
ಕಲಬುರಗಿ (ಡಿ. 28): ಕಲಬುರಗಿ ನಗರಕ್ಕೆ ಬುಧವಾರ ಭೇಟಿ ನೀಡಿದ್ದ ಪ್ರಾಥಮಿಕ, ಪ್ರೌಢ ಶಿಕ್ಷಣ ಖಾತೆ ಸಚಿವ ತನ್ವೀರ್ ಸೇಠ್ ಅವರ ಕಾರಿನ ನಂಬರ್ ಪ್ಲೇಟ್‌ನಲ್ಲಿ ಒಂದೇ ಅಂಕಿಯನ್ನು ದೊಡ್ಡದಾಗಿ ಬರೆಯಿಸುವ ಮೂಲಕ ಇಂಡಿಯನ್ ಮೋಟಾರ್ ವೆಹಿಕಲ್ ಆ್ಯಕ್ಟ್ (ಐಎಂವಿ) ಉಲ್ಲಂಘನೆ ಯಾಗಿರುವುದು ಸ್ಪಷ್ಟವಾಗಿ ಕಂಡುಬಂತು.
ಸಚಿವರು ಇಲ್ಲಿನ ಶಿಕ್ಷಣ ಸಂವಾದದಲ್ಲಿ ಪಾಲ್ಗೊಳ್ಳಲು ಕಲಬುರಗಿ ನಗರಕ್ಕೆ ಆಗಮಿಸಿದ್ದರು. ಅದಕ್ಕಾಗಿ ಅವರು ಬಳಸಿದ್ದ ಕೆಎ 52, ಜಿಎ 0009 ಸರ್ಕಾರಿ ವಾಹನದಲ್ಲಿ ನಾಲ್ಕೂ ನಂಬರ್‌ಗಳಲ್ಲಿ 9 ಒಂದನ್ನೇ ಬಲು ದೊಡ್ಡದಾಗಿ ಬರೆಯಿಸಲಾಗಿತ್ತು. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿದ್ದ ಫಲಕದಲ್ಲಿ 9 ಮಾತ್ರ ಇಡೀ ಫಲಕವನ್ನೇ ಆವರಿಸಿತ್ತು! ಐಎಂವಿ ಕಾಯಿದೆಯ ಸೆಕ್ಷನ್ 177 ಪ್ರಕಾರ ವಾಹನಗಳ ಸಂಖ್ಯಾ ಫಲಕ ಸ್ಪಷ್ಟವಾಗಿರಬೇಕು. ಕಪ್ಪು ಬಣ್ಣದಿಂದಲೇ ಬರೆದದ್ದಾಗಿರಬೇಕು. ಅಕ್ಷರಗಳು ಇಂತಿಷ್ಟೇ ಆಕಾರದ ದ್ದಾಗಿರಬೇಕು, ಸಮಾನವಾಗಿರಬೇಕು. ಆದರೆ, ಸಚಿವರ ಕಾರಿನಲ್ಲಿ ಮಾತ್ರ ಒಂದು ಸಂಖ್ಯೆಯನ್ನು ಮಾತ್ರ ದೊಡ್ಡದಾಗಿ ಬರೆಸಲಾಗಿತ್ತು. ಕಳೆದ ವಾರವಷ್ಟೇ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸರು ಅಲ್ಲಿನ 160 ಕ್ಕೂ ಅಧಿಕ ದೋಷಪೂರಿತ ನಂಬರ್ ಪ್ಲೇಟ್ ಜಪ್ತಿ ಮಾಡಿದ್ದಲ್ಲದೆ ದಂಡ ವಿಧಿಸಿದ್ದರು. ಇದೀಗ ನಗರದಲ್ಲಿ ಮಂತ್ರಿಗಳ ಕಾರೇ ಈ ರೀತಿ ದೋಷಪೂರಿತ ನಂಬರ್ ಪ್ಲೇಟ್‌ನೊಂದಿಗೆ ಸಂಚರಿಸಿದರೂ ಸಂಚಾರ ಪೊಲೀಸರ ಕಣ್ಣಿಗೆ ಬೀಳದೇ ಹೋಗಿದ್ದು ಅಚ್ಚರಿ ಮೂಡಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.