 72.06 ಲಕ್ಷ ರು. ನಿಗದಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರಿಗೆ 1.05 ಕೋಟಿ ರು. ಪ್ರವಾಸ, ಆತಿಥ್ಯ, ಮನರಂಜನೆ, ಇತರೆ ವೆಚ್ಚದ ಖರ್ಚುಗಳ ಜತೆಗೆ ಬೆಂಗಳೂರಿನ ರಾಜಭವನದಲ್ಲಿ ಪೀಠೋಪಕರಣ ವೆಚ್ಚಕ್ಕೆ 6.5 ಲಕ್ಷ ಹಾಗೂ ರಾಜಭವನ
ನಿರ್ವಹಣೆಗೆ 38.2 ಲಕ್ಷ ರು. ನಿಗದಿಪಡಿಸಲಾಗಿದೆ.

ಇದರಿಂದಾಗಿ ಕರ್ನಾಟಕ ರಾಜ್ಯಪಾಲರಿಗೆ ಭತ್ಯೆ ರೂಪದಲ್ಲಿ ವರ್ಷಕ್ಕೆ ೧.೫ ಕೋಟಿ ರು. ಸಿಕ್ಕಂತಾಗಲಿದೆ. ಮಿಕ್ಕಂತೆ ತಮಿಳುನಾಡು ರಾಜ್ಯಪಾಲರಿಗೆ ದೇಶದಲ್ಲೇ 1.66 ಕೋಟಿ ರು. ಭತ್ಯೆ, 7.50 ಲಕ್ಷ ರು.
ಪೀಠೋಪಕರಣ ವೆಚ್ಚ, ಚೆನ್ನೈ, ಊಟಿ ರಾಜಭವನ ನಿರ್ವಹಣೆಗಾಗಿ 6.5 ಕೋಟಿ ರು. ಭತ್ಯೆ ಕೊಡಲು ಸೂಚಿಸಲಾಗಿದೆ. 

click me!