ಜಾಗತಿಕ ತಾಪಮಾನ ಏರಿಕೆ ತರುತ್ತಿದೆ ಭಾರಿ ಅನಾಹುತ : ಏಚ್ಚರ!

By Web DeskFirst Published Sep 7, 2018, 1:49 PM IST
Highlights

ಜಾಗತಿಕ ತಾಪಮಾನ ಏರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಇದರಿಂದ ಭಾರೀ ಪ್ರಮಾಣದಲ್ಲಿ ಸಮಸ್ಯೆಗಳು ಎದುರಾಗಬಹುದು. ಸುನಾಮಿಯಂತಹ ಸಮಸ್ಯೆಗಳು ಸಂಭವಿಸಬಹುದು ಎಂದು ಸಂಶೋಧನೆಯೊಂದು ಹೇಳಿದೆ. 

ಪ್ಯಾರಿಸ್ :  ಜಾಗತಿಕ ತಾಪಮಾನ ಏರಿಕೆಯು ಪರಸರದ ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುತ್ತಿದೆ.  ಅಲ್ಲದೇ ಇದರಿಂದ ಭಾರೀ ಪ್ರಮಾಣದ ಮಂಜುಗಡ್ಡೆಗಳು ಕರುಗುವಿಕೆ, ಭೂಕುಸಿತ, ಭೂ ಕಂಪನದಂತಹ ಸಮಸ್ಯೆಗಳು ಎದುರಾಗುತ್ತದೆ. 

ಜಾಗತಿಕ ತಾಪಮಾನ ಏರಿಕೆಯ ಮುಖ್ಯ ಉದಾಹರಣೆಯಾಗಿ 2015ರಲ್ಲಿ ಅಲಸ್ಕನ್ ನಲ್ಲಿ ಸಂಭವಿಸಿದ ಭಾರೀ ಪ್ರಮಾಣದ ಸುನಾಮಿಯನ್ನು ತೆಗೆದುಕೊಳ್ಳಬಹುದಾಗಿದೆ. ಸುನಾಮಿ ಸಂಭವಿಸಿ 200 ಮೀಟರ್ ಎತ್ತರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿದ್ದವು.  ಇದೊಂದು ಅತ್ಯಂತ ಭಯಾನಕ ಸುನಾಮಿಯಾಗಿತ್ತು. ಆದರೆ ಈ ವೇಳೆ ಯಾವುದೇ ರೀತಿಯ ಸಾವು ನೋವುಗಳು ಸಂಭವಿಸದ ಹಿನ್ನೆಲೆಯಲ್ಲಿ ಇದು ಅಷ್ಟು ಪ್ರಮಾಣದಲ್ಲಿ ಬೆಳಕಿಗೆ ಬರಲಿಲ್ಲ. 

ಈ ಸುನಾಮಿಯು ಮಂಜುಗಡ್ಡೆ ಕರಗುವಿಕೆ ಹಾಗೂ ಕಲ್ಲು ಬಂಡೆಗಳು ಅಲುಗಾಡಲು ಕಾರಣವಾಯಿತು. ಇದೀಗ ಜಾಗತಿಕ ತಾಪಮಾನ ಏರಿಕೆಯು ಜಗತ್ತಿನಲ್ಲಿ ಅನೇಕ ರೀತಿಯ ಅನಾಹುತ ಸಂಭವಿಸಲು ಕಾರಣವಾಗುತ್ತಿದೆ.  ಮಂಜುಗಡ್ಡೆ ಕರುಗುವುದಷ್ಟೇ ಅಲ್ಲದೇ ಭೀಕರ ಸುನಾಮಿಗೂ ಕೂಡ  ಪದೇ ಪದೇ ಸಂಭವಿಸುತ್ತಿವೆ.  

ಸಮುದ್ರ ತಟದಲ್ಲಿ ಭಾರೀ ಪ್ರಮಾಣದ ರಕ್ಕಸ ಅಲೆಗಳು ಸೃಷ್ಟಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಹವಾಮಾನ ಬದಲಾವಣೆ ವೈಪರೀತ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ಜಾಗತಿಕ ತಾಪಮನ ಏರಿಕಯಾಗದಂತೆ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. 

ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಸಂಭವಿಸುವ ಭೂ ಕಂಪನಕ್ಕೆ ಜಾಗತಿಕ ತಾಪಮಾನವು ಪರೋಕ್ಷ ಕಾರಣವಾಗಿದೆ ಎಂದು ಸಂಶೋಧನೆಯೊಂದು ಹೇಳಿದೆ. 

click me!