
ಬೆಂಗಳೂರು(ಡಿ.07): ಪ್ರೀತಿಯ ವಿಷಯದಲ್ಲಿ ಚಲ್ಲಾಟವಾಡಿದ ಯುವಕನಿಗೆ ಯುವತಿ ಸಾವಿನ ಬಾಗಿಲು ತೋರಿಸಿದ್ದಾಳೆ. ಮೈಸೂರಿನ ಯುವತಿ ಶೃತಿಗೆ ಕಳೆದ ಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಮನ್ಸೂರ್ ಜೊತೆ ಪ್ರೀತಿ ಚಿಗುರಿತ್ತು. ಪ್ರೀತಿ ಪ್ರಣಯಕ್ಕೆ ತಿರುಗಿದಾಗ ಶೃತಿ ಗರ್ಭಿಣಿಯಾಗಿದ್ದಳು.
ಮದುವೆಯ ಪ್ರಸ್ತಾಪ ಬಂದಾಗ, ಮನ್ಸೂರ್ ನಿರಾಕರಿಸಿದ್ದ. ಶೃತಿ ಕಾಡಿ ಬೇಡಿ ಸತಾಯಿಸಿದರೂ, ಮನ್ಸೂರ್ ಮಾತ್ರ ಯಾವುದೇ ಕಾರಣಕ್ಕೂ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ. ಏನಿಲ್ಲದಿದ್ದರೂ ಮದುವೆಯಾಗಿ ನನ್ನನ್ನು ಬಿಟ್ಟು ಬಿಡು ಎಂದೂ ಶೃತಿ ಗೋಗೆರೆದಿದ್ದಾಳೆ. ಆದರೆ ಮನ್ಸೂರ್ ಮಾತ್ರ ಇದ್ಯಾವುದಕ್ಕೂ ಕರಗಲೇ ಇಲ್ಲ.
ಹೀಗಾಗಿ ಶೃತಿ ಕಳೆದ 27 ರಂದು ಮನ್ಸೂರ್ನನ್ನು ಶ್ರೀ ಕೃಷ್ಣ ಲಾಡ್ಜ್'ಗೆ ಕರೆಸಿ RIVOTRIC ಎಂಬ ಮಾತ್ರೆಯನ್ನು ಜ್ಯೂಸ್'ನಲ್ಲಿ ಹಾಕಿ ಕುಡಿಸಿದ್ದಾಳೆ. ಮಾತ್ರೆಯ ನಶೆಯಿಂದ ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರಿದ ಮನ್ಸೂರ್ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುತ್ತಾಳೆ. ಈ ವೇಳೆ ಶೃತಿ, ಬಾತ್'ರೂಮ್ಸೇರಿಕೊಂಡು ಪ್ರಾಣ ಉಳಿಸಿಕೊಳ್ಳುತ್ತಾಳೆ.
ಶೇಕಡಾ 40 ರಷ್ಟು ಸುಟ್ಟಿದ್ದ ಮನ್ಸೂರ್'ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಡಿಸೆಂಬರ್ 1 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಕಾಟನ್ಪೇಟೆ ಪೊಲೀಸರು ಆರೋಪಿ ಶೃತಿಯನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.