ಪಾಪಿ ಗಂಡ ಹೆಂಡತಿ ಮರ್ಮಾಂಗಕ್ಕೆ ಇಸ್ತ್ರಿ ಪೆಟ್ಟಿಗೆ ಇಟ್ಟ

Published : Sep 26, 2017, 11:26 PM ISTUpdated : Apr 11, 2018, 01:07 PM IST
ಪಾಪಿ ಗಂಡ ಹೆಂಡತಿ ಮರ್ಮಾಂಗಕ್ಕೆ ಇಸ್ತ್ರಿ ಪೆಟ್ಟಿಗೆ ಇಟ್ಟ

ಸಾರಾಂಶ

ಇದೇ 23ರ ರಾತ್ರಿ ಕುಡಿದು ಮನೆಗೆ ಬಂದಿದ್ದ ಗಂಡ ದಿಲೀಪ್ ಕುಮಾರ್, ಕುಡಿದ ಮತ್ತಿನಲ್ಲಿ ರಾತ್ರಿ 2 ಗಂಟೆಗೆ ಎದ್ದು, ತವರು ಮನೆಯಿಂದ ಒಡವೆ‌ ತರುವಂತೆ ಹೆಂಡತಿ ಜೊತೆ ಜಗಳ ಮಾಡಿದ್ದಾನೆ.

ಬೆಂಗಳೂರು(ಸೆ.26): ವರದಕ್ಷಿಣೆಗಾಗಿ ಹೆಂಡತಿ ಮೇಲೆ ಗಂಡನೇ‌ ಹೀನವಾಗಿ ನಡೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯ ಮರ್ಮಾಂಗಕ್ಕೆ ಬಿಸಿ ಇಸ್ತ್ರಿ ಪೆಟ್ಟಿಗೆ ಇಟ್ಟು ದೌರ್ಜನ್ಯ ನಡೆಸಿದ ನೀಚ ಕೃತ್ಯ ಬಯಾಲಾಗಿದೆ.

ದಿಲೀಪ್ ಎಂಬಾತ ಇದೇ ತಿಂಗಳ‌ 23 ರಂದು ತನ್ನ ಪತ್ನಿ ಜಾಕ್ವೆಲಿನ್ ಮೇಲೆ ಹಲ್ಲೆ ನಡೆಸಿದ್ದು, ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಗಂಡನ ವಿರುದ್ಧ ಹೆಂಡತಿ ದೂರು ನೀಡಿದ್ದಾಳೆ. ಇದೇ 23ರ ರಾತ್ರಿ ಕುಡಿದು ಮನೆಗೆ ಬಂದಿದ್ದ ಗಂಡ ದಿಲೀಪ್ ಕುಮಾರ್, ಕುಡಿದ ಮತ್ತಿನಲ್ಲಿ ರಾತ್ರಿ 2 ಗಂಟೆಗೆ ಎದ್ದು, ತವರು ಮನೆಯಿಂದ ಒಡವೆ‌ ತರುವಂತೆ ಹೆಂಡತಿ ಜೊತೆ ಜಗಳ ಮಾಡಿದ್ದಾನೆ. ಆದ್ರೆ ಜಾಕ್ವೆಲಿನ್ ಆತನ ಮಾತನ್ನ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪಾಪಿ ಪತಿ, ಬಿಸಿ ಇಸ್ತ್ರಿ ಪೆಟ್ಟಿಗೆಯನ್ನ ಹೆಂಡತಿಯ ಮರ್ಮಾಂಗಕ್ಕೆ ಇಟ್ಟು ದೌರ್ಜನ್ಯ ನಡೆಸಿದ್ದಾನೆ. ನಂತರ ಚಾಕುವಿನಿಂದ ಹೆಂಡತಿ ತಲೆಗೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿದ್ದ ಜಾಕ್ವಲಿನ್​ಗೆ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪವರ್‌ ಪಾಯಿಂಟ್‌: ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!