
ಹೈದರಾಬಾದ್(ಜ.23): ಇವರಿಬ್ಬರು ಕೆಲ ವರ್ಷಗಳ ಹಿಂದೆ ದಂಪತಿಗಳು. ಆದರೆ ಕೆಲ ವರ್ಷಗಳ ಹಿಂದಷ್ಟೆ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಿದ್ದರು. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ಅದು ಕುಂಟತ್ತಲೆ ಸಾಗುತ್ತಿತ್ತು. ಇಬ್ಬರು ಒಂದಾಗುವ ಮನಸ್ಸು ಮಾಡುತ್ತಿದ್ದರೂ ಏನೋ. ಆದರೆ ಇಂದು ನಡೆದ ಘಟನೆ ಇಬ್ಬರು ಶಾಶ್ವತವಾಗಿ ದೂರವಾಗುವಂತೆ ಮಾಡಿದೆ.
ಅಷ್ಟಕ್ಕೂ ಈ ಕತೆ ಏನು ಅಂತೀರಾ, ಪತ್ನಿ ಹೈದರಾಬಾದ್'ನ ಪೊಲೀಸ್ ಇಲಾಖೆಯ ಸಹಾಯಕ ಎಸ್'ಪಿ, ಪತಿ ವಿದೇಶದಲ್ಲಿರುವ ಎನ್'ಆರ್'ಐ ಉದ್ಯಮಿ. ಇಬ್ಬರು 2010ರಿಂದ ವೈಯಕ್ತಿಕ ಕಾರಣಗಳಿಂದ ಬೇರೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ವಿಚ್ಚೇದನ ಅರ್ಜಿ ನ್ಯಾಯಾಲಯದಲ್ಲಿ ಬಾಕಿಯುಳಿದಿತ್ತು.
ಪತ್ನಿಯಿಂದ ದೂರವಾಗಿದ್ದ ಪತಿರಾಯನಿಗೆ ಕೆಲ ದಿನಗಳಿಂದ ಪತ್ನಿಯ ನಡೆವಳಿಕೆ ಬಗ್ಗೆ ಸಂದೇಹ ಬಂದಿದೆ. ಅದನ್ನು ಖಚಿತ ಪಡಿಸಿಕೊಂಡು. ಹೆಂಡತಿ ಹಾಗೂ ಆಕೆಯ ಜೊತೆ ಸರಸವಾಡುತ್ತಿರುವವನಿಗೆ ಬುದ್ಧಿ ಕಲಿಸಬೇಕೆಂದು ಪತ್ನಿ ವಾಸವಿರುವ ಮನೆಗೆ ರಾತ್ರಿ ವೇಳೆ ತನ್ನ ಸಂಬಂಧಿಕರ ಜೊತೆ ಆಗಮಿಸಿದ್ದಾನೆ.
ಶಾಕ್ ಆದ ಪತಿ
ನಿಧಾನವಾಗಿ ಎಂಟ್ರಿ ಕೊಟ್ಟಾಗ ಪತ್ನಿ ಪರಪುರುಷನ ಜೊತೆ ಮಂಚದಲ್ಲಿ ಸರಸವಾಡುತ್ತಿದ್ದಳು. ಕೋಪದ್ರಿಕ್ತಗೊಂಡು ಆತನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾನೆ. ಅಸಲಿಗೆ ಅನಂತರ ತಿಳಿದಿದ್ದೇನಂದರೆ ಚಲ್ಲಾಟವಾಡುತ್ತಿದ್ದವನು ಆಕೆಗಿಂದ ಕೆಳ ದರ್ಜೆಯ ಅಧಿಕಾರಿ. ಆ ಅಧಿಕಾರಿಯನ್ನು ಅಮಾನತು ಮಾಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.