ವಿಕ್ರಮ್ ಸಾರಾಭಾಯಿ 100 ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

By Web DeskFirst Published Aug 12, 2019, 11:30 AM IST
Highlights

ಬಾಹ್ಯಾಕಾಶ ಸಂಸ್ಥಾಪಕ ವಿಕ್ರಮ್ ಸಾರಾಭಾಯ್ ಗೆ ಇಂದು 100 ನೇ ಹುಟ್ಟುಹಬ್ಬದ ಸಂಭ್ರಮ | ಸಾರಾಭಾಯ್ ಬರ್ತಡೇಗೆ ಗೂಗಲ್ ಡೂಡಲ್ ಗೌರವ | 

ಬೆಂಗಳೂರು (ಆ. 12): ಕನ್ನಡಿಗರ ಹೆಮ್ಮೆಯ ‘ಇಸ್ರೋ’ ಹುಟ್ಟು ಹಾಕಿದ ಭೌತ ವಿಜ್ಞಾನಿ ವಿಕ್ರಮ್ ಸಾರಾಭಾಯಿಗೆ ಇಂದು 100 ನೇ ಹುಟ್ಟುಹಬ್ಬದ ಸಂಭ್ರಮ. ಗೂಗಲ್ ಡೂಡಲ್ ಇವರನ್ನು ಸ್ಮರಿಸುವ ಮೂಲಕ ಗೌರವ ಸೂಚಿಸಿದೆ. 

ವಿಕ್ರಮ್ ಸಾರಾಭಾಯ್ ಗುಜರಾತಿನ ಅಹ್ಮದಾಬಾದ್ ನಲ್ಲಿ 1919 ರಲ್ಲಿ ಜನಿಸಿದರು. ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಇಂಗ್ಲೇಂಡಿನ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪಡೆದರು. 

ಭಾರತಕ್ಕೆ ಹಿಂತಿರುಗಿದ ನಂತರ ಅಹ್ಮದಾಬಾದ್ ನಲ್ಲಿ ಫಿಸಿಕಲ್ ರೀಸರ್ಚ್ ಲ್ಯಾಬೋರೆಟರಿ ಸ್ಥಾಪಿಸಿದರು. 1969, ಆಗಸ್ಟ್ 15 ರಂದು ಇಸ್ರೋವನ್ನು ಸ್ಥಾಪನೆ ಮಾಡಿದರು.  ವಿಕ್ರಮ್ ಸಾರಾಭಾಯ್ ಅವರಿಗೆ 1966 ರಲ್ಲಿ ಪದ್ಮಭೂಷಣ, 1972 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿವೆ. 1962 ರಲ್ಲಿ ಶಾಂತಿ ಸ್ವರೂಫ ಭಟ್ನಾಗರ್ ಪ್ರಶಸ್ತಿಯನ್ನು ಪಡೆದಿದ್ದಾರೆ. 

ಗೂಗಲ್ ಡೂಡಲ್’ನಲ್ಲಿ ಬೆಂಗಳೂರು ಮೂಲದ ಕನ್ನಡತಿ ಚಿತ್ರಕ್ಕೆ ಮನ್ನಣೆ

ಗೂಗಲ್ ಡೂಡಲ್ ಇಲಷ್ಟ್ರೇಶನ್ ನನ್ನು ಮುಂಬೈ ಮೂಲದ ಕಲಾವಿದ ಪವನ್ ರಾಜುರ್ಕರ್ ಮಾಡಿದ್ದಾರೆ. 

ಸೈನ್ಸ್, ಬಾಹ್ಯಾಕಾಶ ಕ್ಷೇತ್ರಕ್ಕೆ ಸಾರಾಭಾಯ್ ಕೊಡುಗೆ ಅಪಾರ. ಇವರೊಬ್ಬ ಭೌತವಿಜ್ಞಾನಿ, ಉದ್ಯಮಿ. ಇವರ ಪತ್ನಿ ಮೃಣಾಲಿನಿ ಸಾರಾಭಾಯ್ ಖ್ಯಾತ ನೃತ್ಯಗಾತಿ. ಮಗಳು ಮಲ್ಲಿಕಾ ಸಾರಾಭಾಯ್ ಕೂಡಾ ಒಳ್ಳೆಯ ನೃತ್ಯಪಟು. 

 

click me!