ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ತಂದ ಹೊಸ ನೀತಿ

By Suvarna Web DeskFirst Published Feb 27, 2017, 4:38 PM IST
Highlights

7 ವರ್ಷಗಳ ಬಳಿಕ ಈ ನೀತಿ ಬದಲಾಗುತ್ತಿದ್ದು, ಇನ್ಮುಂದೆ ರೈಲಿನಲ್ಲಿ ಆಹಾರ ವಿತರಣೆಯನ್ನು ಇಂಡಿಯನ್ ರೈಲ್ವೇ ಕೆಟರಿಂಗ್ ಅಂಡ್ ಟೂರಿಸ್ಮ್ ಕಾರ್ಪೊರೇಶನ್ (IRCTC)ಗೆ ವಹಿಸಲಾಗಿದೆ.

ನವದೆಹಲಿ (ಫೆ. 27): ರೈಲಿನಲ್ಲಿ ಆಹಾರ ತಯಾರಿ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಇಲಾಖೆ ನೂತನ ನೀತಿಯನ್ನು ಪ್ರಕಟಿಸಿದೆ.

ರೈಲಿನ ಕಳಪೆ ಆಹಾರದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ದೂರುಗಳು ಬರುತ್ತಿದ್ದು, ಆಹಾರದ ಗುಣಮಟ್ಟವನ್ನು ಹೆಚ್ಚಿಸಲು ರೈಲ್ವೇ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ.

7 ವರ್ಷಗಳ ಬಳಿಕ ಈ ನೀತಿ ಬದಲಾಗುತ್ತಿದ್ದು, ಇನ್ಮುಂದೆ ರೈಲಿನಲ್ಲಿ ಆಹಾರ ವಿತರಣೆಯನ್ನು ಇಂಡಿಯನ್ ರೈಲ್ವೇ ಕೆಟರಿಂಗ್ ಅಂಡ್ ಟೂರಿಸ್ಮ್ ಕಾರ್ಪೊರೇಶನ್ (IRCTC)ಗೆ ವಹಿಸಲಾಗಿದೆ.

ಹೊಸದಾಗಿ ಪರಿಚಯಿಸಲಾದ ರೈಲುಗಳು ಸೇರಿದಂತೆ ಬಹುತೇಕ ರೈಲುಗಳಲ್ಲಿ ಹೊಸ ವಿತರಣಾ ನೀತಿಯು ಜಾರಿಗೆ ಬರಲಿದೆ.

ರೈಲು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಲು ಇಲಾಖೆ ಬದ್ಧವಾಗಿದ್ದು, ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ  ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ರೈಲ್ವೇ ಸಚಿವ ಸುರೇಶ್ ಪ್ರಭು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಹೊಸ ವ್ಯವಸ್ಥೆಯಲ್ಲಿ  ಆಹಾರ ತಯಾರಿ ಹಾಗೂ ಅದರ ವಿತರಣೆ ಪ್ರತ್ಯೇಕವಾಗಿರುವುದು. ಉತ್ತಮ ಗುಣಮಟ್ಟ ಹಾಗೂ ಸ್ವಚ್ಛವಿರುವ ಯಾವುದೇ ಕಿಚನ್’ಗಳಲ್ಲಿ ಆಹಾರ ತಯಾರಿಸಲಾಗುವುದು. ಅದನ್ನು ಬಳಿಕ ಅದನ್ನು ನುರಿತ ಸಿಬ್ಬಂದಿ/ಸಂಸ್ಥೆಗಳ ಮೂಲಕ ರೈಲುಗಳಲ್ಲಿ ವಿತರಣೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದೆಂದು ಹೇಳಲಾಗಿದೆ.

ನೂತನ ರೈಲ್ವೇ ಕೆಟರಿಂಗ್ ನೀತಿ-2017 ಪ್ರಕಾರ, ಆಹಾರ ಮೆನು ಹಾಗೂ ದರಗಳನ್ನು ರೈಲ್ವೇ ಬೋರ್ಡ್’ನೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸುವ ಅಧಿಕಾರವನ್ನು ಐಆರ್ಸಿಟಿಸಿಗೆ ನೀಡಿದೆ.

ಅಲ್ಲದೇ, ಹೊಸ ನೀತಿಯನ್ವಯ ರೈಲ್ವೇ ಸ್ಟೇಷನ್’ಗಳಲ್ಲಿ ಸ್ಟಾಲ್’ಗಳನ್ನು ಹಂಚುವಾಗ ಶೇ.33ರಷ್ಟು ಮಹಿಳೆಯರಿಗೆ ಮೀಸಲಿಡಬೇಕು. ಈ ವ್ಯವಸ್ಥೆಯಲ್ಲಿ ಸ್ವ-ಸಹಾಯ ಗುಂಪುಗಳಿಗೂ ಅವಕಾಶ ಕಲ್ಪಿಪಿಸಲಾಗುವುದೆಂದು ಹೇಳಲಾಗಿದೆ.

ಪ್ರಮುಖ ಜಂಕ್ಷನ್’ಗಳಲ್ಲಿ ಕಿಚನ್’ಗಳ ನಿರ್ಮಾಣ ಹಾಗೂ ಪರವಾನಿಗೆಗಳನ್ನು ಔಟ್ಸೋರ್ಸ್ ಮಾಡುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಹೊಸ ನೀತಿಯು ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಿದೆ. ಸ್ಟಾಲ್’ಗಳ ಅನುಮತಿಯನ್ನು 5 ವರ್ಷಕ್ಕೊಮ್ಮೆ ನವೀಕರಣಗೊಳಿಸಬೇಕು. ಇ-ಕೆಟರಿಂಗನ್ನು ಉತ್ತೇಜಿಸಲು ಹೊಸ ನೀತಿಯಲ್ಲಿ ಪ್ರಾಶಸ್ತ್ಯ ನೀಡಲಾಗಿದೆ.

click me!