ಸತ್ಯಪಾಲ್​ ಮಲಿಕ್​ ಎತ್ತಂಗಡಿ: ಜಮ್ಮು-ಕಾಶ್ಮೀರ, ಲಡಾಖ್​​ಗೆ ಹೊಸ ಗವರ್ನರ್​ಗಳ ನೇಮಕ

By Web DeskFirst Published Oct 25, 2019, 9:03 PM IST
Highlights

ಎರಡು ಕೇಂದ್ರಾಡಳಿತ ಪ್ರದೇಶ ಹಾಗೂ ಎರಡು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ.

ನವದೆಹಲಿ, [ಅ.25]: ಜಮ್ಮು ಮತ್ತು ಕಾಶ್ಮೀರ, ಗೋವಾ, ಲಡಾಖ್​​ ಹಾಗೂ ಮಿಜೋರಾಂಗೆ ಹೊಸ ರಾಜ್ಯಪಾಲರನ್ನ ನೇಮಿಸಲಾಗಿದೆ. 

ಅನರ್ಹರ ವಿಚಾರಣೆ ಮುಗೀತು,ಕರ್ನಾಟಕ ಕಪ್ ಗೆದ್ದಿತು; ಇಲ್ಲಿವೆ ಅ.25ರ ಟಾಪ್ 10 ಸುದ್ದಿ!

ನೂತನವಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್‌ ಮಲಿಕ್‌ ಅವರನ್ನು ಗೋವಾ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ. 

Jammu and Kashmir Governor Satya Pal Malik is transferred and appointed as Governor of Goa. pic.twitter.com/f8FfmVBPCi

— ANI (@ANI)

ಇನ್ನು ಸದ್ಯ ಕೇಂದ್ರ  ಹಣಕಾಸು ಸಚಿವಾಲಯದಲ್ಲಿ ಖರ್ಚು-ವೆಚ್ಚ  ಕಾರ್ಯದರ್ಶಿಯಾಗಿದ್ದ ಗಿರೀಶ್‌ ಚಂದ್ರ ಮುರ್ಮು ಅವರನ್ನು ಜಮ್ಮು ಮತ್ತು ಕಾಶ್ಮೀರದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

Girish Chandra Murmu has been appointed as Lieutenant Governor of Jammu-Kashmir. pic.twitter.com/eFSrEhcTce

— ANI (@ANI)

ಮತ್ತೊಂದು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾಗಿರುವ ಲಡಾಕ್ ರಾಜ್ಯಪಾಲರನ್ನಾಗಿ ರಾಧಾ ಕೃಷ್ಣ ಮಾಥುರ್ ಅವರನ್ನು ನೇಮಿಸಲಾಗಿದೆ.

Radha Krishna Mathur has been appointed as Lieutenant Governor of Ladakh. pic.twitter.com/G2rJ3IZ49d

— ANI (@ANI)

ಜಮ್ಮು ಕಾಶ್ಮೀರ ಮತ್ತು ಲಡಾಖ್​​ ಅಕ್ಟೋಬರ್​ 31ರಿಂದ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬರಲಿವೆ. ಈ ಹಿನ್ನೆಲೆಯಲ್ಲಿ ನೂತನ ರಾಜ್ಯಪಾಲರ ನೇಮಕಾತಿ ಆದೇಶ ಹೊರಬಿದ್ದಿದೆ.

ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರನ್ನು ಮಿಝೋರಂ ರಾಜ್ಯಪಾರನ್ನಾಗಿ ನೇಮಿಸಿಲಾಗಿದೆ.

PS Sreedharan Pillai has been appointed as the Governor of Mizoram. (File pic) pic.twitter.com/4nYgv0GTeh

— ANI (@ANI)
click me!