ಮುಂಬೈ, ಬಿಹಾರದಲ್ಲಿ ಗೆದ್ದಿದ್ದ ಜಾರ್ಜ್ ಬೆಂಗಳೂರಿನಲ್ಲಿ ಸೋತಿದ್ದು ಆಗಷ್ಟೆ ಬೆಳೆಯುತ್ತಿದ್ದ ನಾಯಕನ ಎದುರು

By Suvarna Web DeskFirst Published Apr 4, 2018, 10:43 AM IST
Highlights

ಆದರೆ ಅವರುತವರು ರಾಜ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನಉತ್ತರ ಲೋಕಸಭಾ ಕ್ಷೇತ್ರದಲ್ಲಿ ೧೯೮೪ರಲ್ಲಿ ಚುನಾವಣೆಗೆಸ್ಪರ್ಧಿಸಿದಾಗ ಅವರನ್ನು ಮತದಾರರು ಕೈಹಿಡಿಯಲಿಲ್ಲ.

ಕನ್ನಡಿಗ ಜಾರ್ಜ್ ಫರ್ನಾಂಡಿಸ್ ಅವರು 1967ರ ಲೋಕಸಭೆ ಚುನಾವಣೆಯಲ್ಲಿ ಮುಂಬೈನ ಅಂದಿನ ಕಾಂಗ್ರೆಸ್ ಘಟಾನುಘಟಿ ನಾಯಕ ಸದಾಶಿವ ಕಣೋಜಿ ಪಾಟೀಲ್ ಅವರನ್ನೇ ಮಣಿಸಿದ್ದರು. ತುರ್ತು ಪರಿಸ್ಥಿತಿ ಬಳಿಕ ನಡೆದ 1977ರ ಚುನಾವಣೆಗೆ ಬಿಹಾರದ ಮುಜಾಫ್ಫರ್‌ಪುರ ಲೋಕಸಭಾ ಕ್ಷೇತ್ರದಿಂದ ಜೈಲಿನಿಂದಲೇ ಅಭ್ಯರ್ಥಿಯಾಗಿ ಜಯಭೇರಿ ಬಾರಿಸಿ ಕೇಂದ್ರ ಮಂತ್ರಿಯೂ ಆಗಿದ್ದರು.

ಆದರೆ ಅವರು ತವರು ರಾಜ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ೧೯೮೪ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಅವರನ್ನು ಮತದಾರರು ಕೈಹಿಡಿಯಲಿಲ್ಲ. ಹೀಗಾಗಿ ಕಾಂಗ್ರೆಸ್ಸಿನ ಜಾಫರ್ ಷರೀಫ್ ಎದುರು ಸೋಲುಂಡಿದ್ದರು.

click me!