'ಪರ್ರಿಕರ್ ಯಾರಿಗೂ ಸಿಗುತ್ತಿಲ್ಲ - ಫೋನ್ ಕೂಡ ಸ್ವೀಕರಿಸುತ್ತಿಲ್ಲ'

Published : Dec 28, 2017, 11:04 AM ISTUpdated : Apr 11, 2018, 12:51 PM IST
'ಪರ್ರಿಕರ್ ಯಾರಿಗೂ ಸಿಗುತ್ತಿಲ್ಲ - ಫೋನ್ ಕೂಡ ಸ್ವೀಕರಿಸುತ್ತಿಲ್ಲ'

ಸಾರಾಂಶ

ಕರ್ನಾಟಕಕ್ಕೆ ಮಹದಾಯಿ ನೀರು ಬಿಡಲು ಚರ್ಚೆಗೆ ಸಿದ್ಧವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ್ ಮಿತ್ರಪಕ್ಷಗಳಿಂದ ವ್ಯಕ್ತವಾಗುತ್ತಿರುವ ವಿರೋಧದಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.

ಹುಬ್ಬಳ್ಳಿ (ಡಿ.28):  ಕರ್ನಾಟಕಕ್ಕೆ ಮಹದಾಯಿ ನೀರು ಬಿಡಲು ಚರ್ಚೆಗೆ ಸಿದ್ಧವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ್ ಮಿತ್ರಪಕ್ಷಗಳಿಂದ ವ್ಯಕ್ತವಾಗುತ್ತಿರುವ ವಿರೋಧದಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.

ಗೋವಾದಲ್ಲಿ ಬಿಜೆಪಿ ಜತೆ ಕೈ ಜೋಡಿಸಿರುವ ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಶಾಸಕರು ‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೀರು ಬಿಡುವ ಹೇಳಿಕೆ ಏಕೆ ನೀಡಿದಿರಿ, ತಕ್ಷಣ ಆ ಹೇಳಿಕೆಯನ್ನು ಅಧಿಕೃತವಾಗಿ ಹಿಂಪಡೆಯಿರಿ’ ಎನ್ನುವ ಒತ್ತಡ ಹೇರುತ್ತಿದ್ದಾರೆ.

ಹೀಗಾಗಿ ಸಿಎಂ ಪರಿಕರ್ ಅಕ್ಷರಶಃ ಗೊಂದಲಕ್ಕೆ ಸಿಲುಕಿದ್ದಾರೆ. ಗೋವಾ ದಲ್ಲಿ ಎದ್ದಿರುವ ತಮ್ಮ ವಿರುದ್ಧದ ಆಕ್ರೋಶದ ಅಲೆಯನ್ನು ಹೇಗೆ ಶಮನ ಮಾಡುವುದು ಎನ್ನುವ ಗೊಂದಲದಲ್ಲಿ ಬಿದ್ದಿರುವ ಪರ‌್ರಿಕರ್‌ಗೆ

ವಿಳಂಬ ಮಾಡಿದರೆ ಸರ್ಕಾರ ಬಿದ್ದುಹೋಗಬಹುದು ಎನ್ನುವ ಆತಂಕವೂ ಕಾಡುತ್ತಿದೆ. ಈ ವಿವಾದದ ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ ಸುತ್ತುತ್ತಾ ಯಾರ ಕೈಗೂ ಸಿಗದೇ ಕಾಲಹರಣ ಮಾಡುತ್ತಿದ್ದಾರೆ. ಹಾಗಾಗಿ ಸ್ವಪಕ್ಷೀಯರೂ ಸೇರಿ ಯಾವುದೇ ಶಾಸಕರ ಕರೆ ಸ್ವೀಕರಿಸುತ್ತಿಲ್ಲವಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನ: ಸ್ನೇಹಿತರಿಂದಲೇ ರೌಡಿ ಶೀಟರ್‌ ಜೆಸಿಬಿ ಮಂಜು ಹತ್ಯೆಗೆ ಯತ್ನ, ರಕ್ತದ ಮಡುವಲ್ಲಿ ನರಳಾಡಿದ ಮಂಜ
ಪ್ರತಿ ಟ್ವೀಟ್‌ಗೆ ಗರಿಷ್ಠ ಲೈಕ್ಸ್ , ಭಾರತದಲ್ಲಿ ನಂ.1 ಪ್ರಧಾನಿ ಮೋದಿ, ನಂತರದ ಸ್ಥಾನ ಯಾರಿಗೆ?