ಕೇರಳದಲ್ಲಿ ನಕ್ಸಲರೊಂದಿಗೆ ರಹಸ್ಯ ಸಭೆ ನಡೆಸಿದ್ದ ಗೌರಿ ಲಂಕೇಶ್; ನಕ್ಸಲರಿಂದ ಸಿಕ್ಕಿತ್ತು ಎಚ್ಚರಿಕೆ!

Published : Sep 19, 2017, 04:00 PM ISTUpdated : Apr 11, 2018, 01:11 PM IST
ಕೇರಳದಲ್ಲಿ ನಕ್ಸಲರೊಂದಿಗೆ ರಹಸ್ಯ ಸಭೆ ನಡೆಸಿದ್ದ ಗೌರಿ ಲಂಕೇಶ್; ನಕ್ಸಲರಿಂದ ಸಿಕ್ಕಿತ್ತು ಎಚ್ಚರಿಕೆ!

ಸಾರಾಂಶ

ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರು ತಮ್ಮ ಹತ್ಯೆಗೂ ಮುನ್ನ ಕೇರಳದಲ್ಲಿ ನಕ್ಸಲರೊಂದಿಗೆ ಗುಪ್ತ ಸಭೆ ನಡೆಸಿದ್ದು, ಆಗ ನಕ್ಸಲರನ್ನು ಮುಖ್ಯವಾಹಿನಿಗೆ ತರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂಬ ಅಂಶ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಯಿಂದ ಬೆಳಕಿಗೆ ಬಂದಿದೆ.

ಬೆಂಗಳೂರು: ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರು ತಮ್ಮ ಹತ್ಯೆಗೂ ಮುನ್ನ ಕೇರಳದಲ್ಲಿ ನಕ್ಸಲರೊಂದಿಗೆ ಗುಪ್ತ ಸಭೆ ನಡೆಸಿದ್ದು, ಆಗ ನಕ್ಸಲರನ್ನು ಮುಖ್ಯವಾಹಿನಿಗೆ ತರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂಬ ಅಂಶ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಯಿಂದ ಬೆಳಕಿಗೆ ಬಂದಿದೆ.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆದೊಯ್ಯಲು ಮುಂದಾಗಿದ್ದ ಗೌರಿ ಅವರ ನಡೆಗೆ ಸಭೆಯಲ್ಲಿ ಕೆಲ ನಕ್ಸಲರು ತೀವ್ರ ವಿರೋಧ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದರು. ಆದರೆ, ಈ ವಿರೋಧದಿಂದಾಗಿಯೇ ಗೌರಿ ಅವರನ್ನು ಹತ್ಯೆ ಮಾಡಲಾಗಿದೆಯೇ ಎಂಬುದರ ಬಗ್ಗೆ ಯಾವುದೇ ಸುಳಿವು ಇದುವರೆಗೆ ಲಭಿಸಿಲ್ಲ ಎಂದು ತಿಳಿದು ಬಂದಿದೆ.

ಮೂರು ತಿಂಗಳ ಹಿಂದೆ ಗೌರಿ ಲಂಕೇಶ್ ಅವರು ಕೇರಳದ ಅಜ್ಞಾತ ಸ್ಥಳವೊಂದರಲ್ಲಿ ನಕ್ಸಲರೊಂದಿಗೆ ಸಭೆ ನಡೆಸಿದ್ದರು. ನಕ್ಸರನ್ನು ಮುಖ್ಯವಾಹಿನಿಗೆ ಕರೆ ತರುವ ಗೌರಿ ಅವರು ಸಭೆಯಲ್ಲಿ ಚರ್ಚಿಸಿದ್ದರು. ಸಭೆಯಲ್ಲಿ ನಕ್ಸಲರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಚರ್ಚೆ ನಡೆದಿತ್ತು. ಮುಖ್ಯ ವಾಹಿನಿಗೆ ಕರೆದೊಯ್ಯುವ ಗೌರಿ ಲಂಕೇಶ್ ಅವರ ನಡೆಗೆ ನಕ್ಸಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಗೌರಿ ಆಪ್ತರೊಬ್ಬರು ಹೇಳಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

‘ಶರಣಾಗುತ್ತಿರುವ ನಕ್ಸಲರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಕ್ಸಲ್ ಪ್ಯಾಕೇಜ್‌ನ್ನು ನೀಡುತ್ತಿಲ್ಲ. ಈ ಹಿಂದೆ ನಕ್ಸಲ್ ಚಳವಳಿಯಲ್ಲಿದ್ದ ರಮೇಶ್, ಕನ್ಯಾಕುಮಾರಿ ಸೇರಿ ನಾಲ್ವರು ಜೈಲಿನಲ್ಲಿದ್ದಾರೆ. ಇದ್ಯಾವುದು ಸರ್ಕಾರಕ್ಕೆ ಗೊತ್ತಿಲ್ಲವೇ? ನಮ್ಮನ್ನು ಮುಖ್ಯವಾಹಿನಿಗೆ ಕರೆ ತರುವ ಮೂಲಕ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ. ಇಲ್ಲದಿದ್ದರೆ, ಪರಿಣಾಮ ಸರಿ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದರು.

ಆದರೂ ಸುಮ್ಮನಾಗದ ಗೌರಿ ಲಂಕೇಶ್ ಅವರು ಸಭೆಯಲ್ಲಿದ್ದ ನಕ್ಸಲರ ಮನವೊಲಿಸಿ ಬಿ.ಜಿ.ಕೃಷ್ಣಮೂರ್ತಿ, ಹೊಸಗದ್ದೆ ಪ್ರಭಾ ಹಾಗೂ ಮುಂಡಗಿರು ಲತಾ ಅವರನ್ನು ಮುಖ್ಯವಾಹಿನಿಗೆ ಕರೆ ತರಲು ಮುಂದಾಗಿದ್ದರು. ನಕ್ಸಲರ ಸೌಲಭ್ಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮನವಿ ಮಾಡುತ್ತೇನೆ ಎಂದು ಸಭೆಯಲ್ಲಿದ್ದ ನಕ್ಸಲರಿಗೆ ಭರವಸೆ ನೀಡಿದ್ದರು. ಅರ್ಧ ದಿನ ನಡೆದ ಸಭೆಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲರ ವಿಚಾರಕ್ಕೆ ಪರ-ವಿರೋಧ ವ್ಯಕ್ತವಾಗಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ರೌಡಿ ಶೀಟರ್‌ಗಳ ಕರೆಸಿ ವಿಚಾರಣೆ: ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್’ಐಟಿ, ರೌಡಿ ಮುಲಾಮ ಸೇರಿದಂತೆ ಹಲವು ರೌಡಿಶೀಟರ್‌ಗಳನ್ನು ಕಚೇರಿಸಿ ಕರೆಸಿ ವಿಚಾರಣೆ ನಡೆಸಲಿದೆ ಎಂದು ಗೊತ್ತಾಗಿದೆ. ರಾಮೇಶ್ವರ, ಕನ್ಯಾಕುಮಾರಿಯಲ್ಲೂ ಶೋಧ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು