ದಾವೋಸ್'ನ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ದೇವೇಗೌಡರನ್ನು ನೆನೆದ ಪ್ರಧಾನಿ ಮೋದಿ

By Suvarna Web deskFirst Published Jan 23, 2018, 7:44 PM IST
Highlights

ಹೆಚ್.ಡಿ. ದೇವೇಗೌಡ ಅವರು ಪ್ರಧಾನಿಯಾದ ಸಂದರ್ಭದಲ್ಲಿ 1997ರಲ್ಲಿ ದಾವೋಸ್'ಗೆ ಭೇಟಿ ನಿಡಿದ್ದರು. ಆ ಸಂದರ್ಭದಲ್ಲಿ ಭಾರತದ ಜಿಡಿಪಿ 400 ಬಿಲಿಯನ್ ಡಾಲರ್'ಗಳಷ್ಟಿತ್ತು. ಈಗ ನಮ್ಮ ಜಿಡಿಪಿ ಅದರ 6 ಪಟ್ಟು ಹೆಚ್ಚಾಗಿದೆ'

ದಾವೋಸ್(ಜ.23): ಸ್ವಿಟ್ಜರ್'ಲ್ಯಾಂಡ್'ನ ದಾವೋಸ್'ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ನೆನಪಿಸಿಕೊಂಡರು.

ಹೆಚ್.ಡಿ. ದೇವೇಗೌಡ ಅವರು ಪ್ರಧಾನಿಯಾದ ಸಂದರ್ಭದಲ್ಲಿ 1997ರಲ್ಲಿ ದಾವೋಸ್'ಗೆ ಭೇಟಿ ನಿಡಿದ್ದರು. ಆ ಸಂದರ್ಭದಲ್ಲಿ ಭಾರತದ ಜಿಡಿಪಿ 400 ಬಿಲಿಯನ್ ಡಾಲರ್'ಗಳಷ್ಟಿತ್ತು. ಈಗ ನಮ್ಮ ಜಿಡಿಪಿ ಅದರ 6 ಪಟ್ಟು ಹೆಚ್ಚಾಗಿದೆ' ಎಂದು ಭಾರತದ ಆರ್ಥಿಕ ಅಭಿವೃದ್ಧಿ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಹವಾಮಾನ ಬದಲಾವಣೆ ಹಾಗೂ ಭಯೋತ್ಪಾದನೆ ವಿಶ್ವ ಎದರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ. ಒಳ್ಳೆಯ ಭಯೋತ್ಪಾದನೆ ಹಾಗೂ ಕೆಟ್ಟ ಭಯೋತ್ಪಾದನೆ ಎಂದು ವಿಂಗಡಿಸುವುದು ಮತ್ತಷ್ಟು ಅಪಾಯಕಾರಿ. ಈ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ' ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಹಣಕಾಸು ನಿಧಿ ಭಾರತದ ಆರ್ಥಿಕತೆಯ ಬಗ್ಗೆ ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆ  ಶೇ. 7.4 ರಷ್ಟು ಅಭಿವೃದ್ಧಿ ಹೊಂದುವುದರ ಬಗ್ಗೆ ದೃಢವಿಶ್ವಾಸವಿದೆ' ಎಂದು ಹೇಳಿದರು.

 

click me!