ತಜ್ಞ ವೈದ್ಯರಿಲ್ಲವೆಂದು ಬಾಲಕಿಗೆ ಚಿಕಿತ್ಸೆ ನೀಡದ ಸಿಬ್ಬಂದಿ: ಆರೋಗ್ಯ ಸಚಿವರ ತವರಲ್ಲೇ ಬಲಿಯಾಯ್ತು ಅಮಾಯಕ ಜೀವ

By Suvarna Web DeskFirst Published Oct 21, 2017, 9:56 AM IST
Highlights

ಆರೋಗ್ಯ ಸಚಿವರ ತವರಿನಲ್ಲಿ ಹಾವು ಕಚ್ಚಿದ ರೋಗಿಗೆ ಚಿಕಿತ್ಸೆ ಸಿಗದೇ ಬಾಲಕಿ ಜೀವ ಬಿಟ್ಟ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಕೋಲಾರ(ಅ.21): ಆರೋಗ್ಯ ಸಚಿವರ ತವರಿನಲ್ಲಿ ಹಾವು ಕಚ್ಚಿದ ರೋಗಿಗೆ ಚಿಕಿತ್ಸೆ ಸಿಗದೇ ಬಾಲಕಿ ಜೀವ ಬಿಟ್ಟ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ಹಾವು ಕಚ್ಚಿದವರಿಗೆ ಔಷಧಿ ಇದ್ದರೂ ಚಿಕಿತ್ಸೆ ನೀಡುವ  ಕೊರತೆಯಿಂದ ಹಾವು ಕಚ್ಚಿ 14 ವರ್ಷದ ಬಾಲಕಿ ಅಂಜಲಿ ಸಾವನ್ನಪ್ಪಿದ್ದಾಳೆ. ಮೃತ ಅಂಜಲಿ ಮಧ್ಯಾಹ್ನ ಮನೆಯ ಪಕ್ಕದಲ್ಲಿ ಪಟಾಕಿ ಒಡೆಯುವುದನ್ನು ನೋಡುತ್ತಿದ್ದಾಗ ,ಗೊಡೆಯ ಸಂದಿಯಲ್ಲಿದ್ದ ಹಾವು ಬಾಲಕಿಯ ಕೈ ಬೆರಳಿಗೆ ಕಚ್ಚಿದೆ. ತಕ್ಷಣದಲ್ಲಿ ಬಾಲಕಿ ಪೋಷಕರು ಕೆಜಿಎಫ್'ನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಚುಚ್ಚುಮದ್ದು ಇದ್ದರು ವೈದ್ಯತಜ್ಞರು ಇಲ್ಲದೆ, ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಅಂತ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

click me!