KSRTC ನೌಕರರಿಗೆ ದೀಪಾವಳಿ ಗಿಫ್ಟ್, ತುಟ್ಟಿಭತ್ಯೆ ಗಣನೀಯ ಹೆಚ್ಚಳ

By Web DeskFirst Published Oct 25, 2019, 8:58 PM IST
Highlights

KSRTC ನೌಕರರಿಗೆ ಸರ್ಕಾರದಿಂದ ಗುಡ್ ನ್ಯೂಸ್/ ತುಟ್ಟಿಭತ್ಯೆ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಆದೇಶ/ ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಜಾರಿ

ಬೆಂಗಳೂರು[ಅ. 25]  ಕೆಎಸ್ ಆರ್ ಟಿಸಿ ನೌಕರರಿಗೆ ಸರ್ಕಾರ ದೀಪಾವಳಿ ಕೊಡುಗೆ ನೀಡಿದೆ.   ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಆದೇಶ.

ತುಟ್ಟಿಭತ್ಯೆ ದರವನ್ನು ಶೇ6.5 ರಿಂದ ಶೇ. 11.25 ಕ್ಕೆ ಹೆಚ್ಚಳ ಮಾಡಲಾಗಿದೆ.  ಅಂದರೆ ಶೇ. 4.75 ರಷ್ಟು ಹೆಚ್ಚಳ ಮಾಡಲಾಗಿದ್ದು ಎಲ್ಲ KSRTC ಸಿಬ್ಬಂದಿ ಲಾಭ ಪಡೆದುಕೊಳ್ಳಲಿದ್ದಾರೆ.

ನಾಲ್ಕು ಸಾರಿಗೆ ನಿಗಮಗಳ ನೌಕರರ ತುಟ್ಟಿಭತ್ಯೆ ಏರಿಕೆ ಮಾಡಲಾಗಿದ್ದು ಜುಲೈ 2019ರಿಂದಲೇ ಜಾರಿಗೆ ಬರಲಿದೆ. ಅಲ್ಲಿಂದಲೇ ಎಲ್ಲ ಸಿಬ್ಬಂದಿ ಭತ್ಯೆ ಸೇರಿಸಿ ಸಂದಾಯ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.ಪೊಲೀಸ್ ಸಿಬ್ಬಂದಿಯ ನೋವಿಗೆ ಸ್ಪಂದಿಸಿದ್ದ ರಾಜ್ಯ ಸರ್ಕಾರ ಅವರಿಗೆ ನೀಡುತ್ತಿದ್ದ ಕಷ್ಟ ಪರಿಹಾರ ಭತ್ಯೆ ಪರಿಷ್ಕರಿಸಿತ್ತು.  ಜಮೇದಾರ್ , ಮುಖ್ಯ ಪೇದೆ, ಸಹಾಯಕ ಸಬ್ ಇನ್ಸಪೆಕ್ಟರ್ , ಸಬ್ ಇನ್ಸ್ ಪೆಕ್ಟರ್   ಇದರ ಲಾಭ ಪಡೆದುಕೊಳ್ಳಲಿದ್ದು ಕಷ್ಟ ಪರಿಹಾರ ಭತ್ಯೆಯಲ್ಲಿ ತಲಾ 1000 ರೂ. ಏರಿಕೆ ಮಾಡಿತ್ತು. ಇದೀಗ ಕೆಎಸ್ ಆರ್ ಟಿಸಿ  ನೌಕರರು ಲಾಭ ಪಡೆದುಕೊಂಡಿದ್ದಾರೆ.

click me!