ಈಡಿಯಟ್ ಎಂದು ಸರ್ಚ್ ಮಾಡಿದಾಗ ಟ್ರಂಪ್ ಪೋಟೊ: Google ಸಿಇಒ ಹೇಳಿದ್ದೇನು?

By Web DeskFirst Published Dec 14, 2018, 2:58 PM IST
Highlights

ಗೂಗಲ್ ನಲ್ಲಿ ಈಡಿಯಟ್ ಎಂದು ಸರ್ಚ್ ಮಾಡಿದಾಗ ಏಕೆ ಟ್ರಂಪ್ ಚಿತ್ರ ಕಾಣಿಸುತ್ತದೆ ಎನ್ನುವುದಕ್ಕೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಉತ್ತರ ನೀಡಿದ್ದಾರೆ.

ನ್ಯೂಯಾರ್ಕ್ : ಈಡಿಯಟ್ ಎಂದು ಗೂಗಲ್ ಸರ್ಚ್ ಮಾಡಿದಾಗ ಟ್ರಂಪ್ ಚಿತ್ರ ಬರುವುದೇಕೆ ಎನ್ನುವ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಉತ್ತರಿಸಿದ್ದಾರೆ. 

ಅಮೆರಿಕ ಕಾಂಗ್ರೆಸ್ ಸದಸ್ಯರೊಂದಿಗೆ ನಡೆದ ಸಭೆಯೊಂದರಲ್ಲಿ ಕೇಳಿದ ಈ ಪ್ರಶ್ನೆಗೆ ಉತ್ತರ ನೀಡಿದ ಭಾರತೀಯ ಮೂಲದ ಸುಂದರ್ ಪಿಚ್ಚೈ   ಕೆಲ ಕೀ ವರ್ಡ್ ಗಳ ಮೂಲಕ ಗೂಗಲ್ ಕೆಲಸ ಮಾಡುತ್ತವೆ. ಇದರಿಂದ ಈ ರೀತಿಯಾದ ಫಲಿತಾಂಶ ದೊರೆಯುತ್ತದೆ ಎಂದು ವಿವರಿಸಿದ್ದಾರೆ. 

ಯಾವುದೇ ಸಂದರ್ಭದಲ್ಲಿ ಯಾರು ಯಾವ ವಿಚಾರವನ್ನು ಹುಡುಕಿದಾಗಲೂ ಕೂಡ ಸೂಕ್ತವಾದ ಫಲಿತಾಂಶವನ್ನು ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದು ವಿವರಿಸಿದ್ದಾರೆ.

ಈ ಹಿಂದೆ ಜಾರ್ಜ್ ಬುಶ್ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗಲೂ ಕೂಡ  ಮಿಸರೆಬಲ್ ಫೈಲ್ಯೂರ್ ಎಂದು ಸರ್ಚ್ ಮಾಡಿದಾಗ ಅವರ ಫೊಟೊ ಕಂಡುಬರುತ್ತಿತ್ತು. ಇದೀಗ ೀಡಿಯಟ್ ಪದಕ್ಕೆ ಟ್ರಂಪ್ ಫೋಟೊ ಕಾಣಿಸುತ್ತದೆ.

click me!