ಫ್ರೆಶರ್ಸ್ ಗೆ ಭರ್ಜರಿ ಗುಡ್ ನ್ಯೂಸ್ : ದುಪ್ಪಟ್ಟು ವೇತನ ಕೊಟ್ಟು ನೇಮಕಾತಿ

Published : Oct 03, 2018, 02:16 PM IST
ಫ್ರೆಶರ್ಸ್ ಗೆ  ಭರ್ಜರಿ ಗುಡ್ ನ್ಯೂಸ್ : ದುಪ್ಪಟ್ಟು ವೇತನ ಕೊಟ್ಟು ನೇಮಕಾತಿ

ಸಾರಾಂಶ

ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಭರ್ಜರಿ ಆಫರ್ ಒಂದನ್ನು ಪ್ರಕಟಿಸುತ್ತಿದೆ. ಅವರ ಕೌಶಲ್ಯಕ್ಕೆ ಅನುಗುಣವಾಗಿ ಫ್ರೆಶರ್ ಗಳಿಗೆ ನೀಡುವ ವೇತನದ ಪ್ಯಾಕೇಜ್ ನ್ನು ಟಿಸಿಎಸ್ ದ್ವಿಗುಣ ಮಾಡಿದೆ. 

ಬೆಂಗಳೂರು : ಐಟಿ ಸೆಕ್ಟರ್ ನಲ್ಲಿ ಅತ್ಯಂತ ಬೃಹತ್ ಆಗಿರುವ ಟಾಟಾ ಕನ್ಸಲ್ಟೆನ್ಸಿ ಇದೀಗ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಭರ್ಜರಿ ಆಫರ್ ಒಂದನ್ನು ಪ್ರಕಟಿಸುತ್ತಿದೆ. ಅವರ ಕೌಶಲ್ಯಕ್ಕೆ ಅನುಗುಣವಾಗಿ ಫ್ರೆಶರ್ ಗಳಿಗೆ ನೀಡುವ ವೇತನದ ಪ್ಯಾಕೇಜ್ ನ್ನು ದ್ವಿಗುಣ ಮಾಡಿದೆ. 

ಈ ಹಿಂದೆ 3.5 ಲಕ್ಷ ಇದ್ದ ವಾರ್ಷಿಕ ಪ್ಯಾಕೇಜ್ ಅನ್ನು ಇದೀಗ ಕೌಶಲ್ಯಕ್ಕೆ ಅನುಗುಣವಾಗಿ ದ್ವಿಗುಣ ಪ್ರಮಾಣದಲ್ಲಿ ಏರಿಸಿ 6.5 ಲಕ್ಷ ಮಾಡಲಾಗಿದೆ. 

ನಿವೀಗ ಟಿಸಿಎಸ್ ನಲ್ಲಿ ಕೆಲಸ ಮಾಡಲು ಬಯಸಿದಲ್ಲಿ ಇದೀಗ ಆನ್ ಲೈನ್ ಮೂಲಕ ಟೆಸ್ಟ್ ಎದುರಿಸಬೇಕಾಗುತ್ತದೆ. ಇದೀಗ ಐಟಿ ಸಂಸ್ಥೆ ತನ್ನೆಲ್ಲಾ ವ್ಯವಸ್ಥೆಯನ್ನೂ ಕೂಡ ಸಂಪೂರ್ಣ ಡಿಜಿಟಲೀಕರಣ ಮಾಡಿದೆ. 

ಈ ವರ್ಷದಿಂದಲೇ ಕಂಪನಿ ಪ್ಯಾನ್ ಇಂಡಿಯಾ ಆನ್ಲೈನ್ ಟೆಸ್ಟ್ , ನ್ಯಾಷನಲ್ ಕ್ವಾಲಿಫೈಯರ್  ಪರೀಕ್ಷೆಯನ್ನು ಮಾಡಲಿದೆ. 

ಒಂದು ವೇಳೆ ಅಭ್ಯರ್ಥಿಯು ಆನ್ ಲೈನ್ ಟೆಸ್ಟ್ ಕ್ಲಿಯರ್ ಮಾಡಿದಲ್ಲಿ ಫೇಸ್ ಟು ಫೇಸ್ ಇಂಟರ್ ವ್ಯೂ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂಟರ್ ವ್ಯೂ ಮಾಡಲಾಗುತ್ತದೆ.

ಈ ಎಲ್ಲಾ ಪರೀಕ್ಷೆಗಳ ವೇಳೆ ಅವರ ಕೌಶಲ್ಯವನ್ನು ಪರಿಗಣಿಸಿ ವೇತನದ ಪ್ಯಾಕೇಜ್ ನಿಗದಿ ಮಾಡುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka By-Election Results 2026 LIVE: ಇಂದು ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ; ಕಾಂಗ್ರೆಸ್-ಬಿಜೆಪಿ ನಡುವೆ ಬಿಗ್ ಫೈಟ್
5 States Assembly Election Results 2026: ಇಂದು 5 ರಾಜ್ಯಗಳ ವಿಧಾನಸಭಾ ಫಲಿತಾಂಶ: ಪಂಚ ಗದ್ದುಗೆ ಯಾರಿಗೆ?