ಅಪಘಾತಗಳಿಗೆ ಕಡಿವಾಣ ಹಾಕಲು ಹೊಸ ಮಾರ್ಗ: ಹಿಂಬದಿ ಸವಾರರಿಗೆ ನೋ ರೈಡ್

By Suvarna Web DeskFirst Published Oct 21, 2017, 8:17 AM IST
Highlights

ಇನ್ನುಂದೆ ಹಿಂಬದಿ ಸವಾರರು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಂತಿಲ್ಲ. ಹೌದು. 100 ಸಿಸಿ ವಾಹನಗಳಿಗೆ ಅನ್ವಯವಾಗುವಂತೆ ಹಿಂಬದಿ ಸವಾರರನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು(ಅ.21): ಇನ್ನುಂದೆ ಹಿಂಬದಿ ಸವಾರರು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಂತಿಲ್ಲ. ಹೌದು. 100 ಸಿಸಿ ವಾಹನಗಳಿಗೆ ಅನ್ವಯವಾಗುವಂತೆ ಹಿಂಬದಿ ಸವಾರರನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರಿನ ರಕ್ಕಸ ಗುಂಡಿಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂಬದಿ ಕುಳಿತಿದ್ದ ಮಕ್ಕಳು ಸಾವನ್ನಪ್ಪಿರೋ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಈ ಸಾವು - ನೋವು ತಪ್ಪಿಸಲು ರಾಜ್ಯ ಸರ್ಕಾರ  ಹೊಸ ಆದೇಶ ತರಲು ನಿರ್ಧರಿಸಿದೆ.  ಈ ಕುರಿತು ಹೈಕೋರ್ಟ್ ಗೆ ಸರ್ಕಾರ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದು ಒಂದು ವಾರದೊಳಗೆ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

Latest Videos

ಪ್ರತಿ ಬಾರಿಯೂ ಅಫಘಾತ ಸಂಭವಿಸಿದಾಗ ಹಿಂಬದಿ ಸವಾರರೇ ಹೆಚ್ಚು ಬಲಿಯಾಗುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಈ ಆದೇಶ ಹೊಸದಾಗಿ ಖರೀದಿಸುವ ವಾಹನಗಳಿಗೆ ಮಾತ್ರ ಅನ್ವಯವಾಗುತ್ತೆ. ಒಂದೇ ಸೀಟು ಇರುವಂಥಹ ವಾಹನಗಳನ್ನು ನಿರ್ಮಿಸುವಂತೆ ಕಂಪನಿಗಳಿಗೆ ಸೂಚಿಸಲಾಗುತ್ತೆ. ಮೋಟಾರ್ ವಾಹನ ಕಾಯ್ದೆ ಯಲ್ಲಿ 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ ಎಂಬ ನಿಯಮವಿದೆ. ಇದನ್ನು ಇಂಡಿಯನ್ ರೋಡ್ ಕಾಂಗ್ರೆಸ್ ಮನವಿ ಮೇರೆಗೆ ವಿನಾಯ್ತಿ ನೀಡಲಾಗಿತ್ತು. ಆದ್ರೆ ಇನ್ಮುಂದೆ ಆ ನಿಯಮವನ್ನು ಮತ್ತೆ ಜಾರಿಗೆ ತರಲಾಗುವುದು ಎಂದು ಸಾರಿಗೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

click me!