
ಗಾಜಿಯಾಬಾದ್ : ಈಗಿನ ಕಾಲದಲ್ಲಿ ಯಾರನ್ನೂ ನಂಬುವ ಹಾಗೇ ಇಲ್ಲ. ಏಕೆಂದರೆ ಪೊಲೀಸರ ವೇಷದಲ್ಲಿ ಬಂದ ದರೋಡೆಕೋರರು ಚಿನ್ನಾಭರಣ ಉದ್ಯಮಿಯೊಬ್ಬರಿಂದ ಬರೋಬ್ಬರಿ 10 ಕೆ.ಜಿ. ಚಿನ್ನವನ್ನು ದೋಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಬಳಿ ನಡೆದಿದೆ.
ಮುಂಬೈನ ಯೂನಿಯನ್ ಜುವೆಲರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಜೈನ್ ಎನ್ನುವವರು ವ್ಯಾಪಾರಕ್ಕೆಂದು ದೆಹಲಿಗೆ ಬಂದಿದ್ದರು. ಗ್ರಾಹಕರಿಗೆ ತೋರಿಸಲೆಂದು ಕಾರಿನಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಂಡಿದ್ದರು. ಈ ಸಂಗತಿ ತಿಳಿದ ಇಬ್ಬರು ದರೋಡೆಕೋರರು ಪೊಲೀಸರ ವೇಷದಲ್ಲಿ ಬಂದು ಕಾರನ್ನು ಅಡ್ಡಗಟ್ಟಿದ್ದಾರೆ.
ಪೊಲೀಸರು ಬಂದಿದ್ದಾರೆ ಎಂದು ಗಾಬರಿಯಿಂದ ಕಾರು ನಿಲ್ಲಿಸಿದಾಗ ದರೋಡೆಕೋರರು ಉದ್ಯಮಿಯ ಬಳಿಯಿದ್ದ 10 ಕೆ.ಜಿ. ಚಿನ್ನವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.