ಗುಡ್ ಮಾರ್ನಿಂಗ್ ಕರ್ನಾಟಕ: ಪ್ರಮುಖ ಸುದ್ದಿಗಳು

Published : Sep 27, 2017, 07:29 AM ISTUpdated : Apr 11, 2018, 12:55 PM IST
ಗುಡ್ ಮಾರ್ನಿಂಗ್ ಕರ್ನಾಟಕ: ಪ್ರಮುಖ ಸುದ್ದಿಗಳು

ಸಾರಾಂಶ

ಗುಡ್ ಮಾರ್ನಿಂಗ್ ಕರ್ನಾಟಕ: ಪ್ರಮುಖ ಸುದ್ದಿಗಳು

1. 2020ಕ್ಕೆ ಭಾರತದಲ್ಲಿ 5G ಹವಾ:

ನವದೆಹಲಿ: 2020ರ ವೇಳೆಗೆ ಭಾರತದಲ್ಲಿ ಸಿಗಲಿದೆ 5ಜಿ ಸೇವೆ - ದೇಶದಲ್ಲಿ ಹೈಸ್ಪೀಡ್ ಡೇಟಾ ಸೇವೆ ಒದಗಿಸಲು ಕೇಂದ್ರ ಸರಕಾರ ಪ್ಲಾನ್​ - 5ಜಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 500 ಕೋಟಿ ಮೀಸಲು - ಉನ್ನತ ಮಟ್ಟದ ಸಮಿತಿ ರಚನೆ ಬಗ್ಗೆ ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಮಾಹಿತಿ

2. ದಾಳಿಗೆ ಉಗ್ರರ ಸಂಚು?

ನವದೆಹಲಿ: ನವರಾತ್ರಿ ಉತ್ಸವ ವೇಳೆ ದಾಳಿ ನಡೆಸಲು ಉಗ್ರರ ಪ್ಲಾನ್​ - ಈಶಾನ್ಯ ಭಾರತದ ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು ದಾಳಿಗೆ ಸ್ಕೆಚ್​ - ಗುಪ್ತಚರ ಇಲಾಖೆಯಿಂದ ಮಾಹಿತಿ - ದೆಹಲಿ, ಮುಂಬೈ, ಗುಜರಾತ್, ಉತ್ತರಪ್ರದೇಶದಲ್ಲಿ ಹೈಅಲರ್ಟ್

3. ಸುವರ್ಣನ್ಯೂಸ್​ ಇಂಪ್ಯಾಕ್ಟ್:

ಚಿಕ್ಕಮಗಳೂರು:  ಚಿಕ್ಕಮಗಳೂರಿನಲ್ಲಿಅನಿಷ್ಟ ಪದ್ಧತಿ ಜೀವಂತ -  ಸುವರ್ಣನ್ಯೂಸ್​ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು -  ಗ್ರಾಮಕ್ಕೆ ದೌಡಾಯಿಸಿ  ಜನರ ಮನವೋಲಿಕೆ ಯತ್ನ - ಮುಟ್ಟಾದಾಗ ಗ್ರಾಮದಿಂದ ಮಹಿಳೆಯರು ಹೊರಗುಳಿವ ಬಗ್ಗೆ ನಿನ್ನೆ ಸುವರ್ಣನ್ಯೂಸ್​ ವಿಸ್ತೃತ ವರದಿ ಪ್ರಸಾರ ಮಾಡಿತ್ತು

4. ದೊರೆಗೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ:

ಬೆಂಗಳೂರು: ಕರ್ನಾಟಕ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಆಯ್ಕೆ- ರಾಜ್ಯ  ಸರ್ಕಾರದಿಂದ ನೀಡಲ್ಪಡುವ ಪ್ರಶಸ್ತಿ - ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ ಪ್ರಶಸ್ತಿ ಪ್ರದಾನ

5. ಪುನೀತ ಯಾತ್ರೆಗೆ ಇಂದು ಚಾಲನೆ:

ಬೆಂಗಳೂರು: ಹಿರಿಯ ನಾಗರಿಕರಿಗೆ ಕಡಿಮೆ ವೆಚ್ಚದಲ್ಲಿ ಪುಣ್ಯಕ್ಷೇತ್ರಗಳ ದರ್ಶನ  - ಪುನೀತ ಯಾತ್ರೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ - 55 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ

6. ಇಂದು ಮತ್ತೆ ಮಾತುಕತೆ:

ಬೆಂಗಳೂರು: ಸಿಎಂ ಗೃಹ ಕಚೇರಿಯಲ್ಲಿ ಕೃಷ್ಣಾದಲ್ಲಿ ಶಿಕ್ಷಕರ ಸಮಸ್ಯೆ ಪರಿಹಾರದ ಸಮಾಲೋಚನೆ - ಇಂದು ಸಿಎಂ ಜೊತೆ ಎರಡನೇ ಸುತ್ತಿನ ಮಾತುಕತೆ - ರಚನಾತ್ಮಕ ಪರಿಹಾರಕ್ಕೆ ಒತ್ತಾಯಿಸಲಿರುವ ಪದವಿಧರರ ಕ್ಷೇತ್ರದ ಶಾಸಕರು

7. ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಬೀದಿ ಕಾಮಣ್ಣರ ಕಾಟ - ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರ ಬಂಧನ -  ಲೈಂಗಿಕ ದೌರ್ಜನ್ಯ ಎಸಗುವ ಕಿಡಿಗೇಡಿಗಳಿಗೆ ಪೊಲೀಸರ ಎಚ್ಚರಿಕೆ

8. ದಸರೆಗೆ ಏರ್ ಶೋ ರಂಗು:

ಮೈಸೂರು: ಮೈಸೂರು ದಸರಾದಲ್ಲಿ ಏರ್ ಶೋ ನಡೆಸಲು ರಕ್ಷಣಾ ಇಲಾಖೆ ಸಮ್ಮತಿ  - ಟ್ವಿಟರ್​​ನಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ - ಸೆಪ್ಟೆಂಬರ್ 29ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ ಏರ್ ಶೋ

9.ಟ್ರಾಕ್ಟರ್ ಹರಿದು ಚಾಲಕ ಸಾವು:

ಬೆಂಗಳೂರು: ಟ್ರಾಕ್ಟರ್  ನಿಯಂತ್ರಣಕ್ಕೆ  ಸಿಗದೆ  ಇದ್ದಾಗ  ಕೆಳಕ್ಕೆ  ಜಂಪ್​ ಮಾಡಿದ್ದ ಚಾಲಕ -ಈ ವೇಳೆ ಟ್ರಾಕ್ಟರ್ ನ ಹಿಂಬದಿ ಚಕ್ರ ಚಾಲಕನ ತಲೆ ಮೇಲೆ ಹರಿದು ಸಾವು - ಬೆಂಗಳೂರಿನ ಕುರಬರಹಳ್ಳಿಯಲ್ಲಿ ದುರ್ಘಟನೆ

10. 75 ಸಾವಿರ ಕದ್ದ ಚೋರರು:

ಬೆಂಗಳೂರು:  60 ರೂಪಾಯಿ ಆಸೆ ತೋರಿಸಿ ಚಾಲಕನ ಗಮನ ಬೇರೆಡೆ ಸೆಳೆದು 75 ಸಾವಿರ ಕಳ್ಳತನ - ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಘಟನೆ - ಕಾರಿನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳರ ಕೃತ್ಯ

11. ತಾತಪ್ಪನ ಕೈಚಳಕ:

ಬೆಂಗಳೂರು: ಮೊದಲ ದಿನ ಬಂದು ಕೈಲಾದಷ್ಟು ದೋಚಿ ಹೋದ - ಬಿಟ್ಟು ಹೋದ ಸಿಪಿಯು ಕದಿಯಲು ಮಾರನೇ ದಿನ ಬಂದ - ಮಲ್ಲೇಶ್ವರಂ ಕಳ್ಳ ತಾತಪ್ಪನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

12. ಕೊಲೆಗಾರ ಗಂಡ ಅರೆಸ್ಟ್:

ವಿಜಯಪುರ: ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಲೆಗೈದಿದ್ದ ಗಂಡ - ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಘಟನೆ - ತಲೆಮರೆಸಿಕೊಂಡಿದ್ದ ಆರೋಪಿ ಪತಿ ಅರೆಸ್ಟ್

13. ಬೈಕ್​ ಕಳ್ಳರು ಅರೆಸ್ಟ್:

ಬೆಂಗಳೂರು: ಕೋರಮಂಗಲ ಪೊಲೀಸರ ಕಾರ್ಯಾಚರಣೆ - ಬೈಕ್ ಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರ ಬಂಧನ - ಬಂಧಿತರಿಂದ 7 ಲಕ್ಷ ಮೌಲ್ಯದ 13 ಬೈಕ್ ಜಪ್ತಿ

14. ಅಪ್ರಾಪ್ತರಿಗೆ ಬೈಕ್ ಕೊಟ್ಟರೆ ಪೋಷಕರಿಗೆ ದಂಡ!

ಬೆಂಗಳೂರು: ಅಪ್ರಾಪ್ತರು ಬೈಕ್ ರೈಡ್ ಮಾಡಿದ್ರೆ ಪೋಷಕರಿಗೆ ದಂಡ, ಡಿಎಲ್ ಕ್ಯಾನ್ಸಲ್ - 650 ಕ್ಕೂ ಹೆಚ್ಚು ಅಪ್ರಾಪ್ತರ ವಿರುದ್ಧ ಕೇಸ್ - ಪೋಷಕರೇ, ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡೋ ಮುನ್ನ ಎಚ್ಚರ

15. ಯೋಗೀಶ್ವರ್​ ಬಿಜೆಪಿ ಸೇರಲ್ಲ:ಡಿಕೆಶಿ

ರಾಮನಗರ: ಚನ್ನಪಟ್ಟಣ ಶಾಸಕ ಯೋಗೇಶ್ವರ್ ಬಿಜೆಪಿ ಸೇರ್ಪಡೆ ವಿಚಾರ - ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಲ್ಲ - ಬಿಜೆಪಿ ಸೇರ್ತಾರೆ ಅನ್ನೋದು ಊಹಾಪೋಹಾ ಅಷ್ಟೇ ಎಂದ ಡಿಕೆಶಿ

16. 'ನಾಯಿ ಹಿಡೀರಿ ಸಾರ್'​

ವಿಜಯಪುರ: ವಿಜಯಪುರ ನಗರದಲ್ಲಿ ನಾಯಿಗಳ ಹಾವಳಿ - ಬಹಿದೆ೯ಸೆಗೆ ಹೋಗಿದ್ದ 2 ವಷ೯ದ ಮಗುವಿನ ಮೇಲೆ ನಾಯಿ ದಾಳಿ  - ಅಸ್ವಸ್ಥ ಬಾಲಕಿ ಆಸ್ಪತ್ರೆಗೆ ದಾಖಲು

17. ಹಾವು ಇದೆ ಹಾವು.. !

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಹಾವುಗಳ ಹಾವಳಿ  -  ಬಿಬಿಎಂಪಿಗೆ ದೂರು ಸಲ್ಲಿಸಿದ ಹೆಬ್ಬಾಳದ ನಿವಾಸಿಗಳು -  ಸ್ಥಳಕ್ಕೆ ಬಂದು ಪರಿಶೀಲಿಸಿದ ಹೆಬ್ಬಾಳ ಮಾಜಿ ಕಾರ್ಪೊರೇಟರ್

18. ಈಗ ಇವೆಲ್ಲಾ ಬೇಕಾ?

ಬೆಂಗಳೂರು: ರಾಜ್ಯ ಸರ್ಕಾರದ ಅವಧಿ ಇನ್ನು 6 ತಿಂಗಳಷ್ಟೇ ಬಾಕಿ - ಚುನಾವಣೆಗೆ 6 ತಿಂಗಳಿರುವಾಗಲೇ ನವೀಕರಣವಾಗ್ತಿದೆ ಗೀತಾ ಮಹದೇವಪ್ರಸಾದ್ ಆಫೀಸ್ - ವಿಧಾನಸೌಧದಲ್ಲಿ ಇನ್ನೂ ನಿಂತಿಲ್ಲ ಸಚಿವರ ಕೊಠಡಿ ನವೀಕರಣ ಕಾರ್ಯ?

19. ಕಾಂಗ್ರೆಸ್​ನವರ ತಪ್ಪಿಲ್ಲ: ರೈ

ಮೈಸೂರು: ಜಿಲ್ಲೆಯಲ್ಲಿ ನಡೆಯುವ ಹತ್ಯಾ ಪ್ರಕರಣದಲ್ಲಿ ಕಾಂಗ್ರೆಸ್​ವರು ಭಾಗಿಯಾಗಿಲ್ಲ - ಎಸ್​ಡಿಪಿಐ, ಬಿಜೆಪಿಯವರು ಗಲಾಟೆ ಎಬ್ಬಿಸುತ್ತಿದ್ದಾರೆ - ಬೇಕಿದ್ದರೆ ದೆಹಲಿಗೆ ಹೋಗಿ ಎಸ್​ಡಿಪಿಐ ನಿಷೇಧಿಸಿಕೊಳ್ಳಲಿ - ನಮ್ಮ ಅಭ್ಯಂತರವಿಲ್ಲ ಎಂದ ರಮಾನಾಥ ರೈ

20. ರೈತರಿಗೆ ಸಿಗುತ್ತಾ ಪರಿಹಾರ?

ರಾಯಚೂರು: ರಾಯಚೂರಿನಲ್ಲಿ ನಿರಂತರ ಮಳೆಗೆ ನೆಲಕಚ್ಚಿದ ಬೆಳೆ - ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರು ಕಂಗಾಲು - ಸಮೀಕ್ಷೆ ನಡೆಸಿ ಬೆಳೆ ಪರಿಹಾರ ನೀಡುವಂತೆ ರೈತರ ಒತ್ತಾಯ

21. ಅನಾಥ ಕುಟುಂಬಕ್ಕೆ ನೆರವಿನ ಹಸ್ತ:

ಕಾರವಾರ: ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ನೆರವಿನ ಹಸ್ತ - ಕಾರವಾರ ಜನಶಕ್ತಿ ವೇದಿಕೆಯಿಂದ ಸಹಾಯ -  ಜೀವನ ಸಾಗಿಸಲು ಪರದಾಡುತ್ತಿದ್ದ ತಾಯಿ- ಮಗಳಿಗೆ ನೆರವು  

22. ಒತ್ತುವರಿ ತೆರವಿಗೆ ಸೂಚನೆ:

ಕೋಲಾರ: ಕೋಲಾರದಲ್ಲಿ ಸರ್ಕಾರಿ ಭೂಮಿ ಒತ್ತುವರಿ -  ಅಕ್ರಮವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ - ಶೀಘ್ರದಲ್ಲೇ ಒತ್ತುವರಿ ತೆರವಿಗೆ ಡಿಸಿ ವಾರ್ನಿಂಗ್​

23. ಹಾಡಹಗಲೇ ಮನೆಗೆ ಕನ್ನ:

ಕಲಬುರಗಿ: ಕಲಬುರಗಿಯ ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಗೆ ಹಾಡಹಗಲೇ ಕನ್ನ  - ಮೂರೂವರೆ ಲಕ್ಷ ನಗದು, ಚಿನ್ನಾಭರಣ ದೋಚಿದ ಖದೀಮರು - ಕಳ್ಳತರ ಕೈಚಳಕ ಸಿಸಿ ಕ್ಯಾಮಾರದಲ್ಲಿ ಸೆರೆ - ಕಳ್ಳರ ಪತ್ತೆಗೆ ಜಾಲ ಬೀಸಿದ ಸ್ಟೇಷನ್ ಬಜಾರ್ ಪೊಲೀಸರು

24. ಅವಿಶ್ವಾಸ ಮಂಡನೆ:

ರಾಯಚೂರು: ರಾಯಚೂರು ನಗರ ಸಭೆ ಅಧ್ಯಕ್ಷರಿಗೆ ಆಡಳಿತದ ಬಗ್ಗೆ ಅಸಮಾಧಾನ - 19 ಜನ ಸದಸ್ಯರಿಂದ ಅವಿಶ್ವಾಸ ಮಂಡನೆ - 10 ದಿನದ ಒಳಗೆ ಸಭೆ ಕರೆಯಲು ಮನವಿ

26. ತೈಲ ದರದಲ್ಲಿ ಏರಿಕೆ:

ನವದೆಹಲಿ: ತೈಲ ದರ ನಿತ್ಯ ಪರಿಷ್ಕರಣೆ ಕ್ರಮ ಅಳವಡಿಕೆ ನಂತರ ದರದಲ್ಲಿ ಏರಿಕೆ - ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಶೇ 8ರಷ್ಟು ಏರಿಕೆ - ಭಾರತೀಯ ಹೂಡಿಕೆ ಮಾಹಿತಿ ಸಂಸ್ಥೆಯಿಂದ ಸ್ಪಷ್ಟನೆ

27. ‘2000 ರೂ. ನೋಟ್​ ರದ್ದಿಗೆ ಸಕಾಲ’ 

ಆಂಧ್ರಪ್ರದೇಶ: ಹೆಚ್ಚು ಮೌಲ್ಯದ ನೋಟುಗಳಿಂದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಲಿದೆ -  2000 ರೂ. ನೋಟ್​ ರದ್ದು ಪಡಿಸುವುದೇ ಒಳ್ಳೆಯದು - ಮೋದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಸಲಹೆ

28. ಮಿಲ್ಖಾ ಸಿಂಗ್‌ ಮೇಣದ ಪ್ರತಿಮೆ:

ಚಂಡೀಘಡ: ಅನಾವರಣವಾಯ್ತು ಮಿಲ್ಖಾ ಸಿಂಗ್‌ ಮೇಣದ ಪ್ರತಿಮೆ - ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಪ್ರತಿಭೆ - ಮೇಡಂ ಟುಸ್ಸಾಡ್ಸ್‌ನಲ್ಲಿ  ಸಿಂಗ್ ಪ್ರತಿಮೆ ಅನಾವರಣ

29 ಹನಿಪ್ರೀತ್​ ಜಾಮೀನು ಅರ್ಜಿ ವಜಾ:

ನವದೆಹಲಿ: ಬಾಬಾ ರಾಮ್​ ರಹೀಂ ದತ್ತು ಪುತ್ರಿ ಹನಿಪ್ರೀತ್​ ಜಾಮೀನು ಅರ್ಜಿ ತಿರಸ್ಕಾರ - ದೆಹಲಿ ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ - ಬಂಧನದ ಭೀತಿಯಲ್ಲಿ  ಬಾಬಾ ದತ್ತು ಪುತ್ರಿ

30. ದೆಹಲಿಯಿಂದ ಹನಿಪ್ರಿತ್​ ಎಸ್ಕೇಪ್​?

ನವದೆಹಲಿ: ಹನಿಪ್ರೀತ್ ಬಂಧನಕ್ಕಾಗಿ ಪೊಲೀಸರ ಕಸರತ್ತು - ದೆಹಲಿಯಲ್ಲಿರುವ ಹನಿಪ್ರಿತ್​ ನಿವಾಸ ಜಾಲಾಡಿದ ಪೊಲೀಸರು - ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಬಾಬಾ ದತ್ತು ಪುತ್ರಿ

31. ಮಾಲೆಗಾಂವ್ ಸ್ಫೋಟ ಆರೋಪಿಗೆ ಜಾಮೀನು:

ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣ - ಆರೋಪಿ ಮೇಜರ್ ರಮೇಶ್ ಉಪಾಧ್ಯಾಯಗೆ ಬಾಂಬೆ ಹೈಕೋರ್ಟ್ ಜಾಮೀನು - 1 ಲಕ್ಷ ಬಾಂಡ್ ಪಡೆದು ಜಾಮೀನು ನೀಡಿದ ಕೋರ್ಟ್​

32. ಅಥ್ಲಿಟ್‌ ವೀಸಾ ನಿರಾಕರಣೆ:

ನವದೆಹಲಿ: 101 ವರ್ಷದ ಭಾರತೀಯ ಅಥ್ಲೀಟ್‌ಗೆ ವೀಸಾ ನೀಡಲು ಚೀನಾ ನಕಾರ - ಏಷ್ಯಾನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಹೊರಟಿದ್ದ ಮಾನ್ ಕೌರ್ - ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ವೀಸಾ ತಿರಸ್ಕೃರಿಸಿದ ಚೀನಾ

33. ವರುಣ್​ಗಾಂಧಿ ಲೇಖನಕ್ಕೆ ಕಿಡಿ:

ನವದೆಹಲಿ: ರೋಹಿಂಗ್ಯಾಗಳ ಪರ ವರುಣ್‌ ಗಾಂಧಿ ಬ್ಯಾಟಿಂಗ್​ - ನಿರಾಶ್ರಿತರಿಗೆ ಆಶ್ರಯ ನೀಡಬೇಕು ಎಂದು ಲೇಖನ - ವರುಣ್‌ ಗಾಂಧಿ ಲೇಖನಕ್ಕೆ  ಟೀಕೆಗಳ ಸುರಿಮಳೆ 

34. 98ನೇ ವಯಸ್ಸಿನಲ್ಲಿ MA ಪಾಸ್‌

ಪಾಟ್ನಾ: 98ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಹಿರಿಯ ನಾಗರಿಕ - ಯಾವುದೇ ಸೌಕರ್ಯ ಇಲ್ಲದೆ ಎಂಎ ಪರೀಕ್ಷೆ ಪಾಸ್​  - ಯುವಕರಿಗೂ ಮಾದರಿಯಾದ ಪಾಟ್ನಾದ ರಾಜ್‌ ಕುಮಾರ್‌

35. ಐತಿಹಾಸಿಕ ಭದ್ರಕಾಳಿ ಪ್ರತಿಮೆ ಪತ್ತೆ

ತಮಿಳುನಾಡು: ತಮಿಳುನಾಡಿನ ಸಾವಿರ ವರ್ಷ ಹಳೆಯ ಭದ್ರಕಾಳಿ ಪ್ರತಿಮೆ ಪತ್ತೆ - ನದಿ ತಟದಲ್ಲಿ ಸಿಕ್ತು ಐತಿಹಾಸಿಕ ಕಲ್ಲಿನ ಶಿಲ್ಪ - ದಿಂಡಿಗಲ್​ನ ಇರವಿಮಂಗಲಂ ನದಿಯಲ್ಲಿ ಪತ್ತೆ

36. ಗುಪ್ತಚರ ಸಂಸ್ಥೆಯಿಂದಲೇ ಉಗ್ರರ ರಕ್ಷಣೆ

ಇಸ್ಲಾಮಾಬಾದ್ : ನಮ್ಮ ದೇಶದ ಗುಪ್ತಚರ ಸಂಸ್ಥೆಯೇ ಭಯೋತ್ಪಾದಕರನ್ನು ರಕ್ಷಿಸುತ್ತಿದೆ  - ಮಾಹಿತಿ ಇದ್ರೂ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ - ಪಾಕಿಸ್ತಾನದ ಗುಪ್ತಚರ ದಳದ ಅಧಿಕಾರಿಯಿಂದ ಸ್ಫೋಟಕ ಸತ್ಯ ಬಯಲು

37. ಪಾಕ್ ಭಯೋತ್ಪಾದನೆ ಒಪ್ಪಿದ ಚೀನಾ:

ಬೀಜಿಂಗ್: ಮಿತ್ರದೇಶ ಪಾಕಿಸ್ತಾನ ಭಯೋತ್ಪಾದನೆ ಒಪ್ಪಿಕೊಂಡ ಚೀನಾ - ಆದರೂ ಪಾಕ್ ಪರ ವಹಿಸಿದ ಚೀನಾ  -ಸುಷ್ಮಾರದ್ದು ಸೊಕ್ಕಿನ ಮಾತು ಎಂದು ಕಿಡಿ

38. ಹಿಲ್ ಸ್ಟೇಷನ್‌ನಲ್ಲಿ ಸ್ಫೋಟ:

ಲಂಡನ್: ಲಂಡನ್ ಟವರ್ ಹಿಲ್ ಸ್ಟೇಷನ್‌ನಲ್ಲಿ ಸ್ಫೋಟ - ಐವರು ಪ್ರಯಾಣಿಕರಿಗೆ ಗಾಯ - ಘಟನೆಯಿಂದ ಗಾಬರಿಯಾದ ಪ್ರಯಾಣಿಕರು 

39. ಫೋಟೋ ತಂದ ಆಪತ್ತು

ನ್ಯೂಯಾರ್ಕ್: ಪಾಸ್​ಪೋರ್ಟ್​ನಲ್ಲಿ ಯುವತಿಯಂತೆ ಕಾಣಿಸಿದ್ದೇ ತಪ್ಪಾಯ್ತು - ಟರ್ಕಿಯಿಂದ ವಾಪಸ್ಸಾಗುತ್ತಿದ್ದ 41 ವರ್ಷದ ಮಹಿಳೆ ವಶಕ್ಕೆ - ನ್ಯೂಯಾರ್ಕ್ ನ ಪಾಸ್​ಪೋರ್ಟ್​ ಕಚೇರಿಯಲ್ಲಿ ವಿಲಕ್ಷಣ ಘಟನೆ

40. ನೋಬೆಲ್ಗೆ ಡಾಲರ್​ ನಗದು

ಸ್ವೀಡನ್: ಮುಂದಿನವಾರ 2017ರ ಸಾಲಿನ ನೋಬೆಲ್ ಪ್ರಶಸ್ತಿ ಪ್ರದಾನ - ಇನ್ಮುಂದೆ ನೋಬೆಲ್ ವಿಜೇತರಿಗೆ ಮಿಲಿಯನ್ ಡಾಲರ್  ನಗದು - ನೋಬೆಲ್ ಫೌಂಡೇಶನ್ ನ ಆಡಳಿತ ಮಂಡಳಿಯಿಂದ ಸಿಹಿಸುದ್ದಿ

41. ದುಬೈ: ಕ್ರಿಕೆಟ್ ರೂಲ್ಸ್ ಚೇಂಜ್  

ಅಸಭ್ಯ ವರ್ತನೆ ತೋರುವ ಆಟಗಾರರಿಗೆ ನೀಡುವ ಶಿಕ್ಷೆಯಲ್ಲಿ ಭಾರಿ ಬದಲಾವಣೆ - ನಾಳೆಯಿಂದ ಪ್ರಾರಂಭವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಗಳಲ್ಲಿ ಈ ಹೊಸ ನಿಯಮಗಳು ಜಾರಿ - ಆಫ್ರಿಕಾ-ಬಾಂಗ್ಲಾ ಮತ್ತು ಪಾಕ್​-ಲಂಕಾ ಸರಣಿಗಳ ಮೂಲಕ ಅನುಷ್ಠಾನಗೊಳ್ಳಲಿದೆ ಹೊಸ ನಿಯಮ

42. ಬೆಂಗಳೂರು: ಕಠಿಣ ಅಭ್ಯಾಸ

ನಾಳೆ ಬೆಂಗಳೂರಿನಲ್ಲಿ ಭಾರತ-ಆಸ್ಟ್ರೇಲಿಯಾ 4ನೇ ಏಕದಿನ  ಪಂದ್ಯ -   ಈ ಪಂದ್ಯಕ್ಕಾಗಿ  ಸಿದ್ಧಗೊಂಡಿದೆ ಚಿನ್ನಸ್ವಾಮಿ ಸ್ಟೇಡಿಯಂ-  ಪಂದ್ಯಕ್ಕೆ ಎರಡು ದಿನ ಮುನ್ನವೇ ಟಿಕೆಟ್ ಕೊಂಡ  ಪ್ರೇಕ್ಷಕರು

43. ಬೆಂಗಳೂರು: ಪಾಂಡೆ ಮನದಾಳ

ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳೊ ಒತ್ತಡದಲ್ಲಿ ನಾನಿದ್ದೇನೆ - ನನಗೆ ಪತ್ರಿ ಪಂದ್ಯವು ಆರ್ ಡೈ - ಉತ್ತಮ ಪ್ರದರ್ಶನ ನೀಡೋ ಒತ್ತಡದಲ್ಲಿದ್ದೇನೆ ಎಂದ ಮನೀಷ್​ ಪಾಂಡೆ

44. ಲಕ್ನೌ: ಪೃಥ್ವಿ ಶಾ ದಾಖಲೆ

ಆರಂಭಿಕ ಆಟಗಾರ ಪೃಥ್ವಿ ಶಾ ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ ನಿಮಾರ್ಣ -    320 ದಿನಗಳ ದುಲೀಪ್ ಟ್ರೋಫಿಯಲ್ಲಿ ಶತಕ -  ರಾಹುಲ್ ದ್ರಾವಿಡ್ ಮಾರ್ಗದರ್ಶವೇ ನನಗೆ ಸ್ಫೂರ್ತಿ ಎಂದ ಪೃಥ್ವಿ

45. ಲಂಡನ್: ಬೆನ್ ಸ್ಟೋಕ್ಸ್ ಬಂಧನ

ಇಂಗ್ಲೆಂಡ್ ಆಲ್​ರೌಂಡರ್​ ಬೆನ್ ಸ್ಟೋಕ್ಸ್  ಅರೆಸ್ಟ್ - ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನ - ಇಂದು ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ  ಸ್ಟೋಕ್ಸ್  ಡ್ರಾಪ್

 

 

 

 

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌